ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಯಚೂರು ಯುವಕನ ಪತ್ರಕ್ಕೆ ಸ್ಪಂದಿಸಿದ ನರೇಂದ್ರ ಮೋದಿ

By ರಮೇಶ್. ಬಿ
|
Google Oneindia Kannada News

ರಾಯಚೂರು,ಜನವರಿ,30: ಗೋವಾದಲ್ಲಿ ನಡೆಯುತ್ತಿರುವ ಮೋಜು-ಮಸ್ತಿ ಹಾಗು ಜೂಜಾಟಗಳಿಂದ ಆಗುತ್ತಿರುವ ಹಾನಿ ಕುರಿತು ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಯುವಕನೋರ್ವ ಬರೆದ ಪತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ಪಂದಿಸಿದ್ದು, ಪ್ರತಿಕ್ರಿಯೆ ಪತ್ರ ಯುವಕನಿಗೆ ತಲುಪಿದೆ.

ಪ್ರಧಾನ ಮಂತ್ರಿ ನರೇಂದ್ರಮೋದಿಗೆ ಪತ್ರ ಬರೆದ ಯುವಕನೇ ಸುಮೀತ್ ಕುಮಾರ್ ತಡಕಲ್. ಈತ ಗೋವಾದಲ್ಲಿ ನಡೆಯುತ್ತಿರುವ ಸಮಾಜಘಾತುಕ ಚಟುವಟಿಕೆಗಳಿಂದ ಬೇಸತ್ತು 2015ರಲ್ಲಿ ಪತ್ರ ಬರೆದಿದ್ದನು. ಈತನ ಪತ್ರದಿಂದ ಕೇಂದ್ರ ಸರ್ಕಾರ ಗೋವಾ ಸರ್ಕಾರಕ್ಕೆ ನೋಟಿಸ್ ನೀಡಿದೆ.[ಗೋವಾ ಬೀಚುಗಳಲ್ಲಿ ನೀರಾಟ ನಿಷೇಧ]

Prime Minister Narendra Modi gave response to Raichur person letter

ರಾಯಚೂರು ಯುವಕ ಬರೆದ ಪತ್ರದಲ್ಲಿ ಏನಿದೆ?

ಗೋವಾದಲ್ಲಿ ಮೋಜು-ಮಸ್ತಿ, ಕ್ಯಾಸಿನೋ ಕ್ಲಬ್ ಗಳಲ್ಲಿ ಇಸ್ಪೀಟ್, ರಾಲೇಟ್, ಶೂಟರ್ ಸೇರಿ ಇತರೆ ದಂಧೆಗಳು ರಾಜ್ಯ ಸರ್ಕಾರದ ಪರವಾನಿಗೆಯಿಂದಲೇ ಪ್ರವಾಸೋಧ್ಯಮ ನೆಪದಲ್ಲಿ ಬಹಿರಂಗವಾಗಿ ನಡೆಯುತ್ತಿದೆ. ಇಂತಹ ಕೆಟ್ಟ ದಂಧೆಗಳಿಗೆ ಗೋವಾ ಮಾತ್ರವಲ್ಲದೆ ನೆರೆಯ ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಸೇರಿ ಹಲವು ರಾಜ್ಯದ ಯುವಕರು ಬಲಿಯಾಗುತ್ತಿದ್ದಾರೆ.

ಹಣ ಕಳೆದುಕೊಳ್ಳುವುದರ ಜೊತೆಗೆ ಮಾನಸಿಕ ಅನಾರೋಗ್ಯಕ್ಕೆ ಬಲಿಯಾಗಿ ತಮ್ಮ ಸಾವಿನ ಬಾಗಿಲನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ. ಇದರಿಂದ ಸಮಾಜದಲ್ಲಿ ಕೆಟ್ಟ ಪರಿಣಾಮ ಬೀರುತ್ತಿದೆ, ಇದರ ವಿರುದ್ಧ ಕೇಂದ್ರ ಸರ್ಕಾರ ಕ್ರಮ ಜರುಗಿಸಬೇಕು ಎಂದು ಸಿಂಧನೂರು ನಗರದ ಸುಮೀತ್ ತಡಕಲ್ ಎಂಬ ಯುವಕ ಕಳೆದ ವರ್ಷ ಜನವರಿ 2015ರಲ್ಲಿ ಮೋದಿಯವರಿಗೆ ಪತ್ರ ಬರೆದಿದ್ದರು. ಇವರಿಗೆ ಡಿಸೆಂಬರ್ ತಿಂಗಳಲ್ಲಿ ಸ್ಪಂದನೆ ಸಿಕ್ಕಿದ್ದು, ಪ್ರತಿಕ್ರಿಯೆಯ ಪತ್ರ ಸೇರಿ ಎರಡು ದಿನ ಕಳೆದಿದೆ.[ಗೋವಾ : ಪೋಲಿ ಚಿತ್ರ ನೋಡುವ ಕಾಲೇಜು ಹುಡುಗರು]

Prime Minister Narendra Modi gave response to Raichur person letter

ಯುವಕನ ಪತ್ರದಿಂದ ಯಾವ ಪ್ರಕ್ರಿಯೆ ನಡೆಯಿತು?

ಸಮಾಜ ನೆಮ್ಮದಿ ಹಾಳುಗೈಯ್ಯುವ ದಂಧೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ಮುಂಬೈ ಸಾರ್ವಜನಿಕ ಅಧಿಕಾರಿಗಳು ಗೋವಾ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಒಂದು ಪ್ರತಿಯನ್ನು ಈ ಯುವಕನಿಗೂ ಕಳುಹಿಸಿದ್ದಾರೆ.[ದೇಶದ ರೈತರಿಗೆ ನರೇಂದ್ರ ಮೋದಿ ಕಳಕಳಿಯ ಪತ್ರ]

ಗೋವಾ ಸರ್ಕಾರ ಕೇಂದ್ರದ ಪತ್ರಕ್ಕೆ ನೀಡಿದ ಸ್ಪಂದನೆ ಏನು?

ಕೇಂದ್ರದ ಪತ್ರಕ್ಕೆ ಸ್ಪಂದಿಸಿದ ಗೋವಾ ಸರ್ಕಾರ ಇನ್ನೂ ಮುಂದೆ ಇಂತಹ ದಂಧೆಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಹಾಗೂ ಬೀಚ್ ನಲ್ಲಿ ಇನ್ನೂ ಮುಂದೆ ಸಂಪೂರ್ಣವಾಗಿ ಮಧ್ಯಪಾನವನ್ನು ನಿಷೇದಿಸಲಾಗಿದೆ ಎಂದು ಗೋವಾ ಸರ್ಕಾರ ಆದೇಶ ಹೊರಡಿಸಿದೆ.

English summary
Prime Minister Narendra Modi gave response to Sumith Kumar Tadakal letter on December, 2015. He is resident of Sindhanur Nagar, Raichur. He wrote letter to the Prime Minister Narendra Modi about illegal activities of Goa State on January 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X