Rain Alert: ಮಳೆ ಆರ್ಭಟ ಮತ್ತೆ ಶುರು, ಬೆಂಗಳೂರು ಸೇರಿ ಹಲವೆಡೆ 48 ಗಂಟೆಗಳ ಕಾಲ ಮಳೆ ನಿರೀಕ್ಷೆ...
ಮಳೆ ನಿಂತರೂ ಮರದ ಹನಿ ನಿಂತಿಲ್ಲ ಅನ್ನೋ ಮಾತಿನಂತೆ, ಮುಂಗಾರು & ಹಿಂಗಾರು ಮಳೆ ಮುಕ್ತಾಯವಾಗಿದ್ದರೂ ವರಣನ ಆರ್ಭಟ ಮಾತ್ರ ಕಮ್ಮಿ ಆಗಿಲ್ಲ. ಮಳೆ ಬರುತ್ತಲೇ ಇದೆ, ಪದೇ ಪದೇ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಸಾಕಷ್ಟು ಸಮಸ್ಯೆ ಆಗುತ್ತಿದೆ. ಇಷ್ಟಾದರೂ ಮಳೆ ಆರ್ಭಟಕ್ಕೆ ಇನ್ನೂ ಬ್ರೇಕ್ ಬಿದ್ದಿಲ್ಲ. ಇಂತಹ ಪರಿಸ್ಥಿತಿ ಇರುವಾಗಲೇ ಮಳೆ ಆರ್ಭಟ ಮತ್ತೆ ಶುರು, ಬೆಂಗಳೂರು ಸೇರಿ ಹಲವೆಡೆ 48 ಗಂಟೆಗಳ ಕಾಲ ಮಳೆ ನಿರೀಕ್ಷೆ...
ಕಳೆದ 2 ವರ್ಷಗಳಿಂದ ಮಳೆ ಯಾವ ರೇಂಜ್‌ಗೆ ಸುರಿಯುತ್ತಿದೆ ಅಂದ್ರೆ ತಕ್ಷಣಕ್ಕೆ ಮಳೆ ನಿಂತರೆ ಸಾಕು ದೇವರೆ ಅನ್ನುವಂತೆ ಆಗಿದೆ. ಅದರಲ್ಲೂ ಮಳೆ ಆರ್ಭಟಕ್ಕೆ ಬೆಚ್ಚಿಬಿದ್ದಿರುವ ಕನ್ನಡಿಗರು ಈ ವರ್ಷ ಮತ್ತೆ ಮಳೆ ಬರಬಾರದು ಅಂತಾ ಪ್ರಾರ್ಥನೆ ಮಾಡುವಂತಾಗಿದೆ. ಯಾಕಂದ್ರೆ ಅಷ್ಟು ಪ್ರಮಾಣದಲ್ಲಿ ಮಳೆ ಈಗಾಗಲೇ ಸುರಿದು, ಸಿಕ್ಕಾಪಟ್ಟೆ ಸಮಸ್ಯೆ ಮಾಡಿದೆ. ಆದರೆ ಮಳೆ ಈಗಲೂ ಸೈಲೆಂಟ್ ಆಗುವ ಲಕ್ಷಣ ಕಾಣುತ್ತಿಲ್ಲ, ಇದೇ ರೀತಿಯಾಗಿ ಈಗ ಮತ್ತೆ ಬೆಂಗಳೂರು ಸೇರಿ ಹಲವೆಡೆ 48 ಗಂಟೆಗಳ ಕಾಲ ಮಳೆ ನಿರೀಕ್ಷೆ...

48 ಗಂಟೆಗಳ ಕಾಲ ಮಳೆ.. ಮಳೆ..
ಅಂದಹಾಗೆ ಸೈಕ್ಲೋನ್ ಸೇರಿದಂತೆ ವಿವಿಧ ಕಾರಣಕ್ಕೆ ಮಳೆ ಅರ್ಭಟ ಜೋರಾಗಿತ್ತು. ಇದೇ ರೀತಿ ಮಳೆ ಯಾವುದೇ ರೀತಿ ಬ್ರೇಕ್ ತೆಗೆದುಕೊಳ್ಳದೆ ಸುರಿಯುತ್ತಾ ಇದೆ. ಅದರಲ್ಲೂ ಮಳೆ ಆರ್ಭಟಕ್ಕೆ ಹಲವು ಜಿಲ್ಲೆಗಳಲ್ಲಿ ಬೆಳೆ ನಾಶವಾಗಿ ಹೋಗಿದೆ. ಬಂಗಾಳ ಕೊಲ್ಲಿ ಪ್ರದೇಶದಲ್ಲಿ ಮೊನ್ನೆ ಮೊನ್ನೆ ಚಂಡಮಾರುತ ಸೃಷ್ಟಿಯಾಗಿ ಭಯ ಮೂಡಿತ್ತು. ಕೊನೆಗೆ ಭಾರಿ ಮಳೆ ಕೂಡ ಸುರಿದು ಸಾಕಷ್ಟು ಸಮಸ್ಯೆ ಎದುರಾಗಿತ್ತು. ಆದರೆ ಈಗ ಮತ್ತೆ ಮಳೆ ಅಬ್ಬರಿಸುವುದು ಗ್ಯಾರಂಟಿ ಆಗಿದೆ...












Click it and Unblock the Notifications