Property: ನಿಮ್ಮ ಆಸ್ತಿ ಮಾರಿಕೊಳ್ಳಬೇಡಿ, ನಿಮ್ಮ ಆಸ್ತಿಗೆ ಚಿನ್ನದ ಬೆಲೆ; ಎಲ್ಲೆಲ್ಲಿ ಆಸ್ತಿ ಬೆಲೆ ಹೆಚ್ಚಳ?
ರಾಮನಗರ, ಸೆಪ್ಟೆಂಬರ್ 05: ಬೆಂಗಳೂರು ದಕ್ಷಿಣ ಜಿಲ್ಲೆ ಮುಖ್ಯಕೇಂದ್ರ ರಾಮನಗರದಲ್ಲಿ ನಾನು ಮಾತನಾಡುತ್ತಿದ್ದೇನೆ. ಬೆಂಗಳೂರಿನ ಅಸ್ತಿತ್ವ ಉಳಿಸಿಕೊಳ್ಳಲು ಈ ಜಿಲ್ಲೆಯ ಚನ್ನಪಟ್ಟಣ, ರಾಮನಗರ, ರಾಮನಗರ, ಕನಕಪುರ, ಮಾಗಡಿ, ಹಾರೋಹಳ್ಳಿ ಭಾಗದ ಬಹಳಷ್ಟು ಜನರ ಬಯಕೆಯಂತೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಘೋಷಣೆ ಮಾಡಲಾಯಿತು. ನಮ್ಮನ್ನು ನೋಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನರು ತಮ್ಮ ಜಿಲ್ಲೆಯ ಹೆಸರನ್ನು ಬೆಂಗಳೂರು ಉತ್ತರ ಎಂದು ಬದಲಾವಣೆ ಮಾಡಿಕೊಂಡಿದ್ದಾರೆ. ಇದೀಗ ಈ ಭಾಗದಲ್ಲಿ ನಿಮ್ಮ ಆಸ್ತಿಗೆ ಚಿನ್ನದ ಬೆಲೆ ಇದೆ ಎಂದು ಡಿ ಕೆ ಶಿವಕುಮಾರ್ ಹೇಳಿದರು.
ಕೆಂಗಲ್ ಹನುಮಂತಯ್ಯ ಅವರು ವಿಧಾನಸಧ ಕಟ್ಟಿದರು. ಮಾಗಡಿ ಕೆಂಪೇಗೌಡರು ಬೆಂಗಳೂರನ್ನು ಕಟ್ಟಿದಾಗ, ಈ ನಗರ ಇಷ್ಟು ವಿಸ್ತೀರ್ಣವಾಗಿ ಬೆಳೆಯುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಸಧ್ಯ ಬೆಂಗಳೂರಿನಲ್ಲಿ 1.40 ಕೋಟಿ ಜನಸಂಖ್ಯೆ ಬೆಂಗಳೂರಿನಲ್ಲಿದೆ. 75 ಲಕ್ಷ ಜನ ಹೊರಗಿನಿಂದ ಬೆಂಗಳೂರಿಗೆ ಆಗಮಿಸಿ ಕೆಲಸ ಮಾಡಿ ವಾಪಸ್ ಹೋಗುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದರು.

ಈ ಹಿಂದೆ ನಾನು ಈ ಭಾಗದ ಶಿವನಹಳ್ಳಿಯಲ್ಲಿ ನೀವುಗಳು ಯಾರೂ ನಿಮ್ಮ ಆಸ್ತಿ ಮಾರಿಕೊಳ್ಳಬೇಡಿ, ನಿಮ್ಮ ಆಸ್ತಿಗಳು ಚಿನ್ನದಂತಾಗುತ್ತದೆ ಎಂದು ಹೇಳಿದ್ದೆ. ನನ್ನ ಮಾತನ್ನು ಇಡೀ ಜಿಲ್ಲೆಯ ಜನ ಟೀಕೆ ಮಾಡಿದರು, ಚರ್ಚೆ ಮಾಡಿದರು. ನಾನು ಅವುಗಳಿಗೆ ತಲೆಕೆಡಿಸಿಕೊಳ್ಳದೆ ನಮ್ಮ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ. ಈ ಜಿಲ್ಲೆಯ ಶಾಸಕರು, ಪರಿಷತ್ ಸದಸ್ಯರು, ಮಾಜಿ ಸಂಸದರು ನಿಮ್ಮ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ. ನಮ್ಮ ಅವಧಿಯಲ್ಲಿ ನಿಮಗೆ ಕೊಡುಗೆ ನೀಡಬೇಕು ಎಂದು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.
