'ರಾಹುಲ್‌ ಮಾತು ನಿರಾಸೆ ಹುಟ್ಟಿಸುತ್ತಿವೆ, ಅವರಿನ್ನೂ ಅಪ್ರಬುದ್ಧರು'

Recommended Video

      ರಾಹುಲ್ ಗಾಂಧಿಗೆ ರಾಜಕೀಯ ಜ್ಞಾನ ಇಲ್ಲ ಅಂದ್ರು ಎಚ್ ಡಿ ದೇವೇಗೌಡ್ರು | Oneindia kannada

      ರಾಮನಗರ, ಮಾರ್ಚ್ 25 : 'ರಾಹುಲ್ ಗಾಂಧಿ ಅವರಿಗೆ ರಾಜಕೀಯದ ಪೂರ್ಣ ಅರಿವಿಲ್ಲ. ಇನ್ನೊಬ್ಬರು ಕಳುಹಿಸಿದ ಚೀಟಿ ಹಿಡಿದು ಮಾತನಾಡುವುದು ಅವರ ಕೆಲಸ' ಎಂದು ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಲೇವಡಿ ಮಾಡಿದ್ದಾರೆ.

      ಭಾನುವಾರ ಮಾಗಡಿಯಲ್ಲಿ ಜೆಡಿಎಸ್‌ ಪಕ್ಷದ ಕುಮಾರಪರ್ವ ಸಮಾವೇಶ ನಡೆಯಿತು. ಸಮಾವೇಶದಲ್ಲಿ ಎಚ್.ಡಿ.ದೇವೇಗೌಡರು ಮಾತನಾಡಿದರು. 'ಕಾಂಗ್ರೆಸ್ ನಾಯಕರು ಈಗಾಗಲೇ ಸೋಲಿನ ಭೀತಿಯಿಂದಾಗಿ ಹತಾಶರಾಗಿ ಇಲ್ಲದ ಆರೋಪ ಮಾಡುತ್ತಿದ್ದಾರೆ' ಎಂದರು.

      'ರಾಹುಲ್ ಗಾಂಧಿ ಜೆಡಿಎಸ್‌ ಬಗ್ಗೆ ಆರೋಪಿಸುವ ಮುನ್ನ ದೇಶದಲ್ಲಿ ಕಾಂಗ್ರೆಸ್ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು' ಎಂದು ಟೀಕಿಸಿದರು.

      deve gowda

      'ಸೋನಿಯಾ ಗಾಂಧಿ ಒಂದೆಡೆ ಜಾತ್ಯತೀತ ಶಕ್ತಿಯಗಳನ್ನು ಒಗ್ಗೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮತ್ತೊಂದು ಕಡೆ ರಾಹುಲ್‌ರ ಮಾತುಗಳು ನಿರಾಸೆ ಹುಟ್ಟಿಸುತ್ತಿವೆ. ಅವರಿನ್ನೂ ಅಪ್ರಬುದ್ಧರು' ಎಂದು ವಾಗ್ದಾಳಿ ನಡೆಸಿದರು.

      'ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ಯಾರ ಮನೆ ಬಾಗಿಲಿಗೂ ಹೋಗುವುದಿಲ್ಲ. ಯಾವ ಕಾರಣಕ್ಕೂ ಬಿಜೆಪಿ ಜೊತೆ ಕೈ ಜೋಡಿಸುವ ಪ್ರಶ್ನೆಯೇ ಇಲ್ಲ' ಎಂದು ದೇವೇಗೌಡರು ಸ್ಪಷ್ಟಪಡಿಸಿದರು.

      ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, 'ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯರ ಪಂಜರದ ಒಳಗಿನ ಗಿಳಿ ಇದ್ದಂತೆ. ಜೆಡಿಎಸ್ ಸಂಘ ಪರಿವಾರದ ಅಂಗ ಎಂಬುದು ಸಿದ್ದರಾಮಯ್ಯ ಹೇಳಿಕೆ. ಅದನ್ನು ರಾಹುಲ್ ಪುನರುಚ್ಚರಿಸಿದ್ದಾರೆ' ಎಂದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+