ಹಬ್ಬದ ಸೀಸನ್ ಬಸ್ ದರ: ಖಾಸಗಿ ಬಸ್ಸುಗಳ ಜೊತೆ KSRTC ಪೈಪೋಟಿ

Posted By:
Subscribe to Oneindia Kannada

ಖಾಸಗಿ ಬಸ್ ಸಂಸ್ಥೆಗಳ ಜೊತೆ ಪೈಪೋಟಿ ನಡೆಸುವ ಅನಿವಾರ್ಯತೆಗೆ ಬಿದ್ದಿದ್ದ ರಾಜ್ಯ ರಸ್ತೆಸಾರಿಗೆ ಸಂಸ್ಥೆ ಪ್ರಪ್ರಥಮ ಬಾರಿಗೆ ವೋಲ್ವೊ ಹವಾನಿಯಂತ್ರಿತ ಬಸ್ಸುಗಳನ್ನ ಪರಿಚಯಿಸಿ ಸೈ ಅನಿಸಿಕೊಂಡಿತ್ತು. ವಾಯುವ್ಯ ಸಾರಿಗೆ ಘಟಕ ಹೊರತು ಪಡಿಸಿ ಕರ್ನಾಟಕ ರಾಜ್ಯ ರಸ್ತೆಸಾರಿಗೆ ಸಂಸ್ಥೆ (KSRTC) ಮತ್ತು ಈಶಾನ್ಯ ರಾಜ್ಯ ರಸ್ತೆ ಸಾರಿಗೆ (NEKRTC) ಸಂಸ್ಥೆಯ ಸೇವಾ ಗುಣಮಟ್ಟ ಸುಧಾರಿಸಿತ್ತು ಕೂಡಾ.

ಸುವರ್ಣ ಗೌರಿ ವ್ರತ: ತಿಳಿದಿರಲಿ ಈ 17 ಸಂಗತಿ

ಆ ಮೂಲಕ ಖಾಸಗಿ ಬಸ್ಸು ಸಂಸ್ಥೆಗಳಿಗೆ ಭರ್ಜರಿ ಪೈಪೋಟಿ ನೀಡಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಈಗ ಹಬ್ಬದ ಸೀಸನ್ ಬಸ್ ದರದ ವಿಚಾರದಲ್ಲಿ ಖಾಸಗಿ ಬಸ್ಸುಗಳ ಜೊತೆ ಪೈಪೋಟಿಗೆ ಬಿದ್ದಿರುವುದರಿಂದ, ಸರಕಾರವೇ ಮುಂದೆ ನಿಂತು ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಲು ಮುಂದಾಗಿರುವುದು ಮಾತ್ರ ದುರಂತ.

ಗೌರಿ-ಗಣೇಶ ಹಬ್ಬ, ಕೆಎಸ್ಆರ್‌ಟಿಸಿಯಿಂದ1000 ಹೆಚ್ಚುವರಿ ಬಸ್

ಹಬ್ಬಹರಿದಿನಗಳು ವಾರಾಂತ್ಯಕ್ಕೆ ಹೊಂದಿಕೊಂಡು ಅದ್ಯಾಕೆ ಬರುತ್ತೋ ಎಂದು ಪ್ರಯಾಣಿಕರು ವ್ಯಥೆ ಪಡುವಷ್ಟು ಬಸ್ ದರಗಳು ಏರಿಕೆಯಾಗಿವೆ. ನಿರ್ದಿಷ್ಟ ಮಾರ್ಗಸೂಚಿಯಿಲ್ಲದೇ ಬಸ್ ದರ ನಿಗದಿಪಡಿಸುತ್ತಿದ್ದ ಖಾಸಗಿ ಬಸ್ಸುಗಳ ಜೊತೆ ನಾವೇನು ಕಮ್ಮಿ ಎಂದು ಸರಕಾರವೂ ಬಸ್ ದರ ಏರಿಸಿರುವುದು ಪ್ರಯಾಣಿಕರು ಹಿಡಿಶಾಪ ಹಾಕುವಂತಾಗಿದೆ.

