"ಹೊಸ ವರ್ಷ ಸಂತಸ, ಉಲ್ಲಾಸ ಹಾಗೂ ಸಮೃದ್ಧಿ ತರಲಿ" ಮೋದಿ ಟ್ವೀಟ್
ಇಂದು ದೇಶದೆಲ್ಲೆಡೆ ಯುಗಾದಿ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ನಾಡಿನ ಜನತೆಗೆ ರಾಜಕೀಯ ಗಣ್ಯರು ಯುಗಾದಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. "ಬರುವ ಈ ನೂತನ ಸಂವತ್ಸರವು ಸಂತಸ, ಉಲ್ಲಾಸ ಹಾಗೂ ಸಮೃದ್ಧಿ ಉಂಟಾಮಾಡಲಿ ಎಂದು ಹಾರೈಸುವೆ. ನಾವೆಲ್ಲರೂ ಈ ನವವರ್ಷದಲ್ಲಿ ಯಶಸ್ಸಿನ ಹೊಸ ಎತ್ತರವನ್ನು ಸಾಧಿಸೋಣ" ಎಂದು ಟ್ವೀಟ್ ಮಾಡುವ ಮೂಲಕ ಶುಭಶಯ ಕೋರಿದ್ದಾರೆ.
ಇನ್ನೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಯುಗಾದಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.
"ಸೃಷ್ಟಿಯ ಮೊದಲ ದಿನ
ಸೂರ್ಯನ ಕಿರಣದ ಮೊದಲ ದಿನ
ಹಸಿರೆಲೆಗಳು ಚಿಗುರೊಡೆಯುವ ಮೊದಲ ದಿನ
ಶುಭಕೃತು ನಾಮ ಸಂವತ್ಸರದ ಮೊದಲ ದಿನ.
Best wishes on the special occasion of Ugadi. pic.twitter.com/1aAeMDARsg
— Narendra Modi (@narendramodi) April 2, 2022
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಸಂಕಷ್ಟಗಳೆಲ್ಲವೂ ದೂರವಾಗಿ ಸಮೃದ್ಧಿ ಸದಾ ನಾಡಿನಲ್ಲಿ ನೆಲೆಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ" : ಮುಖ್ಯಮಂತ್ರಿ
Koo App”ಸೃಷ್ಟಿಯ ಮೊದಲ ದಿನ ಸೂರ್ಯನ ಕಿರಣದ ಮೊದಲ ದಿನ ಹಸಿರೆಲೆಗಳು ಚಿಗುರೊಡೆಯುವ ಮೊದಲ ದಿನ ಶುಭಕೃತು ನಾಮ ಸಂವತ್ಸರದ ಮೊದಲ ದಿನ. ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಸಂಕಷ್ಟಗಳೆಲ್ಲವೂ ದೂರವಾಗಿ ಸಮೃದ್ಧಿ ಸದಾ ನಾಡಿನಲ್ಲಿ ನೆಲೆಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ” : ಮುಖ್ಯಮಂತ್ರಿ @bsbommai #Ugadi2022 - CM of Karnataka (@CMOKarnataka) 2 Apr 2022
ಜೊತೆಗೆ ಕರ್ನಾಟಕದ ಮಾಜಿ ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಅವರು ಶುಭಕೋರಿದ್ದಾರೆ. ''ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಶುಭಕೃತ್ ನಾಮ ಸಂವತ್ಸರ ಎಲ್ಲರಿಗೂ ಉತ್ತಮ ಆಯಸ್ಸು, ಆರೋಗ್ಯ, ಸುಖ, ಶಾಂತಿ,ನೆಮ್ಮದಿಯನ್ನು ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ" ಎಂದು ಕೂ ಮಾಡಿದ್ದಾರೆ.

ಗೃಹ ಸಚಿವ ಆರಗ ಜ್ಞಾನೇಂದ್ರ "ರಾಜ್ಯದ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಬೇವು-ಬೆಲ್ಲದ ಸವಿಯೊಂದಿಗೆ ಎಲ್ಲರಿಗೂ ಕಷ್ಟ, ಸಮಸ್ಯೆಗಳನ್ನು ಎದುರಿಸುವ ಶಕ್ತಿ ದೊರೆಯಲಿ. ನೂತನ ಶುಭಕೃತ್ ನಾಮ ಸಂವತ್ಸರದಲ್ಲಿ ಸಮಾಜದಲ್ಲಿ ಶಾಂತಿ, ಸುರಕ್ಷತೆ ಹಾಗೂ ಸಾಮರಸ್ಯ ನೆಲೆಗೊಳ್ಳಲಿ. ಎಲ್ಲೆಡೆ ಸುಖ-ಶಾಂತಿ ಸಮೃದ್ಧಿ ನೆಲೆಸಲಿ ಎಂದು ಹಾರೈಸುತ್ತೇನೆ" ಎಂದು 'ಕೂ' ಮಾಡಿದ್ದಾರೆ.
Recommended Video
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ನಾಡಿನ ಜನತೆಗೆ ಯುಗಾದಿ ಹಬ್ಬದ ಶುಭ ಕೋರಿದ್ದಾರೆ.












Click it and Unblock the Notifications