ಸವದತ್ತಿ ಯಲ್ಲಮ್ಮನಿಗೆ ಉಘೇ ಎಂದು ಎಐಸಿಸಿ ಅಧ್ಯಕ್ಷ ರಾಹುಲ್!

ಬೆಂಗಳೂರು, ಫೆಬ್ರವರಿ 26 : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕ ಪ್ರವಾಸದಲ್ಲಿದ್ದಾರೆ. ಮುಂಬೈ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಲ್ಲಿ ರಾಹುಲ್ ಗಾಂಧಿ ಶನಿವಾರದಿಂದ ಪ್ರವಾಸ ನಡೆಸುತ್ತಿದ್ದಾರೆ. ಇದು ರಾಜ್ಯದಲ್ಲಿ ಅವರ 2ನೇ ಹಂತದ ಪ್ರವಾಸವಾಗಿದೆ.

'ಜನಾಶೀರ್ವಾದ ಯಾತ್ರೆ' ಹೆಸರಿನಲ್ಲಿ ರಾಹುಲ್ ಗಾಂಧಿ ಕರ್ನಾಟಕದಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಅತ್ತ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಸಹ ಕರ್ನಾಟಕದಲ್ಲಿ ಪ್ರವಾಸ ಕೈಗೊಂಡಿರುವುದು ಕರ್ನಾಟಕ ವಿಧಾನಸಭೆ ಚುನಾವಣೆಯ ಮಹತ್ವಕ್ಕೆ ಸಾಕ್ಷಿಯಾಗಿದೆ.

ಚಿತ್ರಗಳು : ರಾಹುಲ್ ಗಾಂಧಿ ಕರ್ನಾಟಕ ಪ್ರವಾಸ

ಈ ಬಾರಿ ರಾಹುಲ್ ಗಾಂಧಿ ಕರ್ನಾಟಕ ಪ್ರವಾಸದ ಕಾರ್ಯಕ್ರಮಗಳ ಪಟ್ಟಿಯಲ್ಲಿ ದೇವಾಲಯಗಳ ಭೇಟಿ ಇರಲಿಲ್ಲ. ಪಕ್ಷವೇ ಬಿಡುಗಡೆ ಮಾಡಿದ್ದ ಕಾರ್ಯಕ್ರಮಗಳ ಪಟ್ಟಿಯಲ್ಲಿ ಯಾವುದೇ ದೇವಾಲಯ, ಮಠಗಳ ಭೇಟಿಯ ಕಾರ್ಯಕ್ರಮ ನಿಗದಿ ಮಾಡಿರಲಿಲ್ಲ.

ಆದರೆ, ಸೋಮವಾರ ರಾಹುಲ್ ಗಾಂಧಿ ವಿವಿಧ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. 2ನೇ ಹಂತದ ಕಾರ್ಯಕ್ರಮದ ಕೊನೆಯ ದಿನವಾದ ಇಂದು ರಾಹುಲ್ ಗಾಂಧಿ ಮಠ, ದೇವಾಲಯಗಳಿಗೆ ಭೇಟಿ ಕೊಟ್ಟಿದ್ದಾರೆ, ಅದರ ವಿವರ ಚಿತ್ರಗಳು ಇಲ್ಲಿವೆ ನೋಡಿ...

ಗೊಡಚಿ ವೀರಭದ್ರಸ್ವಾಮಿ

ಗೊಡಚಿ ವೀರಭದ್ರಸ್ವಾಮಿ

ರಾಹುಲ್ ಗಾಂಧಿ ಸೋಮವಾರ ಬೆಳಗ್ಗೆ ಬೆಳಗಾವಿಯ ರಾಮದುರ್ಗದಲ್ಲಿನ ಗೊಡಚಿ ವೀರಭದ್ರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದರು. ದೇವರ ದರ್ಶನ ಮಾಡಿ ಆಶೀರ್ವಾದ ಪಡೆದರು.

ಸವದತ್ತಿ ಯಲ್ಲಮ್ಮನಿಗೆ ಉಘೇ

ಸವದತ್ತಿ ಯಲ್ಲಮ್ಮನಿಗೆ ಉಘೇ

ರಾಹುಲ್ ಗಾಂಧಿ ಅವರು ಬೆಳಗಾವಿ ಜಿಲ್ಲೆಯ ಸವದತ್ತಿಯ ಪ್ರಸಿದ್ಧ ಶ್ರೀ ಯಲ್ಲಮ್ಮ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಧಾರವಾಡದ ಮುರುಘಾ ಮಠ

ಧಾರವಾಡದ ಮುರುಘಾ ಮಠ

ರಾಹುಲ್ ಗಾಂಧಿ ಅವರು ಸೋಮವಾರ ಸಂಜೆ ಧಾರವಾಡದ ಮುರುಘಾ ಮಠಕ್ಕೆ ಭೇಟಿ ನೀಡಿದ್ದರು.

ದರ್ಗಾಕ್ಕೆ ಭೇಟಿ

ದರ್ಗಾಕ್ಕೆ ಭೇಟಿ

ಫೆ.9ರಿಂದ ಮೊದಲ ಹಂತದ ರಾಜ್ಯ ಪ್ರವಾಸ ಕೈಗೊಂಡಿದ್ದ ರಾಹುಲ್ ಗಾಂಧಿ ಕಲಬುರಗಿಯ ಖ್ವಾಜಾ ಬಂದೇ ನವಾಜ್ ದರ್ಗಾಕ್ಕೆ ಭೇಟಿ ನೀಡಿದ್ದರು.

ಕನಕಗಿರಿ ದೇವಾಲಯಕ್ಕೆ ಭೇಟಿ

ಕನಕಗಿರಿ ದೇವಾಲಯಕ್ಕೆ ಭೇಟಿ

ಕೊಪ್ಪಳ ಜಿಲ್ಲೆಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಕನಕಾಚಲ ಲಕ್ಷ್ಮೀ ನರಸಿಂಹ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+