ಜುಲೈ 13ರಿಂದ ಪಿಯುಸಿ ಉಪನ್ಯಾಸಕರು ಕಾಲೇಜಿಗೆ
ಬೆಂಗಳೂರು, ಜುಲೈ 09 : ಪಿಯುಸಿ ಉಪನ್ಯಾಸಕರು ಜುಲೈ 13ರಿಂದ ಕಾಲೇಜಿಗೆ ತೆರಳಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಪ್ರಥಮ ಪಿಯಸಿ ಪೂರಕ ಪರೀಕ್ಷೆ ಕೆಲಸಗಳನ್ನು ಕಾಲೇಜಿನಲ್ಲಿ ಮಾಡಲಿದ್ದಾರೆ.
ಕೊರೊನಾ ವೈರಸ್ ಹರಡದಂತೆ ತಡೆಯಲು ಲಾಕ್ ಡೌನ್ ಜಾರಿಯಲ್ಲಿದೆ. ಆದ್ದರಿಂದ, ಶಾಲಾ-ಕಾಲೇಜಿಗೆ ರಜೆ ಇದೆ. ದ್ವಿತೀಯ ಪಿಯುಸಿ ಪರೀಕ್ಷೆಗಳು ಮುಗಿದಿದ್ದು, ಜುಲೈ ಅಂತ್ಯಕ್ಕೆ ಫಲಿತಾಂಶ ಪ್ರಕಟವಾಗಲಿದೆ.
ಪ್ರಥಮ ಪಿಯುಸಿ ಪೂರಕ ಪರೀಕ್ಷೆಗಳನ್ನು ನಿಭಾಯಿಸಲು ಜುಲೈ 13ರಿಂದ ಉಪನ್ಯಾಸಕರು ಕಾಲೇಜಿಗೆ ತೆರಳಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಉಪನ್ಯಾಸಕರು ಕಾಲೇಜಿಗೆ ಹೋದಾಗ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಕಾಲೇಜಿಗೆ ಬರುವಂತೆ ಹೇಳುವಂತಿಲ್ಲ. ಅವರಿಗೆ ತರಗತಿಗಳನ್ನು ತೆಗೆದುಕೊಳ್ಳುವಂತಿಲ್ಲ. ಆನ್‌ಲೈನ್ ತರಗತಿಗಳನ್ನು ಮಾತ್ರ ತೆಗೆದುಕೊಳ್ಳಬಹುದು ಎಂದು ಸೂಚನೆ ಕೊಡಲಾಗಿದೆ.
ದ್ವಿತೀಯ ಪಿಯುಸಿಯ ಬಾಕಿ ಉಳಿದಿದ್ದ ಇಂಗ್ಲಿಶ್ ಪರೀಕ್ಷೆ ಪೂರ್ಣಗೊಂಡಿದ್ದು, ಮೌಲ್ಯ ಮಾಪನವೂ ಪೂರ್ಣಗೊಂಡಿದೆ. ಜುಲೈ ಅಂತ್ಯದ ವೇಳೆಗೆ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ. ಆದರೆ, ಕಾಲೇಜು ಬಾಗಿಲು ತೆರೆಯುವುದು ಯಾವಾಗ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.












Click it and Unblock the Notifications