ನರೇಂದ್ರ ಮೋದಿ ಅವರೇ ನುಡಿದಂತೆ ನಡೆಯಿರಿ : ರಾಹುಲ್ ವ್ಯಂಗ್ಯ

ಬಾಗಲಕೋಟೆ, ಫೆಬ್ರವರಿ 25 : ಕರ್ನಾಟಕ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಚಿಕ್ಕಪಡಸಲಗಿ ಬ್ಯಾರೇಜ್‌ಗೆ ಬಾಗಿನ ಅರ್ಪಿಸಿದರು. ಬಳಿಕ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದರು.

ಚಿತ್ರಗಳು : ವಿಜಯಪುರದಲ್ಲಿ ರಾಹುಲ್ ಪ್ರವಾಸ

ಬಾಗಲಕೋಟೆ ಜಿಲ್ಲೆಯ ಚಿಕ್ಕಪಡಸಲಗಿಯಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಬಸವಣ್ಣನವರ ವಚನ ಹೇಳುವ ಮೂಲಕ ರಾಹುಲ್ ಗಾಂಧಿ ಭಾಷಣ ಆರಂಭಿಸಿದರು. 'ದೇಶದ ಮೊದಲ ಸಂಸತ್ತು ಅನುಭವ ಮಂಟಪ, ಕಳೆದ ಬಾರಿ ರಾಜ್ಯಕ್ಕೆ ಆಗಮಿಸಿದಾಗ ಅಲ್ಲಿಗೆ ಭೇಟಿ ನೀಡಿದ್ದೆ' ಎಂದು ಹೇಳಿದರು.

ರಾಹುಲ್ ಗಾಂಧಿ ಭಾಷಣದ ಮುಖ್ಯಾಂಶಗಳು ಇಲ್ಲಿವೆ..

Feb 25, 2018, 11:43 am IST

ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿ ಎಂದು ಕೇಳಲು ಆಗಮಿಸಿದ್ದಾರೆ. ಒಂದು ಹಂತದ ರಾಜ್ಯ ಪ್ರವಾಸ ಮುಗಿಸಿದ್ದಾರೆ.
Feb 25, 2018, 11:42 am IST

ಸಮಾವೇಶ ಉದ್ದೇಶಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ
Feb 25, 2018, 11:34 am IST

ಕರ್ನಾಟಕಕ್ಕೆ ನರೇಂದ್ರ ಮೋದಿ ಅವರು ಬಂದಾಗ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಆದರೆ, ಅಕ್ಕಪಕ್ಕದಲ್ಲಿ ಯಾರು ಕುಳಿತಿದ್ದಾರೆ ಎಂಬುದನ್ನು ನೋಡುವುದಿಲ್ಲ.
Feb 25, 2018, 11:33 am IST

ಆದರೆ, ನರೇಂದ್ರ ಮೋದಿ ಅವರು ಜನರ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಹೇಳಿದ್ದರು. ಯಾರ ಖಾತೆಗೂ ಇನ್ನೂ ಹಣ ಬಂದಿದಲ್ಲ.
Feb 25, 2018, 11:32 am IST

ದೇಶದ 2 ಲಕ್ಷ ಯುವ ಜನರಿಗೆ ಉದ್ಯೋಗ ನೀಡುವುದಾಗಿ ಹೇಳಿದ್ದರು. ಆದರೆ, ಸಂಸತ್‌ನಲ್ಲಿ ಈ ಬಗ್ಗೆ ಪ್ರಶ್ನೆ ಮಾಡಿದೆವು. ಮೋದೀಜಿ ನುಡಿದಂತೆ ನಡೆಯಿರಿ ಎಂದು ರಾಹುಲ್ ವ್ಯಂಗ್ಯವಾಡಿದರು.
Feb 25, 2018, 11:32 am IST

ಬ್ಯಾರೇಜ್ ಗೆ ಬಾಗಿನ ಅರ್ಪಣೆ
Feb 25, 2018, 11:29 am IST

ನರೇಂದ್ರ ಮೋದಿ ಕರ್ನಾಟಕಕ್ಕೆ ಆಗಮಿಸಿ ದೊಡ್ಡ ದೊಡ್ಡ ಭಾಷಣ ಮಾಡುತ್ತಾರೆ. ಬಸವಣ್ಣ ಹೇಳಿದ್ದರು ನುಡಿದಂತೆ ನಡೆ ಎಂದು ಹೇಳಿದ್ದರು.
Feb 25, 2018, 11:29 am IST

ಭಾರತದ ಸಂವಿಧಾನ ಬಸವಣ್ಣನವರ ಆಶಯದಂತೆ ರಚನೆಯಾಗಿದೆ. ಅನುಭವ ಮಂಟದ ದೇಶದ ಮೊದಲ ಸಂಸತ್ತು ಎಂದು ರಾಹುಲ್ ಗಾಂಧಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+