ಕಾಂಗ್ರೆಸ್ ನ ತಂತ್ರಗಳಿಗೆ ಕರ್ನಾಟಕದ ಜನ ಬಗ್ಗೋಲ್ಲ: ಪಿಯೂಶ್ ಗೋಯಲ್

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 10: "ಕರ್ನಾಟಕದ ಜನರು ಬುದ್ಧಿವಂತರು. ಅವರು ಕಾಂಗ್ರೆಸ್ಸಿನ ಇಂಥ ತಂತ್ರಗಳಿಗೆ ಬಗ್ಗುವುದಿಲ್ಲ" ಎಂದು ರಾಹುಲ್ ಗಾಂಧಿಯವರ ಕರ್ನಾಟಕ ಭೇಟಿಯನ್ನು ಕೇಂದ್ರ ರೈಲ್ವೇ ಸಚಿವ, ಬಿಜೆಪಿ ಮುಖಂಡ ಪಿಯೂಶ್ ಗೋಯಲ್ ಟೀಕಿಸಿದ್ದಾರೆ.

'ಅವರು ಕರ್ನಾಟಕಕ್ಕೆ ಧಾರ್ಮಿಕ ಪ್ರವಾಸಕ್ಕಾಗಿ ಹೋಗಿದ್ದಾರೆ ಎಂದು ಕೇಳ್ಪಟ್ಟೆ. ಆದರೆ ಕರ್ನಾಟಕದ ಜನರು ಬುದ್ಧಿವಂತರು. ಅವರು ಇಂಥ ತಂತ್ರಗಳಿಂದೆಲ್ಲ ಆಕರ್ಷಿತರಾಗುವುದಿಲ್ಲ. ರಾಹುಲ್ ಗಾಮಧಿಯವರ ಭೇಟಿ ಕರ್ನಾಟಕ ರಾಜ್ಯ ಸರ್ಕಾರದ ಪಾಪಗಳನ್ನು ತೊಳೆದುಬಿಡುವುದಿಲ್ಲ' ಎಂದು ಅವರು ಹೇಳಿದ್ದಾರೆ.

LIVE : ಹೊಸಪೇಟೆಯಲ್ಲಿ ರಾಹುಲ್ ಗಾಂಧಿ ಚುನಾವಣಾ ಅಬ್ಬರ

ಕಾಂಗ್ರೆಸ್ ಅಧ್ಯಕ್ಷ ರಾಹಲ್ ಗಾಂಧಿಯರು ಇಂದಿನಿಂದ ನಾಲ್ಕು ದಿನಗಳ ಕಾಲ ಹೈ-ಕ ಮತ್ತು ಉತ್ತರ ಕರ್ನಾಟಕ ಭಾಗದ ಕೆಲವು ಜಿಲ್ಲೆಗಳಿಗೆ ಭೇಟಿ ನೀಡಿ, ಜನ ಆಶೀರ್ವಾದ ಯಾತ್ರೆ ಆರಂಭಿಸಿದ್ದಾರೆ. ಕರ್ನಾಟಕದಲ್ಲಿ ಈ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಯವರ ಈ ಭೇಟಿ ಕಾಂಗ್ರೆಸ್ ನಾಯಕರಲ್ಲಿ ಹೊಸ ಉತ್ಸಾಹ ಮೂಡಿಸಿದೆ.

Rahul Gandhi visit Karnataka: Leaders reactions

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
I heard he is coming for religious tourism but I think people of Karnataka are smart, they know everything & will not be impressed by these tactics. It will certainly not wash away the sins of the state govt: Piyush Goyal on Rahul Gandhi's visit to Karnataka

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