ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ, ನಾಲ್ವರಿಗೆ ಜಾಮೀನು

Posted By:
Subscribe to Oneindia Kannada

ಬೆಂಗಳೂರು, ಜುಲೈ 22 : ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ನಾಲ್ವರು ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಹಗರಣ ಬೆಳಕಿಗೆ ಬಂದ ಬಳಿಕ ಮೊದಲ ಬಾರಿಗೆ ಆರೋಪಿಗಳಿಗೆ ಜಾಮೀನು ನೀಡಲಾಗಿದೆ.

ಶುಕ್ರವಾರ ಹೈಕೋರ್ಟ್ ಆರೋಪಿಗಳಾದ ರುದ್ರಪ್ಪ, ರಂಗನಾಥ್, ಓಬಳರಾಜು ಮತ್ತು ಮಂಜುನಾಥ್ ಅವರಿಗೆ ಷರತ್ತುಬದ್ಧ ಜಾಮೀನು ನೀಡಿದೆ. ಪ್ರತಿಯೊಬ್ಬ ಆರೋಪಿಗಳಿಗೂ 2 ಲಕ್ಷ ಬಾಂಡ್, ಇಬ್ಬರ ಶ್ಯೂರಿಟಿ ಆಧಾರದ ಮೇಲೆ ಜಾಮೀನು ನೀಡಲಾಗಿದೆ. ಪ್ರತಿ ಭಾನುವಾರ ಪೊಲೀಸ್ ಠಾಣೆಗೆ ಹೋಗಿ ಸಹಿ ಮಾಡಬೇಕು ಎಂದು ಆದೇಶ ನೀಡಿದೆ.[ಪಿಯು ಪ್ರಶ್ನೆ ಪ್ರತ್ರಿಕೆ ಸೋರಿಕೆಯಾಗಿದ್ದು ಹಾವೇರಿಯಲ್ಲಿ]

high court

ಜಾಮೀನು ಪಡೆದವರ ಪೈಕಿ ಓಬಳರಾಜು ಅವರು ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರ ವಿಶೇಷ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಲೋಕೊಪಯೋಗಿ ಇಲಾಖೆ ಅಧಿಕಾರಿ ರುದ್ರಪ್ಪ, ಬೆಂಗಳೂರಿನ ನಾಗರಬಾವಿಯ ಆದರ್ಶನಗರದ ಮಂಜುನಾಥ್, ಲೋಕೊಪಯೋಗಿ ಇಲಾಖೆ ಜೆಇ ಕೆ.ಎಸ್‌ ರಂಗನಾಥ್‌ ಜಾಮೀನು ಪಡೆದ ಇತರರು.[ಶಿವಕುಮಾರ ಸ್ವಾಮಿ ಕುರಿತ ಕುತೂಹಲಕಾರಿ ಕಥೆ!]

2016ರ ಮಾರ್ಚ್‌ನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆದಿತ್ತು. ಆದರೆ, ಮಾರ್ಚ್ 21 ಮತ್ತು 31 ರಂದು ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಈ ಹಗರಣದ ತನಿಖೆಯನ್ನು ಸರ್ಕಾರ ಸಿಐಡಿ ತನಿಖೆಗೆ ಒಪ್ಪಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 10ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka high court on July 22, 2016 granted bail to 4 accused of 2nd PUC Chemistry question paper leak scam. Criminal Investigation Department investigating the scam and arrested more than 10 accused.
Please Wait while comments are loading...