Property: ಹೊಸ ಜಾಗ, ಕಟ್ಟಡ ಖರೀದಿ ಮಾಡಿದವರು ಸರ್ಕಾರದ ಈ ನಿಯಮ ಪಾಲಿಸಬೇಕು

ಹೊಸ ನಿವೇಶನ ಅಥವಾ ಈಗಾಗಲೇ ಕಟ್ಟಿರುವ ಕಟ್ಟಡಗಳನ್ನು ಖರೀದಿ ಮಾಡುವವರಿಗೆ ರಾಜ್ಯ ಸರ್ಕಾರವು ಪ್ರಮುಖ ಸೂಚನೆಯೊಂದನ್ನು ಕೊಟ್ಟಿದೆ. ರಾಜ್ಯದಲ್ಲಿ ಯಾರಾದರೂ ಆಸ್ತಿ ಖರೀದಿ ಮಾಡುವುದಕ್ಕೆ ಆಸಕ್ತಿ ಇರುವವರು ಈ ಸೂಚನೆಗಳನ್ನು ಪಾಲಿಸಬೇಕಾಗುತ್ತದೆ. ಇದು ಆಸ್ತಿಯ ಒಪ್ಪಂದ ನೋಂದಣಿಯ ಕುರಿತಾಗಿದೆ. ಈ ಮಾಹಿತಿಯನ್ನು ಕಡ್ಡಾಯವಾಗಿ ತಿಳಿದುಕೊಳ್ಳುವುದು ಉತ್ತಮ. ಹೊಸದಾಗಿ ಖರೀದಿ ಮಾಡಿದ ಸೈಟು ಅಥವಾ ಮನೆಯನ್ನು ನೋಂದಣಿ ಮಾಡಲು ಕಾವೇರಿ ತಂತ್ರಾಂಶದಲ್ಲಿ ನಮೂದಿಸುವಾಗ ಕೆಲವೊಂದು ವಿಷಯಗಳನ್ನು ಗಮನಿಸುವುದು ಉತ್ತಮ ಎಂದು ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಹೇಳಿದೆ. ಹಾಗಾದರೆ ಹೊಸ ಆಸ್ತಿದಾರರಿಗೆ ರಾಜ್ಯ ಸರ್ಕಾರ ಕೊಟ್ಟಿರುವ ಸೂಚನೆ ಏನು, ಮನೆ ಹಾಗೂ ಜಾಗ ಖರೀದಿ ಮಾಡುವವರು ಯಾವ ನಿಯಮವನ್ನು ಪಾಲಿಸಬೇಕು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಹೊಸ ನಿವೇಶನ ಹಾಗೂ ಕಟ್ಟಡಗಳನ್ನು ಖರೀದಿ ಮಾಡಿರುವವರು ಕಾವೇರಿ ತಂತ್ರಾಂಶದಲ್ಲಿ ಮಾಹಿತಿಯನ್ನು ನಮೂದಿಸುವಾಗ ಸ್ಟಾರ್ಟ್‌ ಎ ನ್ಯೂ ಅಪ್ಲಿಕೇಷನ್ (Start a New Application) ಎನ್ನುವುದರ ಮೇಲೆ ಕ್ಲಿಕ್‌ ಮಾಡಬೇಕು. ಇದಾದ ಮೇಲೆ ಎರಡನೇಯದಾಗಿ ಡಾಕ್ಯುಮೆಂಟ್‌ ರಿಜಿಸ್ಟ್ರೇಷನ್ ಎನ್ನುವ ಆಯ್ಕೆಯ ಮೇಲೆ ಕ್ಲಿಕ್‌ ಮಾಡಬೇಕು. ಅದಾದ ಮೇಲೆ ಕಂಟಿನ್ಯೂ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ಕಿಸಬೇಕು. ಇದಾದ ಮೇಲೆ ಸೆಲೆಕ್ಟ್‌ ಆರ್ಟಿಕಲ್ ಹಾಗೂ ಸಬ್‌ ಆರ್ಟಿಕಲ್‌ ಎನ್ನುವ ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ನೇಚರ್‌ ಆಫ್‌ ಡಾಕ್ಯೂಮೆಂಟ್ ಇದ್ದರೆ ಅಗ್ರಿಮೆಂಟ್‌ ಎಂದು ಆಯ್ಕೆ ಮಾಡಿಕೊಳ್ಳಬೇಕು. ಈ ಆಯ್ಕೆ ಅದರಲ್ಲಿಯೇ ಕಾಣಿಸುತ್ತದೆ.

