ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಗಳ ಪ್ರಕರಣ, ವಿಚಾರಣೆಯಿಂದ ಹಿಂದೆ ಸರಿದ ಜಡ್ಜ್

|
Google Oneindia Kannada News

ಬೆಂಗಳೂರು, ನ.14 : ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಯವರ ವೈದ್ಯಕೀಯ ಪರೀಕ್ಷೆ ವಿವಾದಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆಯಿಂದ ಹೈಕೋರ್ಟ್‌ ನ್ಯಾಯಮೂರ್ತಿ ಕೆ.ಎನ್‌.ಫ‌ಣೀಂದ್ರ ಅವರು ಹಿಂದೆ ಸರಿದಿದ್ದು, ಪ್ರಕರಣದ ವಿಚಾರಣೆ ಮತ್ತೊಂದು ಪೀಠಕ್ಕೆ ವರ್ಗಾವಣೆಯಾಗಲಿವೆ.

ರಾಘವೇಶ್ವರ ಶ್ರೀಗಳ ವಿರುದ್ಧ ಅತ್ಯಾಚಾರದ ಆರೋಪ ಮಾಡಿರುವ ಪ್ರೇಮಲತಾ ದಿವಾಕರ್ ಅವರು, ನ್ಯಾಯಪೀಠದ ಬಗ್ಗೆ ಆರೋಪಗಳನ್ನು ಮಾಡಿ ರಾಷ್ಟ್ರಪತಿಗಳಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯುತ್ತಿರುವುದಾಗಿ ನ್ಯಾ.ಫಣೀಂದ್ರ ಅವರು ಹೇಳಿದ್ದಾರೆ. [ಸಂದರ್ಶನದಲ್ಲಿ ಪ್ರೇಮಲತಾ ದಿವಾಕರ್ ಹೇಳಿದ್ದೇನು?]

Raghaveshwara Swamiji

ರಾಘವೇಶ್ವರ ಶ್ರೀಗಳ ವೈದ್ಯಕೀಯ ಪರೀಕ್ಷೆಗೆ ತಡೆ ನೀಡಿದ್ದ ಅರ್ಜಿಯ ವಿಚಾರಣೆಯನ್ನು ಗುರುವಾರ ನ್ಯಾ.ಕೆ.ಎನ್‌.ಫ‌ಣೀಂದ್ರ ಅವರಿದ್ದ ಏಕ ಸದಸ್ಯ ಪೀಠ ನಡೆಸಬೇಕಾಗಿತ್ತು. ಆದರೆ, ವಿಚಾರಣೆ ವೇಳೆ ಸ್ವಾಮೀಜಿ ಪರ ವಕೀಲರು, ಪೀಠದ ವಿರುದ್ಧ ಪ್ರೇಮಲತಾ ಅವರು ಆರೋಪಗಳನ್ನು ಮಾಡಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ ಎಂದು ನ್ಯಾಯಮೂರ್ತಿಗಳಿಗೆ ತಿಳಿಸಿದರು. [ಆರೋಪಗಳನ್ನು ಎದುರಿಸಲು ಸಿದ್ಧ ರಾಘವೇಶ್ವರ ಶ್ರೀ]

ಪ್ರೇಮಲತಾ ಅವರು ನ್ಯಾಯಾಂಗದ ಘನತೆಗೆ ಧಕ್ಕೆ ತಂದಿದ್ದಾರೆ. ನ್ಯಾಯಮೂರ್ತಿಗಳಿಗೆ ಗೌರವ ತೋರಬೇಕೇ ಹೊರತು, ಇಂಥ ಕೃತ್ಯ ನಡೆಸುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಪ್ರೇಮಲತಾ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕು ಎಂದು ಮನವಿ ಮಾಡಿದರು.

ಪ್ರೇಮಲತಾ ಅವರು ರಾಷ್ಟ್ರಪತಿಗಳಿಗೆ ತಮ್ಮ ಪೀಠದ ವಿರುದ್ಧ ಆರೋಪ ಮಾಡಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ. ಪತ್ರದ ಅಂಶಗಳ ಕುರಿತು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ನಿರ್ಧಾರ ಕೈಗೊಳ್ಳಬೇಕಾಗಿದೆ. ಆದ್ದರಿಂದ ಈ ಪ್ರಕರಣದ ವಿಚಾರಣೆಯನ್ನು ತಾವು ನಡೆಸುವುದಿಲ್ಲ ಎಂದು ನ್ಯಾ.ಫಣೀಂದ್ರ ಅವರು ಹೇಳಿದರು.

ನ್ಯಾ.ಫಣೀಂದ್ರ ಅವರು ಪ್ರಕರಣದ ವಿಚಾರಣೆಯನ್ನು ನಡೆಸಲು ನಿರಾಕರಿಸಿರುವುದರಿಂದ, ವಿಚಾರಣೆಯನ್ನು ಮತ್ತೂಂದು ಪೀಠಕ್ಕೆ ವರ್ಗಾವಣೆ ಮಾಡಬೇಕಾಗುತ್ತದೆ ಮತ್ತು ಈ ಕುರಿತು ಮುಖ್ಯ ನ್ಯಾಯಮೂರ್ತಿಗಳಿಗೆ ಅರ್ಜಿದಾರರು ಮನವಿ ಸಲ್ಲಿಸಬೇಕಾಗುತ್ತದೆ.

English summary
Ramachandrapura mutt Raghaveshwara Bharathi Swamiji sexual harassment case shifted form Karnataka High Justice K.N.Phaneendra bench.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X