ಇಂದಿರಾ ಕ್ಯಾಂಟೀನ್ ಏಕೆ? ಹೈ ಕಮಾಂಡ್ ಗುಲಾಮಗಿರಿ ಬಿಡಿ

By: ಶಿವಾನಂದ ಗುಂಡಾನವರ
Subscribe to Oneindia Kannada

ಸಿದ್ದರಾಮಯ್ಯ ಅವರೇ, ನಮ್ಮ ಕ್ಯಾಂಟೀನ್ ಗೆ ಇಂದಿರಾ ಕ್ಯಾಂಟೀನ್ ಎಂದು ಏಕೆ ಹೆಸರಿಡುತ್ತಿದ್ದರೆಂದು ಕೇಳಬಯಸುತ್ತೇನೆ! ಏಕೆ ಕರ್ನಾಟಕಕ್ಕೆ ಇಂದಿರಾ ಅವರ ಕೊಡುಗೆ ಏನು? ಏಕೆ ಹೀಗೆ ಹೈ ಕಮಾಂಡ್ ಗುಲಾಮಗಿರಿ? ಏಕೆ ನಿಮ್ಮಗಳ ಸ್ವಾಭಿಮಾನ ಸತ್ತು ಹೋಗಿದೆಯೇ ಅಥವಾ ನಮ್ಮಲ್ಲಿ ಅಂತ ಮಹನೀಯರು ಯಾರು ಇಲ್ಲವೇ? ದಯವಿಟ್ಟು ಇಂದಿರಾ ಕ್ಯಾಂಟೀನ್ ಬದಲಾಗಿ ಅಕ್ಕ ಕ್ಯಾಂಟೀನ್ ಅಂತ ಇಡಿ!

ನೆಹರು ಪ್ಲಾನಿಟೋರಿಯಂ, ಇಂದಿರಾ ಉದ್ಯಾನವನ, ಇಂದಿರಾ ಹೌಸಿಂಗ್, ರಾಜೀವ ಆವಾಸ್, ರಾಜೀವ ಗಾಂಧಿ ಪಾರ್ಕ್, ವಾಜಪೇಯಿ ಸಾರಿಗೆ, ದೀನ ದಯಾಳ್ ರಸ್ತೆ, ಚಂದ್ರಗುಪ್ತ ಮೈದಾನ್, ಅಜಾದ್ ಕ್ರೀಡಾಂಗಣ ಹೀಗೆ ಹಲವು ಹತ್ತು ಯೋಜನೆಗಳು, ರಸ್ತೆಗಳು, ಮೈದಾನಗಳಿಗೆ ಹೊರ ರಾಜ್ಯದವರ ಹೆಸರಿಟ್ಟು ನಮ್ಮ ತನವನ್ನ ಮರೆತ್ತಿದಿದ್ದೇವೆ.

ಇದು ಇಂದು ನಿನ್ನೆದಲ್ಲ ಸ್ವತಂತ್ರ ಪಡೆದ ದಿನದಿಂದಲೂ ಅನ್ಯ ರಾಜ್ಯದವರ ಹೆಸರಿನ ಹೇರಿಕೆ ನಡಿಯುತ್ತಿದೆ, ಆಗ ಸ್ವಾತಂತ್ರದ ಸಿಕ್ಕ ಖುಷಿಯಲ್ಲಿ ಹಲವು ಹೆಸರುಗಳನ್ನ ಅಭಿಮಾನದಿಂದ ಇಟ್ಟಿದ್ದೆನೋ ನಿಜ, ಆದರೆ ಈಗ ನೋಡಿ ಇಂದಿರಾ ಕ್ಯಾಂಟೀನ್ ಅಂತೇ ಏಕೆ ನಮ್ಮವರ ಹೆಸರುಗಳು ಇವರಾರಿಗೂ ಕಾಣುತ್ತಿಲ್ಲವೇ?

