ರಾಘವೇಶ್ವರ ಶ್ರೀಗಳಿಂದ ಹರೇರಾಮ ಮೊಬೈಲ್ App ಬಿಡುಗಡೆ

ಬೆಂಗಳೂರು, ಜುಲೈ 31 : ಹೊಸನಗರದ ರಾಮಚಂದ್ರಾಪುರ ಮಠದ ಮೊಬೈಲ್ ಅಪ್ಲಿಕೇಶನ್ ಲೋಕಾರ್ಪಣೆಗೊಂಡಿದೆ. ಮಠದ ನಿತ್ಯದ ಕಾರ್ಯಕ್ರಮಗಳ ವಿವರ ಸೇರಿದಂತೆ ಹಲವಾರು ಮಾಹಿತಿ ಭಕ್ತರಿಗೆ ಸಿಗುವಂತೆ ಅಪ್ಲಿಕೇಶನ್‌ ರೂಪಿಸಲಾಗಿದೆ.

ಬೆಂಗಳೂರಿನ ಗಿರಿನಗರದಲ್ಲಿರುವ ಮಠದಲ್ಲಿ ಶುಕ್ರವಾರದಿಂದ ರಾಘವೇಶ್ವರ ಭಾರತೀ ಸ್ವಾಮೀಜಿಗಳ ಚಾತುರ್ಮಾಸ್ಯ ಆರಂಭವಾಗಿದೆ. ಮಠದಲ್ಲಿ ಇಂದು ನಡೆದ ಸರಳ ಸಮಾರಂಭದಲ್ಲಿ ಶ್ರೀಗಳು 'ಹರೇ ರಾಮ್' ಮೊಬೈಲ್ ಅಪ್ಲಿಕೇಶನ್ ಲೋಕಾರ್ಪಣೆ ಮಾಡಿದರು. [ಮಾಧ್ಯಮಗಳೇ ಹೀಗೆ ಮಾಡಿದ್ರೆ? ಸ್ವಲ್ಪ ಯೋಚಿಸಿ ಸ್ವಾಮಿ]

ramachandrapura math

ಈ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಮಠದ ನಿತ್ಯದ ಕಾರ್ಯಕ್ರಮಗಳ ವಿವರ, ಸ್ವಾಮೀಜಿಗಳ ಆಶೀರ್ವಚನ, ಫೋಟೋ, ವಿಡಿಯೋಗಳು ಲಭ್ಯ. ಗೂಗಲ್ ಪ್ಲೇ ಸ್ಟೋರ್‌ಗೆ ಭೇಟಿ ನೀಡುವ ಮೂಲಕ ಹರೇ ರಾಮ್ ಅಪ್ಲಿಕೇಶನ್‌ನನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

ಈ ಅಪ್ಲಿಕೇಶನ್‌ನನ್ನು ವಿದ್ವಾನ್ ಜಗದೀಶ್ ಶರ್ಮಾ, ಕೃಷ್ಣ ಪ್ರಸಾದ್, ಡಾ.ಯು.ಬಿ.ಪವಜನ, ಶ್ರೀ ಹರ್ಷ ಪೆರ್ಲ ಮುಂತಾದವರು ಸೇರಿ ಅಭಿವೃದ್ಧಿ ಪಡಿಸಿದ್ದಾರೆ. [APP ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ]

ಚಾತುರ್ಮಾಸ್ಯ ಆರಂಭ : ರಾಘವೇಶ್ವರ ಭಾರತೀ ಸ್ವಾಮೀಜಿಗಳ ಚಾತುರ್ಮಾಸ್ಯ ಇಂದಿನಿಂದ ಆರಂಭವಾಗಿದೆ. ಬೆಂಗಳೂರಿನ ಗಿರಿನಗರದಲ್ಲಿರುವ ಮಠದಲ್ಲಿ ಜುಲೈ31ರಿಂದ ಸೆ.28 ರವರೆಗೆ ಚಾತುರ್ಮಾಸ್ಯ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+