'ಬಿಜೆಪಿ ನಾಯಕರು ಸಿಲಿಂಡರ್ ಬೆಲೆ ಏರಿಕೆಯನ್ನು ಸಮರ್ಥಿಸುವುದೋ..ಯಾತ್ರೆ ಕೈಬಿಡುವುದೋ'

ಬೆಂಗಳೂರು, ಏಪ್ರಿಲ್‌ 09: ದರ ಏರಿಕೆ ಖಂಡಿಸಿ ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ರಾಜ್ಯಾದ್ಯಂತ ಹೋರಾಟ ನಡೆಸುತ್ತಿದ್ದಾರೆ. ಇಂದು ಬಿಜೆಪಿ ಜನಾಕ್ರೋಶ ಪ್ರತಿಭಟನೆ ಮಡಿಕೇರಿಯಲ್ಲಿ ನಡೆಯುತ್ತಿದ್ದು, ಕಾಂಗ್ರೆಸ್‌ ಸರ್ಕಾರ ದಿನೇ ದಿನೇ ಒಂದಿಲ್ಲೊಂದು ಬೆಲೆ ಏರಿಕೆ ಮಾಡಿ ಜನರನ್ನು ಸುಲಿಗೆ ಮಾಡುತ್ತಿರುವ ಭ್ರಷ್ಟ ಸರ್ಕಾರ ಎಂದು ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.

ಬಿಜೆಪಿ ನಾಯಕರ ಈ ಜನಾಕ್ರೋಶ ಪ್ರತಿಭಟನೆಯನ್ನು ಟೀಕೆ ಮಾಡಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ, ಬಿಜೆಪಿ ನಾಯಕರು ನಡೆಸಬೇಕಿರುವುದು ಜನಾಕ್ರೋಶ ಯಾತ್ರೆಯಲ್ಲ ಕ್ಷಮೆಯಾಚನೆ ಯಾತ್ರೆ ಎಂದಿದ್ದಾರೆ.

Priyank Kharge Urges BJP Leaders to Conduct Apology March Amid Price Hike Protests

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸವಿವರವಾಗಿ ಬರೆದುಕೊಂಡಿರುವ ಅವರು, ರಾಜ್ಯ ಬಿಜೆಪಿ ನಾಯಕರು ಮಾಡಬೇಕಿರುವುದು ಕ್ಷಮೆಯಾಚನೆ ಯಾತ್ರೆ ಹೊರತು ಜನಾಕ್ರೋಶ ಯಾತ್ರೆಯಲ್ಲ, ಏಕೆಂದರೆ ಜನರ ಆಕ್ರೋಶಕ್ಕೆ ಗುರಿಯಾಗಿರುವುದು ಸ್ವತಃ ಬಿಜೆಪಿ. ಅಂದಹಾಗೆ, ಬಿಜೆಪಿಯವರು ಈಗ ಎಲ್ಲಿ ಜನಾಕ್ರೋಶ ಪ್ರತಿಭಟನೆ ಕೈಗೊಳ್ಳುತ್ತಾರೆ, ಪ್ರಧಾನಿ ಕಚೇರಿ ಮುಂದೆಯೋ? ಕೇಶವ ಕೃಪಾದ ಎದುರೋ ಅಥವಾ ಜಂತರ್ ಮಂಥರ್ ನಲ್ಲೋ? ಮತ್ತೆ ₹50 ಏರಿಕೆಯಾದ ಅಡುಗೆ ಅನಿಲದ ಬೆಲೆಯನ್ನು, ಮತ್ತೆ ಏರಿಕೆಯಾದ ಟೋಲ್ ಶುಲ್ಕವನ್ನು, ಮತ್ತೆ ಏರಿಕೆಯಾದ ಇಂಧನ ತೈಲಗಳ ಸುಂಕವನ್ನು ಎಲ್ಲಿ ನಿಂತು ಪ್ರಶ್ನಿಸುತ್ತಾರೆ? ಎಂದಿದ್ದಾರೆ.

