ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಾಪ ಸಿಂಹ vs ರಾಮದಾಸ್‌: ಇದು ಬಿಜೆಪಿ ಒಳಗಿನ ಕಿಚ್ಚಿಗೆ ಸಾಕ್ಷಿ ಎಂದ ಕಾಂಗ್ರೆಸ್‌

|
Google Oneindia Kannada News

ಬೆಂಗಳೂರು, ನವೆಂಬರ್‌ 16: ಮೈಸೂರು ಬಸ್‌ ನಿಲ್ದಾಣದ ವಿವಾದ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ಗುಂಬಜ್‌ ರೀತಿಯಲ್ಲಿ ವಿನ್ಯಾಸಗೊಂಡಿರುವ ಬಸ್‌ ನಿಲ್ದಾಣವನ್ನು ಒಡೆಯುತ್ತೇನೆ ಎಂದು ಸಂಸದ ಪ್ರತಾಪ ಸಿಂಹ ಅವರು ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಶಾಸಕ ರಾಮದಾಸ್ ಅವರು, 'ಕೃಷ್ಣ ರಾಜ ಕ್ಷೇತ್ರದಲ್ಲಿನ ನಿಲ್ದಾಣವನ್ನು ಅರಮನೆ ಮಾದರಿಯಲ್ಲಿ ನಿರ್ಮಿಸಲಾಗಿದೆ. ಇದು ಯಾವುದೇ ಧರ್ಮಕ್ಕೆ ಸಂಬಂಧಿಸಿದ್ದಲ್ಲ' ಎಂದು ಹೇಳಿದ್ದಾರೆ. ಈ ಇಬ್ಬರು ಬಿಜೆಪಿ ಮುಖಂಡರ ನಡುವಿನ ಭಿನ್ನ ಅಭಿಪ್ರಾಯಗಳೀಗ ವಿರೋಧ ಪಕ್ಷಗಳಿಗೆ ಆಹಾರವಾಗಿದೆ.

ಈ ವಿಚಾರವಾಗಿ ಸರಣಿ ಟ್ವೀಟ್‌ ಮಾಡಿರುವ ಕರ್ನಾಟಕ ಕಾಂಗ್ರೆಸ್‌ ಘಟಕವು, 'ಬಿಜೆಪಿ ವರ್ಸಸ್‌ ಬಿಜೆಪಿ ಕಿಚ್ಚು ಎಷ್ಟಿದೆ ಎನ್ನಲು ಮೈಸೂರಿನಲ್ಲಿ ನಡೆಯುತ್ತಿರುವ ಪ್ರತಾಪ ಸಿಂಹ ವರ್ಸ್‌ಸ್‌ ರಾಮದಾಸ್ ಕಾಳಗವೇ ಸಾಕ್ಷಿ. ಶಾಸಕರು ಕಟ್ಟಿಸಿದ ಬಸ್ ನಿಲ್ದಾಣವನ್ನು ಸಂಸದ ಒಡೆಯಲು ಹೊರಟಿದ್ದಾರೆ. ಬೇರೆಯವರ ಮನೆಯ ದೋಸೆಯ ತೂತನ್ನು ಹುಡುಕುವ ಬದಲು ಬಿಜೆಪಿ ತಮ್ಮ ಮನೆಯ ಕಾವಲಿಯ ತೂತುನ್ನು ನೋಡಿಕೊಂಡರೆ ಒಳಿತು' ಎಂದು ಟೀಕಿಸಿದೆ.

Breaking; ಮಹಿಳಾ ಕಾಂಗ್ರೆಸ್‌ನಲ್ಲಿ ಭಿನ್ನಮತ, ಟ್ವೀಟ್‌ ಬಾಣ ಬಿಟ್ಟ ಬಿಜೆಪಿ Breaking; ಮಹಿಳಾ ಕಾಂಗ್ರೆಸ್‌ನಲ್ಲಿ ಭಿನ್ನಮತ, ಟ್ವೀಟ್‌ ಬಾಣ ಬಿಟ್ಟ ಬಿಜೆಪಿ

Pratap Simha VS Ramadas Shows dissent in BJP Says Congress

'ಹಿಂದೆ ಬ್ಯಾರಿಕೆಡ್ ಮುರಿದಿದ್ದ ಸಂಸದ ಪ್ರತಾಪ ಸಿಂಹ ಈಗ ಮೈಸೂರಿನ ಬಸ್ ನಿಲ್ದಾಣ ಒಡೆಯುತ್ತೇನೆ ಎನ್ನುತ್ತಿದ್ದಾರೆ. ಬಸ್ ನಿಲ್ದಾಣಕ್ಕೆ ಜೆಸಿಬಿ ನುಗ್ಗಿಸುತ್ತೇನೆ ಎನ್ನುವ ಸಂಸದರ ಮನೆಗೆ ಜೆಸಿಬಿ ನುಗ್ಗಿಸಬೇಕು. ಏಕೆಂದರೆ, ಸಾರ್ವಜನಿಕ ಆಸ್ತಿ ಹಾನಿಪಡಿಸುವವರ ಆಸ್ತಿ ಮಟ್ಟುಗೋಲು ಹಾಗೂ ಜೆಸಿಬಿ ನುಗ್ಗಿಸುವುದು ಇವರದ್ದೇ ಪಕ್ಷದ ಆಗ್ರಹಗಳಲ್ಲವೇ?' ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

'ಹೇಳುವುದು ಬಸ್ ನಿಲ್ದಾಣ ಒಡೆಯುತ್ತೇವೆ ಅಂತ, ಆದರೆ ಅಸಲಿಗೆ ಒಡೆದು ಹೋಗಿರುವುದು ಬಿಜೆಪಿ. ಮೈಸೂರಿನ ಬಿಜೆಪಿ ವರ್ಸಸ್‌ ಬಿಜೆಪಿ ಕದನದ ಸೋಂಕು ಶೀಘ್ರದಲ್ಲೇ ಕೋವಿಡ್‌ಗಿಂತಲೂ ವೇಗವಾಗಿ ರಾಜ್ಯಾದ್ಯಂತ ಹಬ್ಬಲಿದೆ. ಮನುಷ್ಯರಲ್ಲಷ್ಟೇ ಅಲ್ಲ, ಬಣ್ಣ, ಕಟ್ಟಡದಲ್ಲೂ ಧರ್ಮ ಕಲಹ ಸೃಷ್ಟಿಸುವ ಬಿಜೆಪಿ ನಿರ್ನಾಮಕ್ಕೆ ಬಸ್ ನಿಲ್ದಾಣವೇ ಸಾಕ್ಷಿಯಾಗಲಿದೆ' ಎಂದು ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

English summary
The Mysore bus stand controversy is making noise across the state. MP Pratap Simha has warned that he will demolish the bus stand which is designed like a dome. Responding to this, MLA Ramdas said, 'The station in Krishna Raja Constituency has been built in the style of a palace. It is not related to any religion. The difference of opinion between these two BJP leaders is now fodder for the opposition parties
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X