ನಮ್ಮ ಊರಿನ ಜನ ಬೆಂಗಳೂರಿಗೆ ಹೋಗುವ ಬದಲು, ನಮ್ಮ ಊರಿನಲ್ಲೇ ಬೆಂಗಳೂರನ್ನು ಕಾಣಬೇಕು, ಅಲ್ಲಿನ ರೀತಿ ಶಾಲೆ ಇಲ್ಲಿಯೂ ಇರಬೇಕು, ಅಲ್ಲಿಯ ರೀತಿ ಇಲ್ಲೇ ಕೆಲಸ ಮಾಡಬೇಕು ಎಂಬುದು ನನ್ನ ಚಿಂತನೆ. ಬೆಂಗಳೂರು ಜಾಗತಿಕ ನಗರವಾಗಿದೆ. ಬೇರೆ ಬೇರೆ ಜಿಲ್ಲೆಯಿಂದ ಹೊರಬಂದು ಇಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಹಾಗೂ ಆಸ್ತಿ ಮಾಡುತ್ತಿದ್ದಾರೆ. ಇಂದು ಬೆಳಗ್ಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಮನಗರದ ಮೆಡಿಕಲ್ ಕಾಲೇಜು ಕಾಮಗಾರಿ ನಡೆಯುತ್ತಿದೆ. ಕನಕಪುರದ ಮೆಡಿಕಲ್ ಕಾಲೇಜಿಗೆ ವಸತಿ ಮಂಡಳಿಯಿಂದ 25 ಎಕರೆ ಜಾಗಕ್ಕೆ 60 ಕೋಟಿ ಮೀಸಲಿಡಲು ತೀರ್ಮಾನಿಸಲಾಗಿದೆ. ಮುಂದಿನ ಸಚಿವಸಂಪುಟ ಸಭೆಯಲ್ಲಿ ಉಳಿದ ಹಣ ಬರಲಿದೆ. ನಾವು ಕೊಟ್ಟ ಮಾತು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಈ ಹಿಂದೆ ಬಿಡದಿ ಸ್ಮಾರ್ಟ್ ಸಿಟಿ ಎಂದು ಸ್ಥಾಪಿಸಲಾಗಿತ್ತು. ಈಗ ಇಲ್ಲಿ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ ಮಾಡಲು ತೀರ್ಮಾನಿಸಿದ್ದೇವೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈ ಹಿಂದೆ 18-10-2006ರಂದು ರಾಮನಗರ, ಸೋಲೂರು, ನಂದಗುಡಿ, ಸಾತನೂರು ಹಾಗೂ ಬಿಡದಿಯಲ್ಲಿ ಪಿಪಿಪಿ ಮಾದರಿಯಲ್ಲಿ ಟೌನ್ ಶಿಪ್ ಮಾಡಲು ತೀರ್ಮಾನಿಸಿದ್ದರು. 18-10-2006ರಂದು ಜಾಗತಿಕ ಟೆಂಡರ್ ಕರೆದಿದ್ದರು. 26-10-2007ರಂದು ಡಿಎಲ್ಎಫ್ ಅವರಿಗೆ ವರ್ಕ್ ಆರ್ಡರ್ ಹೊರಡಿಸಿದ್ದರು.
29-04-2009ರಂದು ಯಡಿಯೂರಪ್ಪನವರು ಇದನ್ನು ಹಿಂಪಡೆಯುತ್ತಾರೆ. 1-6-2020ರಂದು ಎರಡನೇ ಬಾರಿಗೆ ಜಾಗತಿಕ ಟೆಂಡರ್ ಕರೆಯುತ್ತಾರೆ. 3-11-2011ರಂದು ಸದಾನಂದ ಗೌಡರ ಅವಧಿಯಲ್ಲಿ ಪಟ್ಟಣ ಯೋಜನೆ ಕೈಗೆತ್ತಿಕೊಳ್ಳುವಂತೆ ಆದೇಶ ನೀಡುತ್ತಾರೆ. ಸಿದ್ದರಾಮಯ್ಯ ಅವರ ಸರ್ಕಾರ 38 ಹಳ್ಳಿಗಳನ್ನು ಸೇರಿಸಿ 3-6-2026ರಂದು ಮಹಾ ಬೆಂಗಳೂರು ಬಿಡದಿ ಸ್ಮಾರ್ಟ್ ಸಿಟಿ ಯೋಜನಾ ಪ್ರದೇಶವನ್ನು ಘೋಷಿಸುತ್ತಾರೆ. 06-01-2020ರಂದು ಯಡಿಯೂರಪ್ಪನವರ ಸರ್ಕಾರ 910 ಎಕರೆ ಭೂಮಿಯನ್ನು ಕೈಗಾರಿಕಾ ಪ್ರದೇಶವೆಂದು ಘೋಷಿಸಿ ಕೆಐಎಡಿಬಿಗೆ ನೀಡುತ್ತಾರೆ.
ನಂತರ ನಾನು ಅಧಿಕಾರಕ್ಕೆ ಬಂದ ನಂತರ 18-11-2023ರಂದು ಇದನ್ನು ಮಾಹಾ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವಾಗಿ ಮೇಲ್ದರ್ಜೆಗೆ ಏರಿಸಲಾಯಿತು. 15-2-2024ರಂದು ಬಜೆಟ್ ನಲ್ಲಿ ಬೆಂಗಳೂರಿನ ಸುತ್ತಮುತ್ತ ಸಮಗ್ರ ಪಟ್ಟಣ ಯೋಜನೆ ತರುವುದಾಗಿ ಘೋಷಿಸಲಾಯಿತು. 10-2-2025ರಂದು ಬಿಡದಿಯಲ್ಲಿ ಸಮಗ್ರ ಪಟ್ಟಣ ನಿರ್ಮಾಣಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮತಿ ನೀಡಲಾಯಿತು. 12-3-2025ರಂದು ಭೂಸ್ವಾಧೀನ ಸಂಬಂಧ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಯಿತು ಎಂದು ವಿವರಿಸಿದರು.












Click it and Unblock the Notifications