ಜ. 18, 22ರಂದು ಮಕ್ಕಳಿಗೆ ಮರೆಯದೆ ಪೋಲಿಯೋ ಹಾಕಿಸಿ
ಬೆಂಗಳೂರು, ಜ. 17: ಕೇಂದ್ರ ಸರ್ಕಾರ ಪೋಲಿಯೋ ವಿರುದ್ಧ ಸಮರವನ್ನು ಮುಂದುವರಿಸಿದೆ. ಭಾನುವಾರ ಮತ್ತೆ ಪಲ್ಸ್ ಪೋಲಿಯೋ ಹಮ್ಮಿಕೊಂಡಿದೆ. 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಡ್ರಾಪ್ಸ್ ಹಾಕುವುದು ಮರೆಯಬೇಡಿ.
ಜ. 18 ಹಾಗೂ 22ರಂದು ಬೆಂಗಳೂರಿನ ಎಲ್ಲ ಆಸ್ಪತ್ರೆಗಳು, ಕ್ಲೀನಿಕ್, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮೆಡಿಕಲ್ ಶಾಪ್ ಸೇರಿದಂತೆ 3,390 ಕಡೆ ಪೋಲಿಯೋ ಹನಿ ಹಾಕಲು ವ್ಯವಸ್ಥೆ ಮಾಡಲಾಗಿದೆ.
ನೆರೆಮನೆಯಲ್ಲಿದೆ ಮಹಾಮಾರಿ : ಪ್ರಸ್ತುತ ಭಾರತ ಪೋಲಿಯೋ ಮುಕ್ತ ರಾಷ್ಟ್ರ ಎಂಬ ಹೆಗ್ಗಳಿಕೆ ಪಡೆದಿದೆ. ಈ ಕುರಿತು ವಿಶ್ವಸಂಸ್ಥೆಯೂ ಪ್ರಮಾಣಪತ್ರ ನೀಡಿದೆ. ಆದರೆ, ಮೂಲಭೂತವಾದಿಗಳ ಹಿಡಿತಕ್ಕೆ ಸಿಕ್ಕಿಬಿದ್ದಿರುವ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದಲ್ಲಿ ಪೋಲಿಯೋ ಡ್ರಾಪ್ಸ್ ಹಾಕಿಸಲೂ ಧಾರ್ಮಿಕ ಯೋಧರು ಅಡ್ಡಬರುತ್ತಿದ್ದಾರೆ! ಇದಕ್ಕೆ ಅವರ ಮಕ್ಕಳು ಬಲಿಯಾಗುತ್ತಿದ್ದಾರೆ. [ಜ. 18 ಹಾಗೂ 22 ಪೋಲಿಯೋ ದಿನ]

ಆದರೆ, ಪಕ್ಕದಲ್ಲಿಯೇ ಇರುವ ನಮಗೂ ಆ ವೈರಸ್ ಗಾಳಿ ಮೂಲಕ ಪಸರಿಸಬಹುದು. ನಾವು ಬಲಿಪಶುವಾಗಬಾರದಲ್ಲ. ಆದ್ದರಿಂದ ಈ ಭಾನುವಾರ ಪೋಲಿಯೋ ಹಾಕಿಸುವುದು ಮರೆಯಬೇಡಿ. ಪೋಲಿಯೋ ಎಂಬ ಮಹಾಮಾರಿ ಸೃಷ್ಟಿಸುವ ಸಮಸ್ಯೆಗಳ ಕುರಿತು ಒಂದು ನೋಟ ಇಲ್ಲಿದೆ.
ಪೋಲಿಯೋ ರೋಗದ ಲಕ್ಷಣಗಳು ಹೀಗಿರುತ್ತವೆ.
- ಜ್ವರ
- ಗಂಟಲು ನೋವು
- ತಲೆ ನೋವು
- ವಾಂತಿ
- ಆಯಾಸ
- ಬೆನ್ನು ನೋವು
- ಕುತ್ತಿಗೆ ನೋವು
- ಕೈ ಅಥವಾ ಕಾಲಿನಲ್ಲಿ ನೋವು
- ಸ್ನಾಯು ದೌರ್ಬಲ್ಯ ಅಥವಾ ಮೃದುತ್ವ
- ಮಿದುಳು ರೋಗ
- ತೀವ್ರ ಸ್ನಾಯು ನೋವು ಅಥವಾ ದೌರ್ಬಲ್ಯ
- ದೇಹದ ಪಾರ್ಶ್ವಗಳು ಜೋತು ಬೀಳುವುದು
ಪೋಲಿಯೋ ವೈರಸ್ ದಾಳಿಗೆ ತುತ್ತಾಗುವ ವ್ಯಕ್ತಿಯಲ್ಲಿ ಕಂಡುಬರುವ ಲಕ್ಷಣಗಳು.