ನಮ್ಮವರ ಹೆಸರುಗಳಿಡಿ

ನಮ್ಮವರ ಹೆಸರುಗಳಿಡಿ

ಪುಲಿಕೇಶೀ, ವಿಕ್ರಮಾದಿತ್ಯ, ಕುಮಾರರಾಮ, ಅಕ್ಕ ಮಹಾದೇವಿ, ಬಸವಣ್ಣ, ಚೆನ್ನಮ್ಮ, ರಾಯಣ್ಣ, ಭೀಮರಾಯ, ಅನಕೃ , ಬಿಎಂಶ್ರೀ, ವಿಷ್ಣುವರ್ಧನ್ ಹೀಗೆ ಹಲವು ಹತ್ತು ಮಹನೀಯರು ಕರ್ನಾಟಕದಲ್ಲೇ ಹುಟ್ಟಿ ಅನೇಕ ಸಾಧನೆ ಮಾಡಿ ಹೋಗಿದ್ದಾರೆ, ಅಂಥವರ ಹೆಸರುಗಳನ್ನ ನಮ್ಮ ಮುಂದಿನ ಪೀಳಿಗೆಗೆ ತಿಳಿಸುವದಾದರೂ ಹೇಗೆ?

ಏಕೆ ಈ ದಾಸ್ಯ ಪರಂಪರೆ

ಏಕೆ ಈ ದಾಸ್ಯ ಪರಂಪರೆ

ಹೈಕಮಾಂಡ್ ಮೆಚ್ಚಿಸುವ ಸಲುವಾಗಿ ಇರೋ ಬರೋ ಯೋಜನೆಗಳಿಗೆಲ್ಲ ಬೇರೆಯವರ ಹೆಸರುಗಳನ್ನೂ ಇಡುತ್ತ ಹೋದರೆ ನಾಳೆ ಇವರು ಕರ್ನಾಟಕದ ಹೆಸರನ್ನು ಕೂಡ ಬದಲಾಯಿಸಲು ಹೇಸದವರೆನ್ನಬಹುದು.

ಏಕೆ ಈ ದಾಸ್ಯ ಪರಂಪರೆ ನಮ್ಮವರು ಎಂದು ಈ ಗುಲಾಮಿ ಪದ್ದತಿಯಿಂದ ಹೊರಬರುವುದು? ನಮ್ಮ ತನದ ಸೊಗಡನ್ನ ನಮ್ಮ ಸರ್ಕಾರವೇ ಗಾಳಿಗೆ ತೋರಿ ಈ ರೀತಿ ಹೇರಿಕೆ ಮಾಡುತ್ತ ಹೋದರೆ ಹೇಗೆ?

ನಿಮ್ಮ ನಿಷ್ಠೆ ರಾಜ್ಯಕ್ಕಿರಲಿ

ನಿಮ್ಮ ನಿಷ್ಠೆ ರಾಜ್ಯಕ್ಕಿರಲಿ

ಬೇಕಾದಲ್ಲಿ ನಿಮ್ಮ ಸ್ವಂತ ದುಡ್ಡಿನಿಂದ ಅವರ ಹೆಸರಲ್ಲಿ ಗುಡಿ ಕಟ್ಟಿಕೊಳ್ಳಿ, ಕನ್ನಡಿಗರ ಟ್ಯಾಕ್ಸ್ ಇಂದ ಇಂತಹ ಹೊರ ರಾಜ್ಯದವರ ಹೆಸರಿನ ಹೇರಿಕೆಯನ್ನ ನಮ್ಮ ಮೇಲೆ ಮಾಡಬೇಡಿ.

