ಬೆಲೆ ಏರಿಕೆಗೆ ತತ್ತರ:ಕರ್ನಾಟಕ ಬಂದ್ ಗೆ ಸಜ್ಜಾಗಿ

ಮೊದಲು ಬಸ್ ಪ್ರಯಾಣ ದರ ಏರಿತು. ಆಗಲೇ ಜನ ಗೊಣಗಾಣತೊಡಗಿದರು. ಅದಾದ ಮೇಲೆ ನೀರಿನ ದರವೂ ಏರಿಬಿಟ್ಟಿದೆ. ಸದ್ಯದಲ್ಲೇ ವಿದ್ಯುತ್ ದರ ಏರಿಕೆಯಾಗುವುದು ಖಚಿತವಾಗಿದೆ. ಈ ಮಧ್ಯೆ ಸದ್ದಿಲ್ಲದೆ ಆಗಾಗ ತರಕಾರಿ ಬೆಲೆಗಳು ಏರಿಳಿಕೆ ಕಾಣುತ್ತಿರುವುತ್ತವೆ. ಜತೆಗೆ ಆಹಾರ ಪದಾರ್ಥಗಳು ರೂ ನೂರರ ಗಡಿ ದಾಟುವ ಹಂತದಲ್ಲಿವೆ. ಬೆಂಗಳೂರು ಮತ್ತು ಸುತ್ತಮುತ್ತಲ ಜನತೆಗೆ ಮುಖ್ಯವಾಗಿ ದೇವನಹಳ್ಳಿ ಭಾಗದ ಜನ ಬಸವಳಿದಿದ್ದಾರೆ.
ಒಂದೇ ಸಮನೆ ಬೆಲೆ ಏರಿಕೆಯಿಂದ ಜನರನ್ನು ರಕ್ಷಿಸದೆ ಸರಕಾರವೂ ಕೈ ಎತ್ತಿದೆ. ಇಷ್ಟೇ ಅಲ್ಲ ಮುಂದಿನ ವಾರ ಲೋಕಸಭಾ ಚುನಾವಣೆ ಫಲಿತಾಂಶ ಹೊರಬಿದ್ದು, ಹೊಸ ಸರಕಾರ ಸ್ಥಾಪನೆಯಾಗುತ್ತಿದ್ದಂತೆ ಬೆಲೆ ಏರಿಕೆಗಳ ಸರಮಾಲೆಯೇ ಕಾಡಲಿದೆ. ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಹೀಗೆ... ನೀವು ಯಾವುದನ್ನೇ ಹೆಸರಿಸಿ ನಾವು ಅದರ ಬೆಲೆಯನ್ನು ಏರಿಸಿ ಬಿಡುತ್ತೇವೆ ಅನ್ನುತ್ತದೆ ಹೊಸ ಸರಕಾರ.
ಇದೆಲ್ಲವನ್ನೂ ಮೌನವಾಗಿ ಅಸಹಾಯಕವಾಗಿ ನೋಡುತ್ತಿರುವ ಹೋರಾಟಗಾರರ ವರ್ಗ ಸರಕಾರಕ್ಕೆ ಬಿಸಿಮುಟ್ಟಿಸಲು ಆಲೋಚಿಸುತ್ತಿದೆ. ಯಾವುದೇ ಘಳಿಗೆ ಕರ್ನಾಟಕ ಬಂದ್ ನಡೆಸಿ, ಸರಕಾರದ ಮೇಲೆ ಒತ್ತಡ ಹೇರಲು ಮಂತ್ರಾಲೋಚನೆಯಲ್ಲಿ ತೊಡಗಿದ್ದಾರೆ. ಹಾಗಾಗಿ ಸದ್ಯದಲ್ಲೇ ಸಂಪೂರ್ಣ ಕರ್ನಾಟಕ ಬಂದ್ ಬಿಸಿ ತಟ್ಟಲಿದೆ.












Click it and Unblock the Notifications