ಶಿವಕುಮಾರ ಸ್ವಾಮಿ ಕುರಿತ ಕುತೂಹಲಕಾರಿ ಕಥೆ!

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಮೇ 04 : ಮಹಿಳೆಯರ ಸಹವಾಸ, ಕಣ್ಣೀರು ಹಾಕದೆ ಅಳುವುದು, ಹಾಡುವುದು, ಸಂಗೀತ ವಾದ್ಯಗಳನ್ನು ನುಡಿಸುವುದು, ಯೋಗ ಮಾಡುವುದು...ಇದು ಸಿಐಡಿ ಪೊಲೀಸರು ಬಂಧಿಸಿರುವ ಟೊಮೆಟೊ ಅಲಿಯಾಸ್ ಶಿವಕುಮಾರ ಸ್ವಾಮಿ ಕುರಿತ ಕುತೂಹಲಕಾರಿ ಕಥೆ.

ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ಕಿಂಗ್‌ಪಿನ್ ಶಿವಕುಮಾರ ಸ್ವಾಮಿ ಪೊಲೀಸರ ಕೈಗೆ ಸಿಕ್ಕಿಬಿದಿದ್ದದ್ದೆ ರೋಚಕ ಕಥೆ. ಸೋಮವಾರ ರಾತ್ರಿ 10.30ರ ಸುಮಾರಿಗೆ ಪೊಲೀಸರು ಆತನನ್ನು ಬಂಧಿಸುವಾಗ ಅರೆನಗ್ನನಾಗಿ ಕುಳಿತು ಮದ್ಯ ಹೀರುತ್ತಿದ್ದ. [10 ದಿನಗಳ ಕಾಲ ಟೊಮೆಟೊ ಸಿಐಡಿ ವಶಕ್ಕೆ]

shivakumara swamy

ಪತ್ರಿಕೆ ಸೋರಿಕೆ ಹಗರಣ ಬೆಳಕಿಗೆ ಬಂದ ಬಳಿಕ ತಲೆಮರೆಸಿಕೊಂಡಿದ್ದ ಶಿವಕುಮಾರ ಸ್ವಾಮಿ, ಮಹಿಳೆಯರ ಸಹವಾಸದಿಂದಾಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಹೊಸೂರು ರಸ್ತೆಯ ಗಾರ್ವೆಪಾಳ್ಯದ ನಿರ್ಮಾಣ ಹಂತದ ಕಟ್ಟಡಕ್ಕೆ ಮಹಿಳೆಯನ್ನು ಈತ ಬರಲು ಹೇಳಿದ್ದ. ಮಹಿಳೆ ಜೊತೆ ತೆರಳಿದ್ದ ಪೊಲೀಸರು ಆತನನ್ನು ಬಂಧಿಸಿದ್ದಾರೆ. [20 ಕಾಲೇಜುಗಳಿಗೆ ಪತ್ರಿಕೆ ಮಾರಿದ್ದ ಶಿವಕುಮಾರ ಸ್ವಾಮಿ]

ಕಾರ್ಯಾಚರಣೆ ಹೇಗಿತ್ತು? : ಸ್ಟಾರ್ ಹೋಟೆಲ್‌ಗಳಲ್ಲಿ ವಾಸಿಸಿವುದು, ವಿದೇಶಿ ಮದ್ಯ ಸೇವನೆ, ಮಹಿಳೆಯರ ಸಹವಾಸ ಹೀಗೆ ಶಿವಕುಮಾರ ಸ್ವಾಮಿ ಐಷಾರಾಮಿ ಜೀವನ ನಡೆಸುತ್ತಿದ್ದ. ಅದರಲ್ಲೂ ಹತ್ತಾರು ಮಹಿಳೆಯರೊಂದಿಗೆ ಸಂಪರ್ಕ ಹೊಂದಿದ್ದ ಆತ, ಅದರಿಂದಾಗಿಯೇ ಸಿಕ್ಕಿಬಿದ್ದಿದ್ದಾನೆ. [ಪ್ರಶ್ನೆ ಪತ್ರಿಕೆ ಹಗರಣದಲ್ಲಿ ಕೋಕಾ ಪ್ರಯೋಗ, ಏನಿದು ಕೋಕಾ?]

ಮಾ.31ರ ಬಳಿಕ ತಲೆಮರೆಸಿಕೊಂಡಿದ್ದ ಶಿವಕುಮಾರ ಸ್ವಾಮಿಯನ್ನು ಹುಡುಕಲು ಪೊಲೀಸರು ಆತನ ಸ್ನೇಹಿತೆಯರ ವಿಚಾರಣೆ ನಡೆಸಿದ್ದರು. ಆದರೆ, ನಿಖವಾಗಿ ಆತ ಎಲ್ಲಿದ್ದಾನೆ ಎಂಬ ಮಾಹಿತಿ ಸಿಕ್ಕಿರಲಿಲ್ಲ. ಸುಮಾರು 35 ವರ್ಷದ ಮಹಿಳೆಯೊಬ್ಬಳನ್ನು ವಿಚಾರಿಸಿದಾಗ ಹೊಸೂರು ರಸ್ತೆಯಲ್ಲಿ ಅಡಗಿರುವ ಬಗ್ಗೆ ಖಚಿತವಾದ ಮಾಹಿತಿ ಸಿಕ್ಕಿತ್ತು.

ಸೋಮವಾರ ರಾತ್ರಿ ಆ ಮಹಿಳೆಯೊಂದಿಗೆ ಸಿಐಡಿ ಪೊಲೀಸರು ಮಫ್ತಿಯಲ್ಲಿ ಅಲ್ಲಿಗೆ ತೆರಳಿ ಶಿವಕುಮಾರ ಸ್ವಾಮಿಯನ್ನು ಬಂಧಿಸಿದ್ದಾರೆ. 'ಯಾವುದೇ ಪ್ರಶ್ನೆ ಕೇಳಿದರೂ ನನಗೇನೂ ಗೊತ್ತಿಲ್ಲ' ಎಂಬುದು ಆತನ ಸಿದ್ಧ ಉತ್ತರ. ಹೆಚ್ಚು ಪ್ರಶ್ನೆ ಕೇಳಿದರೆ ಜೋರಾಗಿ ಅಳುವ ಶಿವಕುಮಾರ ಸ್ವಾಮಿ ಕಣ್ಣಲ್ಲಿ ಒಂದು ಹನಿ ನೀರು ಬರುವುದಿಲ್ಲ ಎನ್ನುತ್ತಾರೆ ಪೊಲೀಸರು.

ಶಿವಕುಮಾರ ಸ್ವಾಮಿ ಯೋಗ ಮಾಡುತ್ತಾನೆ. ಸಂಗೀತ ವಾದ್ಯಗಳನ್ನು ನುಡಿಸುತ್ತಾನೆ. ಹಾಡು ಹೇಳುತ್ತಾನೆ. ಪ್ರಶ್ನೆಗೆ ಉತ್ತರಗಳನ್ನು ನೀಡುವುದರಲ್ಲಿಯೂ ಆತ ಚಾಣಕ್ಷನಾಗಿದ್ದಾನೆ. ಅವನಿಂದ ಎಚ್ಚರಿಕೆಯಿಂದ ಮಾಹಿತಿ ಸಂಗ್ರಹಿಸಬೇಕು ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The kingpin of PUC paper leak scam Shivakumara Swamy was arrested by CID police near Bengaluru on Monday night. It is now revealed that his craze for women helped the police to nab him.
Please Wait while comments are loading...