ಪಿಯು ಪ್ರವೇಶ ಜುಲೈ 23ರವರೆಗೆ ವಿಸ್ತರಣೆ

Subscribe to Oneindia Kannada

ಬೆಂಗಳೂರು, ಜುಲೈ, 20: ಪ್ರಥಮ ಪಿಯುಸಿ ಪ್ರವೇಶಕ್ಕೆ ಇದ್ದ ಕಾಲಾವಕಾಶವನ್ನು ಜುಲೈ 23 ರವರೆಗೆ ವಿಸ್ತರಣೆ ಮಾಡಲಾಗಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆಯು ಕೆಲ ಷರತ್ತುಗಳನ್ನು ವಿಧಿಸಿ ಪ್ರವೇಶಕ್ಕೆ ಅವಕಾಶ ಕಲ್ಪಿಸಿದೆ.

ಜುಲೈ 15ರವರೆಗೆ ಇದ್ದ ದಾಖಲಾತಿ ಅಂತಿಮ ದಿನಾಂಕವನ್ನು ಜುಲೈ 23ರವರೆಗೆ ವಿಸ್ತರಿಸಲಾಗಿದೆ. ದಾಖಲಾತಿಗೆ ನಿಗದಿ ಪಡಿಸಿರುವ ಶುಲ್ಕದೊಂದಿಗೆ ವಿದ್ಯಾರ್ಥಿಗಳ ಹಾಜರಾತಿಯನ್ನು ಶೇ.75ಕ್ಕೆ ಕಾಯ್ದಿರಿಸಿಕೊಳ್ಳುವ ಸಂಬಂಧ ಮುಚ್ಚಳಿಕೆ ಪಡೆದುಕೊಂಡು ನಂತರ ದಂಡ ಶುಲ್ಕ ಪಡೆದು ದಾಖಲಾತಿಗೆ ಅವಕಾಶ ಕಲ್ಪಿಸಬೇಕು ಎಂದು ಆಡಳಿತ ಮಂಡಳಿಗಳಿಗೆ ತಿಳಿಸಲಾಗಿದೆ.[SSLC ಪೂರಕ ಪರೀಕ್ಷೆ 2016: ಫಲಿತಾಂಶ ಪ್ರಕಟ]

PUC Admission date extended to July 23, 2016

ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ದಂಡ ಇಲ್ಲ
ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಫಲಿತಾಂಶ ಯಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಂದ ಯಾವುದೇ ದಂಡ ಶುಲ್ಕ ಪಡೆಯಬಾರದು ಎಂಬ ನಿಯಮ ವಿಧಿಸಿ ಕಾಲೇಜುಗಳಿಗೆ ಸುತ್ತೋಲೆ ಹೊರಡಿಸಿದೆ.[ಬಳ್ಳಾರಿಯ ಯಶ್ವಿತಾ ಸಾಧನೆಗೆ ಅಡ್ಡಿಯಾಗದ ಬಡತನ]

ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯ ಫಲಿತಾಂಶ ಜುಲೈ, 14 ರಂದು ಪ್ರಕಟವಾಗಿತ್ತು. ಜೂನ್ 20ರಿಂದ 25ರ ವರೆಗೆ ನಡೆದಿದ್ದ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯ ಫಲಿತಾಂಶದ ನಂತರ ಉತ್ತೀರ್ಣರಾದ ವಿದ್ಯಾರ್ಥಿಗಳು ದಂಡ ರಹಿತವಾಗಿ ಕಾಲೇಜಿಗೆ ಸೇರಿಕೊಳ್ಳಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Bengaluru: Pre-University Education Board has extended the date of admission for 1st year PUC till July 23 with the certain stipulations.
Please Wait while comments are loading...