ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಸೇವಾದಳಕ್ಕೆ ಸಂಘಟನೆಯ ಜವಾಬ್ದಾರಿ ನೀಡಿದ ರಾಹುಲ್

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್.30: ಎಐಸಿಸಿ ಅಧ್ಯಕ್ಷ, ಭವಿಷ್ಯದ ಪ್ರಧಾನಿ ಅಭ್ಯರ್ಥಿ ಅಂತಲೇ ಹೇಳುತ್ತಿರುವ ರಾಹುಲ್ ಗಾಂಧಿ ಅವರು ಮುಂದಿನ ಲೋಕಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸಿದ್ದು, ತಳಮಟ್ಟದಿಂದ ಕಾಂಗ್ರೆಸ್‌ನ್ನು ಸಂಘಟಿಸಲು ಕಾಂಗ್ರೆಸ್‌ನ ಸೇವಾದಳಕ್ಕೆ ಜವಬ್ದಾರಿ ನೀಡಿರುವುದು ಬೆಳಕಿಗೆ ಬಂದಿದೆ.

ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ನಾಗಲೋಟ ಬೀರಿ ಕೇಂದ್ರದಲ್ಲಿ ಅಧಿಕಾರ ಹಿಡಿಯುವ ಕನಸು ಕಾಣುತ್ತಿದೆ. ಜತೆಗೆ ಇತರೆ ಪ್ರಾದೇಶಿಕ ಪಕ್ಷಗಳನ್ನು ತನ್ನೊಂದಿಗೆ ಕರೆದೊಯ್ಯುವ ಕಾರ್ಯಕ್ಕೂ ಮುಂದಾಗಿರುವುದು ಕಂಡು ಬರುತ್ತಿದೆ.

ಲೋಕಸಭೆ ಚುನಾವಣೆ ಗೆಲ್ಲಲು ಬಿಜೆಪಿ ತಂತ್ರ ಬಳಸುತ್ತಿರುವ ಕಾಂಗ್ರೆಸ್‌!ಲೋಕಸಭೆ ಚುನಾವಣೆ ಗೆಲ್ಲಲು ಬಿಜೆಪಿ ತಂತ್ರ ಬಳಸುತ್ತಿರುವ ಕಾಂಗ್ರೆಸ್‌!

ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳನ್ನು ಹೊರಗಿಟ್ಟು ಹಲವು ಮುಖಂಡರು ತೃತೀಯ ಶಕ್ತಿಯನ್ನು ದೇಶದಲ್ಲಿ ಬೆಳೆಸುವ ಚಿಂತೆ ಮಾಡುತ್ತಿರುವಾಗಲೇ ತೃತೀಯ ಶಕ್ತಿಯನ್ನು ತನ್ನತ್ತ ಒಲಿಸಿಕೊಂಡು ಬಿಜೆಪಿಯನ್ನು ಸದೆಬಡಿಯುವ ಮೂಲಕ ಮೋದಿ ಆಡಳಿತಕ್ಕೆ ಬ್ರೇಕ್ ಹಾಕಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತೀರ್ಮಾನ ಮಾಡಿದ್ದಾರೆ.

ಇನ್ನು ಮೂರು ತಿಂಗಳಲ್ಲಿ ಏನಾಗುತ್ತದೆ? ರಾಹುಲ್ ಮಾತಿನ ಅರ್ಥವೇನು?ಇನ್ನು ಮೂರು ತಿಂಗಳಲ್ಲಿ ಏನಾಗುತ್ತದೆ? ರಾಹುಲ್ ಮಾತಿನ ಅರ್ಥವೇನು?

ಎಲ್ಲವೂ ಸರಿ ಹೋದರೆ ಬಿಜೆಪಿ ವಿರುದ್ಧ ಸೆಣೆಸಲು ಕಾಂಗ್ರೆಸ್‌ನೊಂದಿಗೆ ಎಲ್ಲ ಪ್ರಾದೇಶಿಕ ಪಕ್ಷಗಳು ಕೈಜೋಡಿಸಿದರೂ ಅಚ್ಚರಿ ಪಡಬೇಕಾಗಿಲ್ಲ. ಸದ್ಯ ಕಾಂಗ್ರೆಸ್‌ಗೆ ಬಿಜೆಪಿ ಆಡಳಿತವನ್ನು ಕೊನೆಗೊಳಿಸುವ ಅನಿವಾರ್ಯತೆಯಿದ್ದು ಅದು ಈಗ ಏನು ಬೇಕಾದರೂ ಮಾಡಲು ತಯಾರಿದೆ. ಮುಂದೆ ಓದಿ...

