45 ಐಪಿಎಸ್ ಅಧಿಕಾರಿಗಳಿಗೆ ಬಡ್ತಿ, ಡಿಜಿಪಿ ಆಗಿ ಬಡ್ತಿ ಪಡೆದ ಸಿಎಚ್ ಪ್ರತಾಪ್ ರೆಡ್ಡಿ

ಬೆಂಗಳೂರು, ಜನವರಿ 01: ಬೆಂಗಳೂರು ನಗರ ಪೊಲೀಸ್ ಆಯುಕ್ತ ಸಿ.ಎಚ್ ಪ್ರತಾಪ್ ರೆಡ್ಡಿ ಅವರು ಎಡಿಜಿಪಿಯಿಂದ ಡಿಜಿಪಿಯಾಗಿ ಬಡ್ತಿ ಪಡೆದಿದ್ದಾರೆ. ಈ ಬಡ್ತಿಯಿಂದಾಗಿ ಅವರು ಬೆಂಗಳೂರಲ್ಲೇ ನಗರ ಟಾಪ್ ಕಾಪ್ ಆಗಿ ಮುಂದುವರಿಯಲಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರ ಶನಿವಾರ 45 ಐಪಿಎಸ್ ಅಧಿಕಾರಿಗಳಿಗೆ ಬಡ್ತಿ ನೀಡುವ ಜೊತೆಗೆ ಐವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಸಾಮಾನ್ಯವಾಗಿ ನಗರ ಪೊಲೀಸ್ ಆಯುಕ್ತರ ಹುದ್ದೆ ಎಡಿಜಿಪಿ ಹುದ್ದೆಯ ಬಡ್ತಿಗೆ ಮೀಸಲಾಗಿದೆ.

ಕಾರಾಗೃಹ ಇಲಾಖೆ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅಲೋಕ್ ಮೋಹನ್ ಅವರು ನಿವೃತ್ತರಾಗಿರುವ ಹಿರಿಯ ಐಪಿಎಸ್ ಅಧಿಕಾರಿ ಅಮರ್ ಕುಮಾರ್ ಪಾಂಡೆ ಅವರ ಬದಲಿಗೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ (ಡಿಜಿಪಿ) ವರ್ಗಾಯಿಸಲಾಗಿದೆ.

Promoted for 45 IPS Officers in Karnataka, CH Pratap reddy promoted to as DGP

ಎಂ.ಚಂದ್ರಶೇಖರ್ ಅವರನ್ನು ಎಡಿಜಿಪಿಯಾಗಿ ಬಡ್ತಿ ನೀಡಿ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ (ಪೂರ್ವ ವಿಭಾಗ) ನಿಯೋಜಿಸಲಾಗಿದೆ. ಮತ್ತೊಬ್ಬ ಹಿರಿಯ ಐಪಿಎಸ್ ಅಧಿಕಾರಿ ಸೌಮೇಂದು ಮುಖರ್ಜಿ ಅವರನ್ನು ಎಡಿಜಿಪಿಯಾಗಿ ಬಡ್ತಿ ನೀಡಿ ಪೊಲೀಸ್ ಕಂಪ್ಯೂಟರ್ ವಿಭಾಗಕ್ಕೆ ನಿಯೋಜಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

Promoted for 45 IPS Officers in Karnataka, CH Pratap reddy promoted to as DGP

ಅದೇ ರೀತಿ ಬಿ.ಆರ್ ರವಿಕಾಂತೇಗೌಡ ಅವರನ್ನು ಐಜಿಪಿಯಾಗಿ ಬಡ್ತಿ ನೀಡಿ ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ಕೇಂದ್ರ ವ್ಯಾಪ್ತಿಯಲ್ಲಿ ನಿಯೋಜಿಸಲಾಗಿದೆ. ಎಸ್.ಡಿ.ಶರಣಪ್ಪ (ಪೊಲೀಸ್-ಅಪರಾಧದ ಜಂಟಿ ಆಯುಕ್ತ) ಮತ್ತು ಎಂ.ಎನ್.ಅನುಚೇತ್ (ಪೊಲೀಸ್-ಸಂಚಾರ ಜಂಟಿ ಕಮಿಷನರ್) ಇಬ್ಬರೂ ಪೊಲೀಸ್ ಉಪ ಮಹಾನಿರೀಕ್ಷಕರಾಗಿ (ಡಿಐಜಿಪಿ) ಬಡ್ತಿ ಪಡೆದಿದ್ದಾರೆ. ಅವರು ಅದೇ ಹುದ್ದೆಗಳಲ್ಲಿ ಮುಂದುವರಿಯಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+