Property Those Who Purchase New land and Buildings Must Follow this Government Rule

ನಂತರ ಆರ್ಟಿಕಲ್ ಎನ್ನುವ ಎರಡನೇ ಆಯ್ಕೆಯಲ್ಲಿ ಒಪ್ಪಂದ ಅಥವಾ ಜ್ಞಾಪಕ ಪತ್ರ ಒಪ್ಪಂದ (Agreement or Memorandum Agreement) ಎನ್ನುವ ಆಯ್ಕೆಯನ್ನು ಸೆಲೆಕ್ಟ್‌ ಮಾಡಿಕೊಳ್ಳಬೇಕು. ಇದರಲ್ಲಿ ಮೂರನೆಯದಾಗಿ ಸಬ್‌ ಆರ್ಟಿಕಲ್ ಎನ್ನುವುದರ ಮೇಲೆ ಕ್ಲಿಕ್‌ ಮಾಡಬೇಕು. ಇದರಲ್ಲಿ ಫ್ಲಾಟ್ / ಸೈಟ್‌ನ ಮೊದಲ ಮಾರಾಟಕ್ಕೆ ಒಪ್ಪಂದ (Agreement for First Sale of Flat / Site) ಎನ್ನುವ ಆಯ್ಕೆ ಕಾಣಿಸುತ್ತದೆ ಎನ್ನುವುದು ಒತ್ತಿ.

ಇದಾದ ಮೇಲೆ ಮಾಹಿತಿ ಡಿಸ್‌ಪ್ಲೈ ಆಗುತ್ತದೆ. ನೇಚರ್‌ ಆಫ್‌ ಅಗ್ರಿಮೆಂಟ್‌. ಆರ್ಟಿಕಲ್‌ ಹಾಗೂ ಸಬ್‌ ಆರ್ಟಿಕಲ್‌ನ ವಿವರಗಳು ಇರುತ್ತವೆ. ಇದೆಲ್ಲ ಆದ ಮೇಲೆ ನೀವು ಎಲ್ಲಾ ಅಂಶಗಳು ಸರಿಯಾಗಿ ಇದೆಯೇ ಎಂದು ಗಮನಿಸಿಕೊಂಡು ಕಂಟಿನ್ಯೂ ಎನ್ನುವ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ. ಇದಾದ ಮೇಲೆ ನಿಮ್ಮ ಸ್ವತ್ತು ಯಾವ ವ್ಯಾಪ್ತಿಗೆ ಒಳಪಡುತ್ತದೆ ಎನ್ನುವುದನ್ನು ಆಯ್ಕೆ ಮಾಡಿಕೊಳ್ಳಿ. ಅದರಲ್ಲಿ ಇ - ಸ್ವತ್ತು, ಇ - ಆಸ್ತಿ ಹಾಗೂ ಯುಎಲ್‌ಎಂಎಸ್‌ ಎನ್ನುವ ಆಯ್ಕೆಗಳು ಕಾಣಿಸುತ್ತವೆ.

Property Those Who Purchase New land and Buildings Must Follow this Government Rule

ಇದರಲ್ಲಿ ಸೂಕ್ತವಾದದ್ದನ್ನು ಆಯ್ಕೆ ಮಾಡಿಕೊಂಡು ಮುಂದಿನ ಮಾಹಿತಿಗಳನ್ನ ಎಂಟ್ರಿ ಮಾಡಬಹುದಾಗಿದೆ ಅಂತ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಮಾಹಿತಿ ನೀಡಿದೆ. ಹೀಗಾಗಿ, ಹೊಸ ನಿವೇಶನ ಅಥವಾ ಈಗಾಗಲೇ ಕಟ್ಟಿರುವ ಕಟ್ಟಡಗಳನ್ನು ಖರೀದಿ ಮಾಡುವವರು ಒಪ್ಪಂದ ನೋಂದಣಿ ಸಮಯದಲ್ಲಿ ಈ ವಿಷಯಗಳನ್ನು ಪಾಲಿಸಬೇಕು ಎಂದು ಹೇಳಲಾಗಿದೆ.

ಯಾಕೆ ಈ ನಿಯಮ: ಇನ್ನು ಈ ನಿಯಮವನ್ನು ಜಾರಿ ಮಾಡಿದುವರ ಹಿಂದೆ ಆಸ್ತಿ ಹಾಗೂ ಕಟ್ಟಡ ಖರೀದಿದಾರರಿಗೆ ಮೋಸವಾಗಬಾರದು. ಅಲ್ಲದೆ ಸರ್ಕಾರಕ್ಕೂ ತೆರಿಗೆ ವಿಚಾರದಲ್ಲಿ ಯಾವುದೇ ಮೋಸವಾಗಬಾರದು ಎನ್ನುವುದು ಸೇರಿದಂತೆ ಹಲವು ಕಾರಣಗಳು ಇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+