 ಭರ್ಜರಿ ತಯಾರಿ

ಭರ್ಜರಿ ತಯಾರಿ

ತೃತೀಯ ರಂಗದ ನಾಯಕರ ಸಖ್ಯ ಬೆಳೆಸಿ ಅವರೊಂದಿಗೆ ಕೈಜೋಡಿಸುವ ಮೂಲಕ ಬಿಜೆಪಿ ವಿರುದ್ಧ ಮುಗಿಬೀಳುವ ಎಲ್ಲ ರೀತಿಯ ತಯಾರಿಗಳನ್ನು ರಾಹುಲ್ ಗಾಂಧಿ ಮಾಡುತ್ತಿದ್ದಾರೆ. ಮುಂದಿನ ಲೋಕಸಭಾ ಚುನಾವಣೆ ಬಿಜೆಪಿಗೆ ಅಷ್ಟು ಸುಲಭವಾಗಿ ಉಳಿದಿಲ್ಲ. ಮೋದಿ ಮೇನಿಯಾ ಈ ಬಾರಿಯೂ ಕೆಲಸ ಮಾಡುತ್ತದೆ ಎಂದು ಹೇಳಲಾಗುತ್ತಿಲ್ಲ.

ಐದು ವರ್ಷಗಳ ಮೋದಿ ಆಡಳಿತದಲ್ಲಿ ಕಾಂಗ್ರೆಸ್‌ಗೆ ಬೊಟ್ಟು ಮಾಡಿ ತೋರಿಸಲು ಅಂತಹ ಹಗರಣಗಳೇನು ಸಿಗುತ್ತಿಲ್ಲ. ಹೀಗಾಗಿ ಸಿಕ್ಕಿದ ಸಣ್ಣಪುಟ್ಟ ವಿಚಾರವನ್ನೇ ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ರಾಜಕೀಯ ಸಮರ ಸಾರುವುದು ಅನಿವಾರ್ಯವಾಗಿದೆ. ಅದನ್ನು ರಾಹುಲ್ ಗಾಂಧಿ ಮಾಡುತ್ತಲೇ ಬಂದಿದ್ದಾರೆ ಎನ್ನುವುದು ಇತ್ತೀಚೆಗಿನ ಅವರ ಭಾಷಣಗಳಲ್ಲಿ ಗೊತ್ತಾಗುತ್ತಿದೆ.

ಆದರೆ ಹೇಳಿದ್ದನ್ನೇ ಹೇಳಿದರೆ ಜನರಿಗೂ ಬೋರ್ ಆದರೂ ಆಗಬಹುದು. ಅದು ಚುನಾವಣೆ ವೇಳೆಗೆ ಹಳಸಿ ಹೋದರೂ ಅಚ್ಚರಿಪಡಬೇಕಾಗಿಲ್ಲ.

 ತಳಮಟ್ಟದಿಂದಲೇ ಕಟ್ಟಬೇಕಾದ ಅನಿವಾರ್ಯ

ತಳಮಟ್ಟದಿಂದಲೇ ಕಟ್ಟಬೇಕಾದ ಅನಿವಾರ್ಯ

ಕಾಂಗ್ರೆಸ್‌ನಿಂದ ಮುಂದಿನ ಪ್ರಧಾನಿ ರಾಹುಲ್ ಗಾಂಧಿ ಎಂಬುದಾಗಿ ಘೋಷಣೆ ಮಾಡಲಾಗಿದೆ. ಆದರೆ ಇವತ್ತು ತೃತೀಯ ರಂಗ ಅಂಥ ಹೇಳುತ್ತಿರುವ ನಾಯಕರ ಪೈಕಿ ಹೆಚ್ಚಿನವರು ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ.

ಹೀಗಿರುವಾಗ ಕಾಂಗ್ರೆಸ್ ಜೊತೆಗೆ ಕೈಜೋಡಿಸಲು ಮುಂದಾಗುತ್ತಾರಾ ಎಂಬ ಸಂಶಯವೂ ಇದೆ. ಒಂದು ವೇಳೆ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಎಂಬ ಒಂದೇ ಕಾರಣಕ್ಕೆ ಎಲ್ಲರೂ ಒಂದಾಗಿ ಅವರ ಅದೃಷ್ಟ ಫಲಿಸಿದರೂ ಕಚ್ಚಾಟ ನಿಲ್ಲುವುದಿಲ್ಲ.

ಇನ್ನು ರಾಹುಲ್ ಗಾಂಧಿ ಕೂಡ ಮುಂದಿನ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈಗಿನಿಂದಲೇ ಪಕ್ಷವನ್ನು ಕಟ್ಟುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಅವರಿಗೂ ಪಕ್ಷವನ್ನು ತಳಮಟ್ಟದಿಂದಲೇ ಕಟ್ಟ ಬೇಕಾದ ಅನಿವಾರ್ಯತೆ ಬಂದೊದಗಿದೆ.

