ಪತ್ರಕರ್ತರಿಗೊಂದು ಅವಕಾಶ PublicVibe
ಬೆಂಗಳೂರು, ನ.13: ನಿಮಗೆ ಪತ್ರಿಕೋದ್ಯಮದ ಬಗ್ಗೆ ಆಸಕ್ತಿ ಇದ್ದು, ನಿಮ್ಮ ಸುತ್ತಮುತ್ತಲಿನ ಸಮಸ್ಯೆಯನ್ನು ಸಂಬಂಧಪಟ್ಟವರ ಗಮನಕ್ಕೆ ತರಬೇಕು ಎಂಬ ಆಸಕ್ತಿ ಇದ್ದಲ್ಲಿ ನಿಮಗೊಂದು ಉತ್ತಮ ವೇದಿಕೆ ಇಲ್ಲಿದೆ.
ನಿಮ್ಮ ಸುತ್ತಲಿನ ಪರಿಸರದಲ್ಲಿ ನಡೆಯುವಂತಹ ಎಲ್ಲ ವಿಷಯಗಳ ಬಗ್ಗೆ ವಿಡಿಯೋ ಮಾಡಿ ಹಂಚಿಕೊಳ್ಳಬಹುದು. ಅಲ್ಲದೆ, ಅದರಿಂದ ಆದಾಯವನ್ನೂ ಗಳಿಸಬಹುದು. ಪಬ್ಲಿಕ್ ವೈಬ್ (PublicVibe) ಇಂತಹ ಒಂದು ಅತ್ಯುತ್ತಮ ಅವಕಾಶವನ್ನು ಒದಗಿಸುತ್ತದೆ.
ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ವಿಡಿಯೋ ಸ್ಟ್ರಿಂಜರ್ ಬೇಕಾಗಿದ್ದಾರೆ. ಪ್ರತಿ ವಾರ್ಡ್‌ಗೆ ಸಂಬಂಧಿಸಿದಂತೆ ಸ್ಥಳೀಯ ವಿಷಯಗಳ ಕುರಿತು ಮೊಬೈಲ್‌ನಲ್ಲೇ ಚಿತ್ರೀಕರಿಸಿ ಕಳುಹಿಸಬೇಕು. ಪ್ರತೀ ವಿಡಿಯೋಗೆ ಗೌರವ ಧನವನ್ನೂ ನಿಗದಿ ಮಾಡಲಾಗಿದೆ. ದಿನಕ್ಕೆ ಹತ್ತು ವಿಡಿಯೋ ಬೇಕಾದರೂ ಕಳುಹಿಸಬಹುದಾಗಿದೆ.

ನೀವು ಮಾಡುವ ವಿಡಿಯೋ ಜನರ ದೈನಂದಿನ ಸಮಸ್ಯೆಗಳದ್ದು ಆಗಿರಬೇಕು. ಉದಾಹರಣೆಗೆ ಈ ವಾರ್ಡ್‌ನಲ್ಲಿ ನೀರು ಇಲ್ಲ, ವಿದ್ಯುತ್ ಸಮಸ್ಯೆಯಾಗುತ್ತಿದೆ, ತ್ಯಾಜ್ಯ ವಿಲೇವಾರಿ ಮಾಡುತ್ತಿಲ್ಲ, ಸರ್ಕಾರಿ ಕಚೇರಿಗಳಲ್ಲಿ ಕೆಲಸ ಕಾರ್ಯಗಳು ಆಗುತ್ತಿಲ್ಲ, ರಸ್ತೆ ಗುಂಡಿಗಳು, ಸ್ಥಳೀಯ ಆಸ್ಪತ್ರೆಗಳಲ್ಲಿನ ಕೊರತೆಗಳು, ರಸ್ತೆ ಗುಂಡಿಗಳು, ಪಾರ್ಕಿಂಗ್ ಸಮಸ್ಯೆ, ಟ್ರಾಫಿಕ್ ಜಾಮ್ ಉಂಟಾಗಲು ಕಾರಣವಾದ ಅಂಶಗಳು ಹೀಗೆ ಜನಸಾಮಾನ್ಯರ ದೈನಂದಿನ ವಿಷಯಗಳನ್ನೇ ವಿಡಿಯೊ ತುಣುಕುಗಳನ್ನು ಮಾಡಿ ಕಳುಹಿಸಬೇಕು.
ಪ್ರತಿ ವಿಡಿಯೋ 35-90 ಸೆಕೆಂಡ್‌ನ ಚಿತ್ರೀಕರಣ ಹೊಂದಿರಬೇಕು. ವೀಡಿಯೋ ಚಿತ್ರೀಕರಿಸುವ ಸಂದರ್ಭದಲ್ಲಿಯೇ ವಾಯ್ಸ್‌ಓವರ್ ಸಹ ನೀಡಬೇಕು. ಸರಳ ಭಾಷೆಯಲ್ಲಿ ಅರ್ಥವಾಗುವಂತೆ ಮತ್ತು ಯಾರನ್ನೂ ಸಹ ವೈಯಕ್ತಿಕವಾಗಿ ಟೀಕೆ ಮಾಡದೆ ಸಮಸ್ಯೆಯನ್ನು ಮಾತ್ರ ಬಿಂಬಿಸುವಂತಹ ವಿಡಿಯೊ ದೃಶ್ಯಾವಳಿಗಳನ್ನು ಮಾಡಬೇಕು.
ಹೀಗೆ ಬಂದ ವೀಡಿಯೋಗಳನ್ನು ಪಬ್ಲಿಕ್ ವೈಬ್‌ನಲ್ಲಿ ಪ್ರಕಟಿಸಲಾಗುತ್ತದೆ. ನಿಮ್ಮ ಸುತ್ತಮುತ್ತ ನಡೆಯುವ ಸುದ್ದಿಗಳನ್ನು ಕಡಿಮೆ ಸಮಯದಲ್ಲಿ ಉತ್ತಮ ಗುಣಮಟ್ಟದ ವೀಡಿಯೋಗಳಾಗಿ ಪೋಸ್ಟ್ ಮಾಡುವ ಮೂಲಕ ಹೆಚ್ಚಿನ ಜನರನ್ನು ತಲುಪಬಹುದು. ಈ ಮೂಲಕ ನೀವು ಹೆಚ್ಚಿನ ಫಾಲೋವರ್ಸ್‌ಗಳನ್ನೂ ಇಲ್ಲಿ ಪಡೆಯಬಹುದಾಗಿದೆ. ಮಾಧ್ಯಮ ಕ್ಷೇತ್ರದ ನಿಮ್ಮ ಅನುಭವ ಈಗ ಉತ್ತಮ ಆದಾಯದ ಮೂಲವಾಗಿದೆ. ಇನ್ನೇಕೆ ತಡ ಪಬ್ಲಿಕ್ ವೈನ್‌ನ ವರದಿಗಾರರಾಗಿ ಕೆಲಸ ಮಾಡಿ.
ಆಸಕ್ತರು ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ: ರಮೇಶ್ (9790970178)