In Pics : ಗೌರಿ-ಗಣೇಶನನ್ನು ಬರ ಮಾಡಿಕೊಳ್ಳೋಣ ಬನ್ನಿ

ಹಬ್ಬದ ಸೀಸನ್ ನಲ್ಲಿ ಹೊರ ಭಾಗಕ್ಕೆ, ಹೊರ ರಾಜ್ಯಕ್ಕೆ 'ಹೆಚ್ಚುವರಿ ಬಸ್ ಸೇವೆ" ಎನ್ನುವ ಹೆಸರಿನಲ್ಲಿ ಸರಕಾರದ ಮುಂದಾಳುತ್ವದಲ್ಲಿ ರಸ್ತೆ ಸಾರಿಗೆ ಸಂಸ್ಥೆ 'ಹಗಲು-ರಾತ್ರಿ' ದರೋಡೆ ಮಾಡಲು ಪಣತೊಟ್ಟಂತಿದೆ. ಇದನ್ನು ಆಕ್ಷೇಪಿಸಿದರೆ ಬೇಕಿದ್ದರೆ ತಗೊಳ್ಳಿ..ಇಲ್ಲಾಂದ್ರೆ ಹೋಗ್ರೀ.. ಹೆಚ್ಚುವರಿ ಬಸ್ ಸೇವೆಗೆ, ಹೆಚ್ಚುವರಿ ದರ.. ಎನ್ನುವ ಉಡಾಫೆಯ ಉತ್ತರ ಅಧಿಕಾರಿಗಳಿಂದ ಬರುತ್ತಿದೆ.

ಬೆಂಗಳೂರು ಉತ್ಸವಗಳಲ್ಲಿ ಕನ್ನಡಿಗರ ಅವಗಣನೆ ಅನವರತ

ಹಬ್ಬದ ಸೀಸನ್ ಗಳಲ್ಲಿ ಖಾಸಗಿ ಸಂಸ್ಥೆಗಳು ಬಸ್ ದರ ಏರಿಸುವುದು ಇದೇನು ಹೊಸತಲ್ಲ. ಆದರೆ, ಸರಕಾರವೂ 'ಹೆಚ್ಚುವರಿ ಬಸ್ ಸೇವೆ" ಹೆಸರಿನಲ್ಲಿ ಬಸ್ ದರ ಏರಿಸುವ ಕೆಟ್ಟ ಪದ್ದತಿ ಇತ್ತೀಚಿನ ಕೆಲ ವರ್ಷಗಳಿಂದ ಆರಂಭವಾಗಿದ್ದು. ಇದೇ ರೀತಿ ವಿಮಾನಯಾನ ಪ್ರಯಾಣದ ದರಗಳು ಗಂಟೆಗೊಮ್ಮೆ ಬದಲಾಗುತ್ತಿವೆ.

ವರಸಿದ್ಧಿ ವಿನಾಯಕನ ವ್ರತಾಚರಣೆ ನಿಯಮ, ವಿಧಾನದ ಸಂಪೂರ್ಣ ಮಾಹಿತಿ

ಆ ಮೂಲಕ ಹಬ್ಬಕ್ಕೆ ಊರಿಗೆ ಹೋಗಲೇ ಬೇಕಾದ ಅನಿವಾರ್ತೆಯಲ್ಲಿರುವ ಪ್ರಯಾಣಿಕನ ಅಸಾಹಯಕತೆಯ ಲಾಭವನ್ನು ಸರಕಾರವೂ ಪಡೆದುಕೊಳ್ಳಲು ಮುಂದಾಗಿರುವುದು ವಿಷಾದನೀಯ. ಖಾಸಗಿ ಬಸ್ಸುಗಳ ದರ ಏರಿಕೆಗೆ ಗೊತ್ತು ಗುರಿಯಿಲ್ಲ. ಇನ್ನು ಸರಕಾರವೂ ಶೇ. 15-20ರಷ್ಟು ಬಸ್ ದರವನ್ನು ಏರಿಸಿದೆ.

ಕನ್ನಡದ ಗಂಧಗಾಳಿಯಿಲ್ಲದ ಗಣೇಶೋತ್ಸವ ಯಾರಿಗೆ ಬೇಕು?

ಉದಾಹರಣೆಗೆ ಖಾಸಗಿ ಬಸ್ಸುಗಳಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಮಾಮೂಲಿ ದಿನಗಳಲ್ಲಿ ನಾನ್ ಎಸಿ ಸ್ಲೀಪರ್ ಬಸ್ಸುಗಳಿಗೆ 750-900 ರೂಪಾಯಿ ಇದ್ದರೆ, ಇಂದು (ಆ 23) ಮತ್ತು ನಾಳೆಯ (ಆ 24) ದರ 1500-2100 ರೂಪಾಯಿಗಳವರೆಗಿದೆ.