ಕುಮಾರಸ್ವಾಮಿ ಸಂಪುಟ ಸೇರುವ ಕಾಂಗ್ರೆಸ್ ಶಾಸಕರ ಪಟ್ಟಿಕುಮಾರಸ್ವಾಮಿ ಸಂಪುಟ ಸೇರುವ ಕಾಂಗ್ರೆಸ್ ಶಾಸಕರ ಪಟ್ಟಿ

 ಕಾಂಗ್ರೆಸ್ ಸೇವಾದಳ ಸಕ್ರಿಯ

ಕಾಂಗ್ರೆಸ್ ಸೇವಾದಳ ಸಕ್ರಿಯ

ರಾಹುಲ್ ಗಾಂಧಿ ಅವರು ಪ್ರತಿ ತಿಂಗಳ ಕೊನೆಯ ಭಾನುವಾರ ಕಾಂಗ್ರೆಸ್ ಕಚೇರಿಗಳಲ್ಲಿ ಸೇವಾದಳದ ವತಿಯಿಂದ ಧ್ವಜಾರೋಹಣ ನೆರವೇರಿಸಿ ಪಕ್ಷದ ಸಂಘಟನೆಯ ಸಭೆ ಮಾಡಲು ಪಕ್ಷದ ಎಲ್ಲ ನಾಯಕರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಜತೆಗೆ ಪಕ್ಷದ ಚುನಾಯಿತ ಸದಸ್ಯರು, ಮುಖಂಡರು ಮತ್ತು ಕಾರ್ಯಕರ್ತರು ಒಂದೆಡೆ ಸೇರಿ ಚರ್ಚಿಸಿ ಪಕ್ಷ ಸಂಘಟನೆ ಮಾಡಲು ಮುಂದಾಗಬೇಕಂತೆ.

ಪಕ್ಷದ ಚುನಾಯಿತರು ಮತ್ತು ಮುಖಂಡರು ಹಾಗೂ ಪದಾಧಿಕಾರಿಗಳು ತಪ್ಪದೆ ತಿಂಗಳ ಕೊನೆಯ ಭಾನುವಾರ ಕಚೇರಿಗೆ ಬಂದು ತಮ್ಮ ಸಲಹೆ ಸೂಚನೆಗಳನ್ನು ನೀಡಲೇಬೇಕೆಂಬ ಫರ್ಮಾನು ಹೊರಡಿಸಿದ್ದಾರಂತೆ.

ರಾಹುಲ್ ಗಾಂಧಿಯವರ ಈ ಸೂಚನೆಗೆ ಬೆವೆತಿರುವ ಕಾಂಗ್ರೆಸ್ ಮುಖಂಡರು ಅದಾಗಲೇ ತಾಲೂಕು ಮಟ್ಟದಿಂದಲೇ ಸಭೆ ಮಾಡಿ ಪಕ್ಷ ಸಂಘಟಿಸಲು ಮುಂದಾಗುತ್ತಿರುವುದು ಕಂಡು ಬಂದಿದೆ. ಇದರಿಂದ ಕಾಂಗ್ರೆಸ್ ಸೇವಾದಳ ಸಕ್ರಿಯವಾಗುತ್ತಿರುವುದು ಕಾಣಿಸುತ್ತಿದೆ.

 ರಾಹುಲ್ ತಂತ್ರ ಫಲಿಸುತ್ತಾ?

ರಾಹುಲ್ ತಂತ್ರ ಫಲಿಸುತ್ತಾ?

ಇನ್ನು ಚುನಾವಣೆಗೆ ಕೆಲವು ತಿಂಗಳು ಬಾಕಿಯಿದೆ ಹೀಗಾಗಿ ಪ್ರತಿಪಕ್ಷಗಳು ಮತ್ತು ನಾಯಕರು ಎಲ್ಲವನ್ನು ರಾಜಕೀಯವಾಗಿ ಮಾತ್ರವಲ್ಲ ಎಲ್ಲ ವಿಚಾರಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ನೋಡುತ್ತಿದ್ದಾರೆ.

ಹೀಗಿರುವಾಗ ತಡವಾಗಿಯಾದರೂ ರಾಹುಲ್ ಗಾಂಧಿ ಅವರಿಗೆ ತಳಮಟ್ಟದಿಂದ ಪಕ್ಷವನ್ನು ಸಂಘಟಿಸಬೇಕೆಂಬ ಜ್ಞಾನೋದಯವಾಯಿತಲ್ಲ ಎಂಬುದಷ್ಟೆ ಖುಷಿಯ ವಿಚಾರ. ಆದರೆ ರಾಜ್ಯದಲ್ಲಿ ಮೈತ್ರಿ ಸರ್ಕಾರವಿದ್ದು ಲೋಕಸಭಾ ಚುನಾವಣೆಯನ್ನು ಯಾವ ರೀತಿಯಲ್ಲಿ ಎದುರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ರಾಹುಲ್ ಗಾಂಧಿಯವರ ತಂತ್ರ ಫಲಿಸುತ್ತಾ ಅದಕ್ಕೆ ದೇವೇಗೌಡರು ಬೆನ್ನೆಲುಬಾಗಿ ನಿಲ್ಲುತ್ತಾರಾ ಹೀಗೆ ಹಲವು ಪ್ರಶ್ನೆಗಳು ಉದ್ಭವವಾಗುತ್ತಲೇ ಹೋಗುತ್ತಿದೆ.

English summary
Rahul Gandhi is preparing for the next Lok Sabha election. Congress is being organized at the ground level.So it has come to light that Congress several responsible for the service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X