ಹಿಂದೆ ಕೇಂದ್ರ ಸರ್ಕಾರ ಇಂಧನ ತೈಲಗಳ ಬೆಲೆ ಏರಿಸಿದಾಗ ಪೆಟ್ರೋಲ್ ರೇಟ್ ಸಾವಿರ ಆಗಲಿ, ಬೈಕ್ ಮಾರಾಟ ಮಾಡಿ ಮೋದಿಗೆ ಓಟ್ ಹಾಕುತ್ತೇನೆ. ಎನ್ನುವ 2 ರುಪೀಸ್ ಕ್ಯಾಂಪೇನ್ ಮಾಡಿತ್ತು ಬಿಜೆಪಿ. ಅಲ್ಲದೇ ಬಿಜೆಪಿ ಶಾಸಕರೊಬ್ಬರು ಬೆಲೆ ಏರಿಕೆ ಎನ್ನುವವರು ಪಾಕಿಸ್ತಾನಕ್ಕೆ ಹೋಗಿ ಎಂದೂ ಸಹ ಹೇಳಿದ್ದರು.

Priyank Kharge Urges BJP Leaders to Conduct Apology March Amid Price Hike Protests

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ತೈಲಗಳ ಬೆಲೆ ಗಣನೀಯ ಕುಸಿತ ಕಂಡಿದ್ದಾಗಲೂ ಸಹ ಭಾರತದಲ್ಲಿ ಇಂಧನ ತೈಲಗಳ ಬೆಲೆಯನ್ನು ಗರಿಷ್ಠ ಮಟ್ಟಕ್ಕೇರಿಸಿದ ಕೇಂದ್ರ ಸರ್ಕಾರದ ಟ್ಯಾಕ್ಸ್ ಟೆರರಿಸಂನ್ನು ಜನರೆದುರು ಸಮರ್ಥಿಸುವರೇ? ₹400ರ ಆಸುಪಾಸಿನಲ್ಲಿದ್ದ ಗ್ಯಾಸ್ ಸಿಲಿಂಡರ್ ಈಗ ₹900ರ ಸಮೀಪಕ್ಕೆ ತಂದಿರುವ ಬಗ್ಗೆ ಜನರಲ್ಲಿರುವ ಆಕ್ರೋಶಕ್ಕೆ ಕ್ಷಮೆ ಕೇಳುವರೇ? ಎಂದು ಪ್ರಶ್ನಿಸಿದ್ದಾರೆ.

Take a Poll

ಜನಾಕ್ರೋಶ ಯಾತ್ರೆ ಹೊರಟಿರುವ ಬಿಜೆಪಿ ನಾಯಕರು ಈಗ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯನ್ನು ಸಮರ್ಥಿಸುವುದೋ ಅಥವಾ ಯಾತ್ರೆಯನ್ನು ಕೈಬಿಡುವುದೋ ಎಂಬ ಜಿಜ್ಞಾಸೆಯಲ್ಲಿದ್ದಾರೆ. ಮೋದಿ ಬೆಲೆ ಏರಿಕೆ ಮಾಡಿದರೆ ಮಾಸ್ಟರ್ ಸ್ಟ್ರೋಕ್, ಮೋದಿಯ ಅನರ್ಥ ನೀತಿಯಿಂದಾಗಿ ಬೇರೆಯವರು ಅನಿವಾರ್ಯವಾಗಿ ಬೆಲೆ ಏರಿಸಿದರೆ ಮಹಾಪರಾಧ ಎಂಬ ಧೋರಣೆಯ ಬಿಜೆಪಿಯ ಡಬಲ್ ಸ್ಟ್ಯಾಂಡರ್ಡ್ ದುರ್ಬುದ್ಧಿಗೆ ಜನತೆ ಸೊಪ್ಪು ಹಾಕುವುದಿಲ್ಲ ಎಂದು ಬಿಜೆಪಿ ವಿರುದ್ಧ ಸಚಿವ ಪ್ರಿಯಾಂಕ್‌ ಖರ್ಗೆ ವ್ಯಂಗ್ಯವಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+