ಹೆಚ್ಚುವರಿ ಬಸ್ ಸೇವೆ ಹೆಸರಿನಲ್ಲಿ ದರೋಡೆ

ಹೆಚ್ಚುವರಿ ಬಸ್ ಸೇವೆ ಹೆಸರಿನಲ್ಲಿ ದರೋಡೆ

ಬೆಂಗಳೂರಿನಿಂದ ರಾಜ್ಯದ ಪ್ರಮುಖ ನಗರಗಳಿಗೆ ಹೆಚ್ಚುವರಿ ಬಸ್ ಸೇವೆ ಹೆಸರಿನಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಸರಕಾರದ ಬಸ್ ದರ ಕೊಡುಗೆ ಇಂತಿದೆ (ಆವರಣದಲ್ಲಿ ಮಾಮೂಲಿ ದಿನಗಳಲ್ಲಿನ ದರ)
ಶಿವಮೊಗ್ಗ
ಕರ್ನಾಟಕ ಸಾರಿಗೆ - 317 (264)
ರಾಜಹಂಸ - 527 (421)
ಐರಾವತ - 587 (483)

ಬೀದರ್
ಕರ್ನಾಟಕ ಸಾರಿಗೆ - 1146 (906)
ಐರಾವತ - 1411 (1057)

ಉಡುಪಿ, ರಾಯಚೂರು ಕಡೆಗೆ ಎಷ್ಟು?

ಉಡುಪಿ, ರಾಯಚೂರು ಕಡೆಗೆ ಎಷ್ಟು?

ಉಡುಪಿ
ಕರ್ನಾಟಕ ಸಾರಿಗೆ - 496 (412)
ರಾಜಹಂಸ - 557 (421)
ಐರಾವತ - 872 (809)

ರಾಯಚೂರು
ಕರ್ನಾಟಕ ಸಾರಿಗೆ - 473 (550)
ನಾನ್ ಎಸಿ ಸ್ಲೀಪರ್ - 912 (759)

ಹುಬ್ಬಳ್ಳಿ, ಬಳ್ಳಾರಿಗೆ ಎಷ್ಟು ಬಸ್ ಚಾರ್ಚ್?

ಹುಬ್ಬಳ್ಳಿ, ಬಳ್ಳಾರಿಗೆ ಎಷ್ಟು ಬಸ್ ಚಾರ್ಚ್?

ಹುಬ್ಬಳ್ಳಿ
ಕರ್ನಾಟಕ ಸಾರಿಗೆ - 514 (434)
ರಾಜಹಂಸ - 672 (570)
ಐರಾವತ - 952 (793)

ಬಳ್ಳಾರಿ
ಕರ್ನಾಟಕ ಸಾರಿಗೆ - 377 (309)
ನಾನ್ ಎಸಿ ಸ್ಲೀಪರ್ - 605
ರಾಜಹಂಸ - 600

ಬೆಳಗಾವಿ, ಧರ್ಮಸ್ಥಳ ಕಡೆಗೆ

ಬೆಳಗಾವಿ, ಧರ್ಮಸ್ಥಳ ಕಡೆಗೆ

ಬೆಳಗಾವಿ
ಕರ್ನಾಟಕ ಸಾರಿಗೆ - 712 (544)
ಎಸಿ ಸ್ಲೀಪರ್ - 1050 (954)
ರಾಜಹಂಸ - 780 (658)
ಐರಾವತ - 950 (888)

ಧರ್ಮಸ್ಥಳ
ಕರ್ನಾಟಕ ಸಾರಿಗೆ - 372 (302)
ನಾನ್ ಎಸಿ ಸ್ಲೀಪರ್ - 706 (617)
ರಾಜಹಂಸ - 626 (515)

ಚಿಕ್ಕಮಗಳೂರು, ವಿಜಯಪುರಕ್ಕೂ ರೇಟ್ ಕಮ್ಮಿಯಿಲ್ಲ

ಚಿಕ್ಕಮಗಳೂರು, ವಿಜಯಪುರಕ್ಕೂ ರೇಟ್ ಕಮ್ಮಿಯಿಲ್ಲ

ಚಿಕ್ಕಮಗಳೂರು
ಕರ್ನಾಟಕ ಸಾರಿಗೆ - 280 (229)
ರಾಜಹಂಸ - 404
ಐರಾವತ - 535

ವಿಜಯಪುರ
ಕರ್ನಾಟಕ ಸಾರಿಗೆ - 700 (576)
ನಾನ್ ಎಸಿ ಸ್ಲೀಪರ್ - 659
ಸುಹಾಸ್ - 759

ಬಾಗಲಕೋಟೆ, ಕಾರವಾರದ ಕಡೆಗೆ

ಬಾಗಲಕೋಟೆ, ಕಾರವಾರದ ಕಡೆಗೆ

ಬಾಗಲಕೋಟೆ
ಕರ್ನಾಟಕ ಸಾರಿಗೆ - 687
ರಾಜಹಂಸ - 772

ಕಾರವಾರ
ಕರ್ನಾಟಕ ಸಾರಿಗೆ - 617 (515)
ರಾಜಹಂಸ - 812 (669)
ಐರಾವತ - 980 (883)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Absolutely there is no check and balance for fluctuating bus fares in Karnataka. What with another long week - end, Ganesha festival coming up, Private bus operators as well as long distance KSRTC buses have hiked fares which is nothing but cash in on opportunity

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