Odisha Train Accident: ಕನ್ನಡಿಗರು ಸೇಫ್ ಆಗಿದ್ದಾರೆ,ಸಾವಿನ ಬಗ್ಗೆ ಸುಳ್ಳು ಸುದ್ದಿ ಬೇಡ- ಡಿಐಜಿ ಶಶಿಕುಮಾರ್
ಬೆಂಗಳೂರು, ಜೂನ್ 03: ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಸಂಭವಿಸಿದ ಭೀಕರ ರೈಲು ದುರಂತದಲ್ಲಿ ಕರ್ನಾಟಕದಿಂದ ಹೋಗಿರುವ ರೈಲಿಗೂ ಸಹ ಹಾನಿಯಾಗಿದೆ ಎಂದು ರೈಲ್ವೆ ಡಿಐಜಿ ಶಶಿಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಡಿಶಾ ರೈಲು ಅಪಘಾತದಲ್ಲಿ ಕರ್ನಾಟಕದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಬೈಯಪ್ಪನಹಳ್ಳಿ ಸರ್ಎಂ ವಿಶ್ವೇಶ್ವರಯ್ಯ ಟರ್ಮಿನಲ್-ಹೌರಾ ಎಕ್ಸಪ್ರೆಸ್‌ನ 23 ರೈಲ್ವೆ ಬೋಗಿಗಳ ಪೈಕಿ 3 ಬೋಗಿಗೆ ಮಾತ್ರ ಹಾನಿಯಾಗಿದೆ. ಹಾನಿಯಾದ ಬೋಗಿಯಲ್ಲಿ ಕರ್ನಾಟಕದವರು ಇದ್ದ ಮಾಹಿತಿ ಇಲ್ಲ ಎಂದಿದ್ದಾರೆ.

ನಾಲ್ಕು ಕಡೆ ಹೆಲ್ಪ್ಲೈನ್ ಪ್ರಾರಂಭ ಮಾಡಿದ್ದೇವೆ. ನಿನ್ನೆಯಿಂದಲೂ ರೈಲ್ವೆ ಇಲಾಖೆ ಅಧಿಕಾರಿಗಳು ನಮ್ಮ ಸಂಪರ್ಕದಲ್ಲಿದ್ದಾರೆ. ಇಲ್ಲಿಂದ ಅಧಿಕಾರಿಗಳನ್ನು ಕಳಿಸಲಾಗುತ್ತದೆ. ಕರ್ನಾಟಕ ರಾಜ್ಯದ ಪ್ರಯಾಣಿಕರು ಮೃತಪಟ್ಟ, ಗಾಯಗೊಂಡಿರುವ ಬಗ್ಗೆ ಮಾಹಿತಿ ಇಲ್ಲ. ಕರ್ನಾಟಕದ ಪ್ರಯಾಣಿಕರು ಇದ್ದ ಬೋಗಿಗೆ ಯಾವ ತೊಂದರೆಯಾಗಿಲ್ಲ. ಕರ್ನಾಟಕದ ಯಾವ ಪ್ರಯಾಣಿಕರಿಗೆ ಏನು ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ಸಾವಿನ ಬಗ್ಗೆ ಸುಳ್ಳು ಸುದ್ದಿ ಬೇಡ. ಯಾರು ಕೂಡ ಇದುವರೆಗೆ ಸಾವನಪ್ಪಿರವ ಮಾಹಿತಿ ಇಲ್ಲ. ಭಾರತದ ನಾರ್ತ್ ಈಸ್ಟ್ ಭಾಗದ ಒಂದಷ್ಟು ಜನರು ಮೃತರಾಗಿರುವ ಬಗ್ಗೆ ಮಾಹಿತಿ ಇದೆ. ನಮಗೆ ಯಾವುದೇ ಕರೆ ಬಂದಿಲ್ಲ.ಇನ್ನು ಪ್ರಯಾಣಿಕರ ಟಿಕೆಟ್ ಹಣ ರೀಫಂಡ್ ಮಾಡಲಾಗುತ್ತದೆ ಎಂದು ರೈಲ್ವೆ ಡಿಐಜಿ ಶಶಿಕುಮಾರ್ ತಿಳಿಸಿದ್ದಾರೆ.











Click it and Unblock the Notifications