ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲ್ಲಿಕಾರ್ಜುನ ಬಂಡೆ ಪತ್ನಿ ಮಲ್ಲಮ್ಮ ವಿಧಿವಶ

|
Google Oneindia Kannada News

ಕಲಬುರಗಿ, ಜುಲೈ 09 : ಹುತಾತ್ಮ ಮಲ್ಲಿಕಾರ್ಜುನ ಬಂಡೆ ಅವರ ಪತ್ನಿ ಮಲ್ಲಮ್ಮ ಬಂಡೆ ಅವರು ಸಾವನ್ನಪ್ಪಿದ್ದಾರೆ. 2014ರ ಜನವರಿ 8ರಂದು ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಅವರು ರೌಡಿ ಶೀಟರ್ ಮುನ್ನಾ ಗುಂಡೇಟೆನಿಂದ ಗಾಯಗೊಂಡು ಹುತಾತ್ಮರಾಗಿದ್ದರು.

ಶನಿವಾರ ಮುಂಜಾನೆ 5 ಗಂಟೆ ಸುಮಾರಿಗೆ ಕಲಬುರಗಿಯ ಸಹೋದರಿಯ ಮನೆಯಲ್ಲಿ ಮಲ್ಲಮ್ಮ ಅವರು ಮೃತಪಟ್ಟಿದ್ದಾರೆ. ಬ್ರೈನ್ ಟ್ಯೂಮರ್‌ನಿಂದ ಬಳಲುತ್ತಿದ್ದ ಅವರು, ಹಲವು ದಿನಗಳ ಕಾಲ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದು ಮೂರು ತಿಂಗಳ ಹಿಂದೆ ಮನೆಗೆ ಮರಳಿದ್ದರು. [ಧರಣಿ ಕೂತ ಮಲ್ಲಿಕಾರ್ಜುನ ಬಂಡೆ ತಂದೆ]

mallamma

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಮೇಲ್ವಿಚಾರಕಿಯಾಗಿ ಮಲ್ಲಮ್ಮ ಅವರು ಕೆಲಸ ಮಾಡುತ್ತಿದ್ದರು. ಮಲ್ಲಿಕಾರ್ಜುನ ಬಂಡೆ, ಮಲ್ಲಮ್ಮ ದಂಪತಿಗೆ ಶಿವಾನಿ ಮತ್ತು ಸಾಯಿ ಎಂಬ ಇಬ್ಬರು ಮಕ್ಕಳಿದ್ದು, ತಂದೆ-ತಾಯಿಯನ್ನು ಕಳೆದುಕೊಂಡು ಅವರು ಅನಾಥರಾಗಿದ್ದಾರೆ.[ಮಲ್ಲಿಕಾರ್ಜುನ ಬಂಡೆ ಪ್ರಕರಣದ ಹಿನ್ನೋಟ]

ಪ್ರತಿಭಟನೆ ನಡೆಸಿದ್ದರು : 2016ರ ಫೆಬ್ರವರಿಯಲ್ಲಿ ಬೆಂಗಳೂರಿನ ಮೌರ್ಯ ಸರ್ಕಲ್ ಬಳಿ ಇರುವ ಗಾಂಧಿ ಪ್ರತಿಮೆ ಮುಂದೆ ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಅವರ ತಂದೆ ಕರಿಬಸಪ್ಪ ಅವರು ಪ್ರತಿಭಟನೆ ನಡೆಸಿದ್ದರು. ವಿವಿಧ ಸಂಘಟನೆಗಳ ಸದಸ್ಯರು ಮತ್ತು ಪ್ರತಿಪಕ್ಷ ಬಿಜೆಪಿಯ ನಾಯಕರು ಅವರಿಗೆ ಬೆಂಬಲ ನೀಡಿದ್ದರು. [ಮಲ್ಲಿಕಾರ್ಜುನ ಬಂಡೆ ಕೊಂದಿದ್ದು ಮುನ್ನಾ]

ಪಿಎಸ್ಐ ಮಲ್ಲಿಕಾರ್ಜುನ ಬಂಡೆಯವರ ಅಂತ್ಯಕ್ರಿಯೆ ಸಂದರ್ಭದಲ್ಲಿ ಸರ್ಕಾರ ಕೊಟ್ಟ ಭರವಸೆಗಳು ಈಡೇರಿಲ್ಲವೆಂದು ಅಳಲು ತೋಡಿಕೊಂಡಿದ್ದ ಕರಿಬಸಪ್ಪ ಅವರು, ಮಲ್ಲಮ್ಮ ಬಂಡೆ ಅವರು ಬ್ರೈನ್ ಟ್ಯೂಮರ್‌ನಿಂದ ಬಳಲುತ್ತಿದ್ದಾರೆ. ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಬೇಕು ಎಂದು ಒತ್ತಾಯಿಸಿದ್ದರು. [ಬಂಡೆ ಕುಟುಂಬದ ಬೇಡಿಕೆಗೆ ಸ್ಪಂದಿಸಿದ ಸಿದ್ದರಾಮಯ್ಯ]

ಮಲ್ಲಿಕಾರ್ಜುನ ಬಂಡೆ ಅವರ ಸಾವಿನ ನಂತರ ಮಲ್ಲಮ್ಮ ಅವರು ಬಹಳವಾಗಿ ನೊಂದಿದ್ದರು. ಬ್ರೈನ್ ಟ್ಯೂಮರ್ ಕಾಣಿಸಿಕೊಂಡ ನಂತರ ಅವರ ಆರೋಗ್ಯ ಹದಗೆಟ್ಟಿತ್ತು. ಆಳಂದ ತಾಲೂಕು ಖಜೂರಿ ಗ್ರಾಮದಲ್ಲಿರುವ ಮಲ್ಲಿಕಾರ್ಜುನ ಬಂಡೆ ಅವರ ಸಮಾಧಿ ಪಕ್ಕದಲ್ಲಿಯೇ ಇಂದು ಸಂಜೆ ಮಲ್ಲಮ್ಮ ಅವರ ಅಂತ್ಯಕ್ರಿಯೆ ನಡೆಯಲಿದೆ.

ಪೂರ್ಣ ವೇತನ ಸಿಕ್ಕಿಲ್ಲ : ಮಲ್ಲಿಕಾರ್ಜು ಬಂಡೆ ಅವರ ಕುಟುಂಬಕ್ಕೆ 55 ಲಕ್ಷ ಪರಿಹಾರ ಹಾಗೂ ನಿವೇಶನ ನೀಡಿದ್ದೇವೆ ಎಂದು ಸರ್ಕಾರ ಹೇಳಿದೆ. ಆದರೆ, ಬಂಡೆ ಅವರ ನಿವೃತ್ತಿ­ವರೆಗಿನ ವೇತನ ನೀಡಲಾಗುವುದು ಎಂದು ಮೊದಲು ಭರವಸೆ ನೀಡಲಾಗಿತ್ತು. ಅದನ್ನು ನೀಡಿಲ್ಲ ಎಂದು ಬಂಡೆ ಕುಟುಂಬದವರು ಆರೋಪಿಸಿದ್ದಾರೆ.

English summary
Mallamma Bande (40) passed away at Kalaburagi, Karnataka on July 9, 2016. Mallamma wife of PSI Mallikarjun Bande who was killed during a shootout with criminal Munna on January 8, 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X