ದಯವಿಟ್ಟು ಇಂದಿನ ಸರ್ಕಾರದಲ್ಲಿ ಮತ್ತು ಮುಂದೆ ಬರುವಂತಹ ಜನಪ್ರತಿನಿಧಿಗಳಲ್ಲಿ ನನ್ನದೊಂದು ಮನವಿ , ನಮ್ಮ ನಾಡಿನಲ್ಲಿ ಸಾಧನೆ ಮಾಡಿದವರನ್ನ ಮರೆತು ನಿಮ್ಮ ಸ್ವಾರ್ಥ ಪಕ್ಷ ಲಾಭಕ್ಕಾಗಿ ಬೇರೆಯವರ ಹೆಸರನ್ನು ಇಡುವುದನ್ನು ಬಿಡಿ,

ಸ್ವಾಭಿಮಾನ ತೋರಿಸಿ

ಸ್ವಾಭಿಮಾನ ತೋರಿಸಿ

ನಮ್ಮಲ್ಲೇ ಸಾಧನೆ ಮಾಡಿದಂತ ಹಲವು ಮಹನೀಯರಿದ್ದಾರೆ ಅಂತವರ ಹೆಸರುಗಳನ್ನ ಬೆಳಕಿಗೆ ತನ್ನಿ,

ಅವರ ಹೆಸರುಗಳನ್ನೇ ನಮ್ಮ ರಸ್ತೆ ಮೈದಾನ ಮತ್ತು ಯೋಜನೆಗಳಿಗೆ ಹೆಸರಿಡಿ, ನಮ್ಮತನವನ್ನು ಮುಂದಿನ ಪೀಳಿಗೆಗೆ ಬಿಟ್ಟು ಹೋಗಬೇಕಾದರೆ ಈ ಕಾರ್ಯ ಬಹು ಮುಖ್ಯ, ಬಿಡಿ ಇನ್ನಾದರೂ ಹೇರಿಕೆಯ ದಾಸ್ಯ, ಮೈಗೂಡಿಸಿಕೊಳ್ಳಿ ನಮ್ಮತನದ ಸ್ವಾಭಿಮಾನ.

ಅಣ್ಣ ಬಸವಣ್ಣ ಅವರ ಹೆಸರಿಡಿ

ಅಣ್ಣ ಬಸವಣ್ಣ ಅವರ ಹೆಸರಿಡಿ

ಅಣ್ಣ ಬಸವಣ್ಣ, ಅಕ್ಕ ಮಹಾದೇವಿ ಅವರ ಹೆಸರಿಡಿ. ಅಥವಾ ಈ ಪಟ್ಟಿಯಲ್ಲಿರುವ ಹೆಸರುಗಳನ್ನು ಪರಿಗಣಿಸಿ
ಮಯೂರವರ್ಮ
ಕಾಕುತ್ಸ ವರ್ಮ
ಪುಲಿಕೇಶೀ
ವಿನಯಾದಿತ್ಯ
ವಿಕ್ರಮಾದಿತ್ಯ
ನಾಟ್ಯರಾಣಿ ಶಾಂತಲೆ
ಪಂಪ
ರನ್ನ
ರಾಘವಾಂಕ
ಸರ್ವಜ್ಞ
ಬಸವಣ್ಣ
ಅಕ್ಕಮಹಾದೇವಿ
ಅಲ್ಲಮ
ಚೆನ್ನಮ್ಮ
ರಾಯಣ್ಣ
ಮುಂಡರಗಿ ಭೀಮರಾಯ
ಮೈಲಾರ ಮಹಾದೇವ
ಹೆರ್ಡೆಕರ್ ಮಂಜಪ್ಪ
ಡೆಪ್ಯೂಟಿ ಚನ್ನಬಸಪ್ಪ
ಹಳಕಟ್ಟಿ
ಆಲೂರು ವೆಂಕಟರಾಯರು
ಗಂಗಾಧರ ದೇಶಪಾಂಡೆ
ಅನಕೃ
ಕುವೆಂಪು
ಬಿಎಂಶ್ರೀ
ತೀನಂಶ್ರೀ
ಸಿದ್ದಪ್ಪ ಕಂಬಳಿ
ಶಿಶುನಾಳ ಶರೀಫ
ಸಿದ್ದಾರೂಢ
ಗಂಗೂಭಾಯಿ ಹಾನಗಲ್
ಹೀಗೆ ನೂರಾರು ಮಹನೀಯರಿದ್ದಾರೆ


ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Public demand Siddaramaiah government to rename Indira Canteen by any local leaders, doyens of Kannada literature.
Please Wait while comments are loading...