ನವದಂಪತಿಗೆ ಇದಕ್ಕಿಂತ ಉತ್ತಮ ಉಡುಗೊರೆ ಕೊಡಲು ಸಾಧ್ಯವಿಲ್ಲ

By: ಮಪ
Subscribe to Oneindia Kannada

ಬೆಂಗಳೂರು, ಫೆಬ್ರವರಿ, 04: ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ. ಇನ್ನೇನು ಮದುವೆ ಸೀಜನ್ ಆರಂಭವಾಯ್ತು! ಅರೇ ಇದೇನು ಒಂದಕ್ಕೊಂದು ಸಂಬಂಧವಿಲ್ಲದ ವಾಕ್ಯ ಬರೆದಿದ್ದಾರೆ ಎಂದುಕೊಳ್ಳಬೇಡಿ.

ಮದುವೆಗೆ ತೆರಳುವಾಗ ಉಡುಗೊರೆ ಕೊಂಡೊಯ್ಯುವುದು ಭಾರತದ ಸಂಪ್ರದಾಯ. ನವ ದಂಪತಿಗಳಿಗೆ ಕುಕ್ಕರ್, ಪಾತ್ರೆ, ಬಟ್ಟೆ, ಮಿಕ್ಸಿ, ವಾಶಿಂಗ್ ಮಶಿನ್ .. ಕೊನೆಗೆ ಹಣವನ್ನೇ ಉಡುಗೊರೆ ನೀಡುವ ಪರಿಪಾಠ ರೂಢಿಯಾಗಿ ಬಿಟ್ಟಿದ್ದೆ. ಅದೆಷ್ಟೋ ಉಡುಗೊರೆಗಳು ಮೇಲಿನ ಕವರ್ ಸಹ ತೆಗೆಸಿಕೊಳ್ಳದೇ ಅಟ್ಟ ಸೇರಿರುತ್ತವೆ.[ಹೆಲ್ಮೆಟ್ ಕಡ್ಡಾಯ; ಸಿ.ಎಂ ಮನೆ ಮುಂದೆ ಯುವಕ-ಯುವತಿ ಮಾಡಿದ್ದೇನು?]

helmet

ಯಾಕಪ್ಪಾ ಇಷ್ಟೆಲ್ಲಾ ಪೀಠಿಕೆ ಅಂದುಕೊಳ್ಳುತ್ತಾ ಇದೀರಾ? ಮದುವೆಗೆ ತೆರಳುವ ನೀವು ನವದಂಪತಿಗೆ ಉಡುಗೊರೆಯಾಗಿ ನೀಡಬೇಕಾದದ್ದು ಹೆಲ್ಮೆಟ್ ಗಳನ್ನು. ಸರ್ಕಾರ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಮಾಡಿದ ಮೇಲೆ ತಲೆ ಕಾಯ್ದುಕೊಳ್ಳುವ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ.

ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿ ಗೃಹಸ್ಥರೊಬ್ಬರು ನವದಂಪತಿಗೆ ಹೆಲ್ಮೆಟ್ ಉಡುಗೊರೆ ನೀಡಿ ಮಾದರಿಯಾಗಿದ್ದಾರೆ. ಬೆಳ್ಳಿಪ್ಪಾಡಿಯ ದೇವಿಕಾ - ಕುರಿಯದ ಗಣೀಶ ದಂಪತಿಗೆ ಪುರುಷರಕಟ್ಟೆಯ ಕುಶಾಲಪ್ಪ ಗೌಡ ಹೆಲ್ಮೆಟ್ ಗಳನ್ನು ಉಡುಗೊರೆ ಮಾಡಿದ್ದಾರೆ.[ಹೆಲ್ಮೆಟ್ ಕಡ್ಡಾಯ: ಜನರ ಪ್ರಶ್ನೆಗೆ ಸರ್ಕಾರ ಏನು ಹೇಳುತ್ತೆ?]

ಹೆಲ್ಮೆಟ್ ಉಡುಗೊರೆ ನೀಡಿರುವ ಫೋಟೋ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ. ವಾಟ್ಸಪ್ ಮತ್ತು ಫೇಸ್ ಬುಕ್ ನಲ್ಲಿ ಭರ್ಜರಿ ಹವಾ ಏರಿಸಿದೆ. ಅದು ಏನೇ ಇರಲಿ ಕಾನೂನು ಮಾನ್ಯ ಮಾಡಬೇಕಾದದ್ದು ನಮ್ಮ ಕರ್ತವ್ಯ. ಈ ಬಗೆಯ ಉಡುಗೊರೆ ನೀಡಿದರೆ ಕೊಟ್ಟವರಿಗೂ ಅದು ಪ್ರಯೋಜನಕ್ಕೆ ಬಂತಲ್ಲಾ ಎಂಬ ತೃಪ್ತಿ, ತೆಗೆದುಕೊಂಡವರಿಗೆ ಈ ಸಮಯಕ್ಕೆ ಅತ್ಯಮೂಲ್ಯ ಉಡುಗೊರೆ ಎಂಬ ಅರಿವು.

ಹಾಗಾದರೆ ನವದಂಪತಿಗಳಿಗೆ ಆಶೀರ್ವದಿಸಲು ತೆರಳುವ ಮುನ್ನ ಪಾತ್ರೆ ಅಂಗಡಿ ಬಿಟ್ಟು ಹೆಲ್ಮೆಟ್ ಅಂಗಡಿಕಡೆ ನಿಮ್ಮ ಹಾದಿ ಸವೆಯಲಿ...

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A very thoughtful wedding gift idea from Putturu, in Coastal Karnataka. Newly wed received a pair of Helmet as wedding gift. Karnataka government has made wearing helmet mandatory for pillion riders from 20th Jan 2016
Please Wait while comments are loading...