ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತಿ ಮಳೆಯಿಂದ ಸಂಕಷ್ಟ ಅನುಭವಿಸಬಾರದು ಎಂದರೆ ಹೀಗೆ ಮಾಡಿ

By Manjunatha
|
Google Oneindia Kannada News

ಬೆಂಗಳೂರು, ಜೂನ್ 04: ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆ ಆಗಲಿದೆ ಎಂದು ರಾಷ್ಟ್ರೀಯ ವಿಪತ್ತು ನಿಗಾ ಮಂಡಳಿ ಎಚ್ಚರಿಕೆ ನೀಡಿದೆ.

ಬೆಂಗಳೂರಿನ ಹಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಲಿದೆ ಎಂದು ಎಚ್ಚರಿಸಿರುವ ವಿಪತ್ತು ನಿಗಾ ಮಂಡಳಿಯು, ಜನ ಜೀವನ ಅಸ್ಥವ್ಯಸ್ಥವಾಗಲಿದೆ ಎಂದಿದೆ.

ಬೆಂಗಳೂರಲ್ಲಿ ಪ್ರವಾಹ ಸ್ಥಿತಿ ಸಾಧ್ಯತೆ, ಹವಾಮಾನ ಇಲಾಖೆ ಎಚ್ಚರಿಕೆಬೆಂಗಳೂರಲ್ಲಿ ಪ್ರವಾಹ ಸ್ಥಿತಿ ಸಾಧ್ಯತೆ, ಹವಾಮಾನ ಇಲಾಖೆ ಎಚ್ಚರಿಕೆ

ಬಿಬಿಎಂಪಿ ಮತ್ತು ಅಗ್ನಿಶಾಮಕ ದಳ ಪರಿಸ್ಥಿತಿ ಎದುರಿಸಲು ಸನ್ನಧವಾಗಿದ್ದೇವೆ ಎಂದು ಹೇಳಿದೆ. ಆದರೆ ಸಮಸ್ಯೆ ಬಂದ ನಂತರ ಸರಿಮಾಡುವದಕ್ಕಿಂತಲೂ ಸಮಸ್ಯೆ ಬಾರದ ಹಾಗೆ ಎಚ್ಚರಿಕೆ ತೆಗೆದುಕೊಳ್ಳುವುದು ಜಾಣತನವಲ್ಲವೆ. ಪ್ರವಾಹ ಪರಿಸ್ಥಿತಿ ಉಂಟಾದ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಸುರಕ್ಷತಾ ಸಲಹೆಗಳು ಇಲ್ಲಿವೆ ನೋಡಿ.

precautions need to take in flood situation

* ಮನೆ ಒಳಗೆ ನೀರು ನುಗ್ಗದಂತೆ ತಡೆ ಗೋಡೆ ನಿರ್ಮಿಸಿಕೊಳ್ಳಿ.

* ಸೆಪೇಜ್ ಅನ್ನು ತಪ್ಪಿಸಲು ನೆಲಹಾಸುಗಳಲ್ಲಿ ಜಲನಿರೋಧಕ ಸೀಲ್ ಗೋಡೆ ನಿರ್ಮಿಸಿ

* ಪ್ರವಾಹ ಪರಿಸ್ಥಿತಿಯ ಮುನ್ನೆಚ್ಚರಿಕೆ ಸಿಕ್ಕ ಕೂಡಲೇ ಸ್ಥಳಾಂತರಕ್ಕೆ ಸಿದ್ಧರಾಗಿ. ಅಗತ್ಯ ಮತ್ತು ಬೆಲೆ ಬಾಳುವ ವಸ್ತುಗಳನ್ನು ಪ್ಯಾಕ್ ಮಾಡಿಕೊಳ್ಳಿ.

ನೆನಪಾಗಿ ಕಾಡುವ ಕೊಡಗಿನ ಆ ಸುಂದರ ಮಳೆಗಾಲನೆನಪಾಗಿ ಕಾಡುವ ಕೊಡಗಿನ ಆ ಸುಂದರ ಮಳೆಗಾಲ

* ಮನೆಗೆ ನೀರು ನುಗ್ಗುತ್ತಿದ್ದಂತೆ ವಿದ್ಯುತ್ ಸಂಪರ್ಕ ತೆಗೆದುಬಿಡಿ, ವಿದ್ಯುತ್ ಸಂಪರ್ಕ ತೆಗೆಯದಿದ್ದಲ್ಲಿ ಮೊಬೈಲ್ ಚಾರ್ಜರ್‌ ಮತ್ತಿತರೆ ವೈರ್‌ಗಳು ನೀರಿನ ಸಂಪರ್ಕಕ್ಕೆ ಬಾರದಂತೆ ಎಚ್ಚರವಹಿಸಿ.

* ಹರಿಯುತ್ತಿರುವ ನೀರಿನಲ್ಲಿ ಚಲಿಸಬೇಡಿ, ನೀರಿನಲ್ಲಿ ನಡೆಯುವಾಗ ನಿಮ್ಮ ಕೈಯಲ್ಲಿ ಕೋಲೊಂದು ಖಡ್ಡಾಯವಾಗಿ ಇರಲಿ, ಮುಂದೆ ಹಳ್ಳ-ಚರಂಡಿ ಇದೆಯೋ ಎಂದು ಕೋಲಿನಿಂದ ಪರೀಕ್ಷಿಸಿ ಮುಂದೆ ಹೆಜ್ಜೆ ಇಡಿ.

* ರೇಡಿಯೋ ಅಥವಾ ಸುದ್ದಿಗಳನ್ನು ನೋಡುತ್ತಿರಿ. ಹವಾಮಾನದ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿರಿ, ನಿರಾಶ್ರಿತರ ಶಿಬಿರಗಳು, ಪ್ರವಾಹ ಪರಿಸ್ಥಿತಿ ಬಗ್ಗೆ ಸರ್ಕಾರದ ಘೋಷಣೆಗಳನ್ನು ತಿಳಿಯುತ್ತಿರಿ.

* ವಿದ್ಯುತ್ ತಂತಿ ಬಿದ್ದಿದ್ದು ಕಂಡರೆ ಅಲ್ಲಿಂದ ದೂರವೇ ಉಳಿಯಿರಿ. ಬೆಸ್ಕಾಂ ಗೆ ಕರೆ ಮಾಡಿ ಕೂಡಲೇ ಮಾಹಿತಿ ತಿಳಿಸಿ.

English summary
Natural Disaster Monitoring center warned bengaluru for a high rain and flood like situation so here is some precautions need to take in flood situation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X