Karnataka Rains: ರಾಜ್ಯಕ್ಕೆ ಮಾರ್ಚ್ 2ನೇ ವಾರದಿಂದಲೇ ಮುಂಗಾರು ಪೂರ್ವ ಮಳೆ ಎಂಟ್ರಿ: ಯಾವ್ಯಾವ ಜಿಲ್ಲೆಗಳಿಗೆ?
Karnataka Rains: ಸಾಮಾನ್ಯವಾಗಿ ರಾಜ್ಯಕ್ಕೆ ಮುಂಗಾರು ಎಂಟ್ರಿ ಕೊಡುವುದೇ ಮೇ ತಿಂಗಳ ಆರಂಭದಲ್ಲಿ. ಇನ್ನು ಇದೀಗ ಬಿಸಿಲ ಬೇಗೆಯಿಂದ ಬೇಯುತ್ತಿರುವ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ದಕ್ಷಿಣದ ಜಿಲ್ಲೆಗಳಿಗೆ ಮುಂಗಾರು ಪೂರ್ವ ಮಳೆ ಯಾವಾಗ ಎಂಟ್ರಿ ಕೊಡಲಿದೆ ಎಂದು ಹವಾಮಾನ ಇಲಾಖೆ ತಜ್ಞರು ಬಿಗ್ ಅಪ್ಡೇಟ್‌ವೊಂದನ್ನು ಕೊಟ್ಟಿದ್ದಾರೆ.
ಇದೀಗ ಬೇಸಿಗೆಗೂ ಮುನ್ನ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಿರುಬಿಸಿಲಿನ ವಾತಾವರಣ ಮುಂದುವರೆದಿದೆ. ಮುಂದಿನ ಹಲವು ದಿನಗಳವರೆಗೂ ನಗರದಲ್ಲಿ ಇದೇ ರೀತಿಯ ವಾತಾವರಣ ಇರಲಿದ್ದು, ಈ ತಿಂಗಳ ಅಂದರೆ ಮಾರ್ಚ್‌ನ ಕೆಲವೇ ದಿನಗಳಲ್ಲಿ ಮುಂಗಾರು ಪೂರ್ವ ಮಳೆ ಆರಂಭ ಆಗಲಿದೆ. ಆಗ ತಾಪಮಾನ ಕಡಿಮೆಯಾಗಲಿದ್ದು, ನಗರ ತಂಪಾಗಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಫೆಬ್ರವರಿಯಿಂದ ಇಲ್ಲಿವರೆಗೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತಾಪಮಾನ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇದೆ. ಇನ್ನು ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಮಾರ್ಚ್ ಅಂದರೆ ಇದೇ ತಿಂಗಳ ಕಲವೇ ದಿನಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಮೂಗಾರು ಪೂರ್ವ ಮಳೆ ಆರ್ಭಟಿಸಲಿದೆ. ಉಳಿದದಂತೆ ಉತ್ತರ ಒಳನಾಡಿದ ಜಿಲ್ಲೆಗಳಲ್ಲಿ ತಾಪಾಮಾನದಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ.
ಮಾರ್ಚ್ ಮತ್ತು ಮೇ ತಿಂಗಳ ಮಧ್ಯದಲ್ಲು ಬೆಂಗಳೂರು ಮತ್ತು ಇತರ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆ ಆರ್ಭಟಿಸಲಿದೆ. ವಾಡಿಕೆಗಿಂತ ಶೇಕಡ 30-40ರಷ್ಟು ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೆ, ಕರಾವಳಿ ಕರ್ನಾಟಕ ಮತ್ತು ಮಲೆನಾಡು ಪ್ರದೇಶಗಳಲ್ಲಿಯೂ ಶೇಕಡ 50-60ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಮುಂಗಾರು ಪೂರ್ವ ಮಳೆಯಿಂದ ಬೆಂಗಳೂರಿನಲ್ಲಿ ತಾಪಮಾನದಲ್ಲಿ ಇಳಿಕೆಯಾಗಲಿದೆ. ಆದರೆ, ಜನದಟ್ಟಣೆ ಪ್ರದೇಶಗಳಲ್ಲಿ ಬಿಸಿಯಾದ ವಾತಾವರಣ ಇರಲಿದೆ. ಹಗಲಿನ ತಾಪಮಾನವು ಸಾಮಾನ್ಯವಾಗಿ ಕಂಡುಬಂದರೂ ರಾತ್ರಿ ಮಾತ್ರ ಬೆಚ್ಚಗಿನ ವಾತಾವರಣ ಇರಲಿದ್ದು, ಸಾಮಾನ್ಯಕ್ಕಿಂತ 1-2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಬಹುದು. ಪರಿಣಾಮ ಸಂಜೆ ಮತ್ತು ಮುಂಜಾನೆ ವೇಳೆ ಬೆಚ್ಚಗಿನ ವಾತಾವರಣ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಹಿರಿಯ ವಿಜ್ಞಾನಿ ಸಿಎಸ್ ಪಾಟೀಲ್ ತಿಳಿಸಿದ್ದಾರೆ.
ನಂತರ ದಿನಗಳಲ್ಲಿ ಬೆಂಗಳೂರಿನಲ್ಲಿ ಮಳೆಯಿಂದ ಮುಕ್ತಿ ಸಿಗಲಿದೆ. ಆದರೆ, ಕರ್ನಾಟಕದ ಈಶಾನ್ಯ ಜಿಲ್ಲೆಗಳಲ್ಲಿ ರಣಬಿಸಿಲು ಮುಂದುವರೆಯಲಿದೆ. ಮಾರ್ಚ್‌ನಲ್ಲಿ ಅಲ್ಲಿನ ತಾಪಮಾನವು 43 ಡಿಗ್ರಿ ಸೆಲ್ಸ್‌ಯಸ್‌ನಿಂದ 45 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆ ಆಗುವ ಸಾಧ್ಯತೆಯಿದೆ. ಏಪ್ರಿಲ್ ಮತ್ತು ಮೇ ತಿಂಗಳ ವೇಳೆಗೆ ತಾಪಮಾನದ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇನ್ನು ವಾಡಿಕೆಯಂತೆ ಮೇ ತಿಂಗಳಿನಿಂದ ರಾಜ್ಯಕ್ಕೆ ಮುಂಗಾರು ಎಂಟ್ರಿ ಕೊಡಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈಗಾಗಲೇ ಕಳೆದ ಬಾರಿ ಅಂದರೆ 2024ರ ಮೇ ತಿಂಗಳ ಆರಂಭದಲ್ಲೇ ರಾಜ್ಯಕ್ಕೆ ಮುಂಗಾರು ಮಳೆ ಎಂಟ್ರಿ ಕೊಟ್ಟಿತ್ತು. ಇದರಿಂದ ದೊಡ್ಡ ದೊಡ್ಡ ಅವಾಂತರಗಳೇ ಸೃಷ್ಟಿಯಾಗಿದ್ದವು. ಮತ್ತೊಂದೆಡೆ ನದಿ, ಹಳ್ಳ-ಕೊಳ್ಳಗಳು, ಪ್ರಮುಖ ಜಲಾಶಯಗಳು ಭರ್ತಿಯಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದಂತಾಗಿತ್ತು. ಹಾಗೆಯೇ ಈ ಬಾರಿ ಅಂದರೆ 2025ರಲ್ಲೂ ಕೂಡ ಮುಂಗಾರು ಮಳೆ ಆರ್ಭಟಿಸಲಿದೆ ಎನ್ನುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.












Click it and Unblock the Notifications