- ಕೀಲುಗಳಲ್ಲಿ ನೋವು ಬಂದು ದುರ್ಬಲವಾಗುವುದು
- ತೀವ್ರ ಬಳಲಿಕೆ ಮತ್ತು ಸ್ನಾಯು ಕ್ಷೀಣತೆ
- ಉಸಿರಾಟ ಮತ್ತು ಆಹಾರ ನುಂಗಲು ಸಮಸ್ಯೆ
- ನಿದ್ರೆಯಲ್ಲಿ ಉಸಿರಾಟ ಸಮಸ್ಯೆ
- ತಾಪಮಾನದಲ್ಲಿ ಕಡಿಮೆ ಸಹನೆ
- ಏಕಾಗ್ರತೆ ಮತ್ತು ಜ್ಞಾಪಕ ಶಕ್ತಿ ಕಡಿಮೆಯಾಗುವುದು
- ಖಿನ್ನತೆ
ಹೀಗಾದರೆ ವೈದ್ಯರ ಹತ್ತಿರ ಹೋಗಿ.
- ನಿಯಮ ಪ್ರಕಾರ ಪೋಲಿಯೋ ಹನಿ ಹಾಕಿಸದಿದ್ದರೆ
- ಪೋಲಿಯೋ ಲಸಿಕೆ ಹಾಕಿದ ನಂತರ ಅಲರ್ಜಿ ಕಂಡುಬಂದರೆ
- ಪೋಲಿಯೋ ಇಂಜೆಕ್ಷನ್ ನೀಡಿದ ಜಾಗದಲ್ಲಿ ಕೆಂಪು ಗುರುತು ಕಂಡುಬಂದರೆ
- ಪೋಲಿಯೋ ಕುರಿತು ಯಾವುದೇ ಶಂಕೆ ಹೊಂದಿದ್ದರೆ
- ಪೋಲಿಯೋಕ್ಕೆ ತುತ್ತಾದ ಹಲವು ವರ್ಷಗಳ ನಂತರ ದೌರ್ಬಲ್ಯ ಕಾಣಿಸಿಕೊಂಡರೆ
-
SSLC ಪರೀಕ್ಷೆ-1 ಆರಂಭ: ಮಲ್ಲೇಶ್ವರಂನ ಕೆಪಿಎಸ್ ಶಾಲೆಗೆ ಸಚಿವ ಮಧು ಬಂಗಾರಪ್ಪ ಭೇಟಿ, ವಿದ್ಯಾರ್ಥಿಗಳಿಗೆ ಶುಭಹಾರೈಕೆ -
Gold Price Today: ಯುಗಾದಿಗೂ ಮೊದಲೇ ಚಿನ್ನದ ದರದಲ್ಲಿ ಭಾರೀ ಇಳಿಕೆ; ಆಭರಣ ಪ್ರಿಯರಿಗೆ ಇಂದೇ ಹಬ್ಬ -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
ವಲಸೆ ಕಾರ್ಮಿಕರಿಂದಾಗಿ ಉದ್ಯೋಗ ನಷ್ಟವಾಗುತ್ತಿರುವ ಬಗ್ಗೆ ಅಧಿಕೃತ ದೂರು ಸಲ್ಲಿಕೆಯಾಗಿಲ್ಲ: ಕಾರ್ಮಿಕ ಇಲಾಖೆ ಸ್ಪಷ್ಟನೆ -
RCB: ಆರ್ಸಿಬಿಯಲ್ಲಿ ಜೋಶ್ ಹ್ಯಾಜಲ್ವುಡ್ ಸ್ಥಾನ ತುಂಬುವ ಆಟಗಾರ ಇವರೇ ನೋಡಿ -
ಶೆಲ್ ಬಂಕ್ನಲ್ಲಿ ಪೆಟ್ರೋಲ್ ದರ ಏರಿಕೆ: ಬೆಂಗಳೂರಿನಲ್ಲಿ 10 ದಿನಗಳಲ್ಲಿ 4.50 ರೂಪಾಯಿ ಹೆಚ್ಚಳ; ಇಲ್ಲಿದೆ ದರಪಟ್ಟಿ -
Gold Rate Today: ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರಗಳು ಹೀಗಿವೆ -
ಯುಗಾದಿ, ರಂಜಾನ್ ಹಬ್ಬಕ್ಕೆ 2000 ವಿಶೇಷ ಬಸ್: ಮುಂಗಡ ಟಿಕೆಟ್ ಗೆ ರಿಯಾಯ್ತಿ ಘೋಷಿಸಿದ KSRTC -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ












Click it and Unblock the Notifications