ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾಸಗಿ ಎಂಜಿನಿಯರಿಂಗ್ ಕಾಲೇಜು ಶುಲ್ಕ ಮತ್ತೊಮ್ಮೆ ಹೆಚ್ಚಲಿದೆಯೇ?

|
Google Oneindia Kannada News

ಬೆಂಗಳೂರು, ಫೆಬ್ರವರಿ 1: ಸಿಇಟಿ ಪರೀಕ್ಷೆಗಳು ಇನ್ನೇನು ಹತ್ತಿರವಿರುವಾಗಲೇ ಮತ್ತೊಮ್ಮೆ ಶುಲ್ಕವನ್ನು ಹೆಚ್ಚಿಸುವಂತೆ ಎಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿಯವರು ಒತ್ತಡ ಹೇರಲು ಆರಂಭಿಸಿದ್ದಾರೆ.

ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿ ಶೇ 10 ರಷ್ಟು ಶುಲ್ಕವನ್ನು ಹೆಚ್ಚಿಸಲು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇತ್ತೀಚೆಗೆ ಉನ್ನತ ಶಿಕ್ಷಣ ಇಲಾಖೆ ನಡೆಸಿದ ಸಭೆಯಲ್ಲಿ ಈ ಕುರಿತು ಬೇಡಿಕೆ ಇಡಲಾಗಿದೆ.

ಎಂಜಿನಿಯರಿಂಗ್ ಕಾಲೇಜುಗಳಿಂದಲೇ ವಿದ್ಯಾರ್ಥಿಗಳ ಹುಡುಕಾಟ, ನಾನಾ ಆಫರ್! ಎಂಜಿನಿಯರಿಂಗ್ ಕಾಲೇಜುಗಳಿಂದಲೇ ವಿದ್ಯಾರ್ಥಿಗಳ ಹುಡುಕಾಟ, ನಾನಾ ಆಫರ್!

ಕಳೆದ ವರ್ಷ ಮೊದಲು ಶೇ.10 ರಷ್ಟು ಶುಲ್ಕ ಏರಿಕೆ ಮಾಡಲಾಗಿತ್ತು.ಆದರೆ ಅದನ್ನು ಶೇ.8ಕ್ಕೆ ಇಳಿಸಲಾಗಿತ್ತು. ಆದರೆ ಈ ವರ್ಷ ಇದನ್ನು ನಾವು ಒಪ್ಪಲು ಸಾಧ್ಯವಿಲ್ಲ ಶೇ.10 ರಷ್ಟು ಶುಲ್ಕ ಹೆಚ್ಚಿಸಲೇ ಬೇಕು ಎಂದು ಕರ್ನಾಟಕ ಅನುದಾನ ರಹಿತ ಖಾಸಗಿ ಕಾಲೇಜುಗಳ ಒಕ್ಕೂಟದ ಕಾರ್ಯದರ್ಶಿ ಎಂ.ಕೆ ಪಾಂಡುರಂಗ ಶೆಟ್ಟಿ ಒತ್ತಾಯಿಸಿದ್ದಾರೆ.

Private engineering colleges demand 10percent hike

ಪ್ರತಿ ವರ್ಷವೂ ಶುಲ್ಕ ಪರಿಷ್ಕರಣೆ ಮಾಡಲಾಗುತ್ತದೆ ಹಾಗೆಯೇ ಶೇ. 10 ರಷ್ಟು ಶುಲ್ಕವನ್ನು ಹೆಚ್ಚಿಸಲಾಗುತ್ತಿದೆ ಆದರೆ ಕಳೆದ ವರ್ಷ ಶೇ. 8 ರಷ್ಟು ಮಾತ್ರ ಹೆಚ್ಚಳ ಮಾಡಲಾಗಿದೆ ಎಂದರು. ಕಾಲೇಜಿನಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಹಾಗೆಯೇ ಕಾಲೇಜಿನ ಪ್ರೊಫೆಸರ್‌ಗಳಿಗೂ ವೇತನ ಹೆಚ್ಚಳ ಮಾಡಲೇಬೇಕು ಹೊಸ ಪ್ರೊಫೆಸರ್‌ಗಳ ಆಯ್ಕೆ ಹೀಗೆ ಹತ್ತು ಹಲವಾರು ತೊಂದರೆಗಳಿರುತ್ತದೆ.

ಸೀಟ್‌ ಮ್ಯಾಟ್ರಿಕ್ಸ್‌ ಪ್ರಕಟ: 2878 ಎಂಜಿನಿಯರಿಂಗ್‌ ಸೀಟು ಹೆಚ್ಚಳ ಸೀಟ್‌ ಮ್ಯಾಟ್ರಿಕ್ಸ್‌ ಪ್ರಕಟ: 2878 ಎಂಜಿನಿಯರಿಂಗ್‌ ಸೀಟು ಹೆಚ್ಚಳ

ಒಂದೊಮ್ಮೆ ಶುಲ್ಕ ಹೆಚ್ಚಳಕ್ಕೆ ಅವಕಾಶ ಮಾಡಿಕೊಟ್ಟರೆ ಸಿಇಟಿ ಶುಲ್ಕ 78 ಸಾವಿರ ರೂಗೆ ಹೆಚ್ಚಳವಾಗುತ್ತದೆ. 2018ರಲ್ಲಿ 70,200 ರೂ ಇತ್ತು. ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ 18 ಸಾವಿರ ರೂ ಶುಲ್ಕವಿದೆ.

English summary
A head of common entrance Test 2019, private colleges have once again raised their demand for hike in fees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X