ಶಾಲೆಗೆ ಹೊರಟಳು ನನ್ನ ಮಗಳು ಎಂದ ಪ್ರತಾಪ್ ಸಿಂಹ: ಧರ್ಮ ರಕ್ಷಣೆ ಯಾರೆಂದು ಕಮೆಂಟ್!
ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಸಂತೋಷದಿಂದ ಹಂಚಿಕೊಂಡಿರುವ ಪೋಸ್ಟ್‌ವೊಂದಕ್ಕೆ ಕಿಡಿಗೇಡಿಗಳು ಬಾಯಿಗೆ ಬಂದಂತೆ ಪೋಸ್ಟ್ ಮಾಡಿದ್ದಾರೆ. ರಜೆ ಮುಗಿಯಿತು, ಇಂದಿನಿಂದ ಶಾಲೆಗೆ ಹೊರಟಳು ನನ್ನ ಮಗಳು... ಅಂತ ಚಂದದ ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರತಾಪ್ ಸಿಂಹ ಅವರು ಹಂಚಿಕೊಂಡಿದ್ದಾರೆ. ಆದರೆ, ಇದಕ್ಕೆ ಬಂದಿರುವ ಕಮೆಂಟ್‌ಗಳು ಮಿಶ್ರ ಪ್ರತಿಕ್ರಿಯೆಯಿಂದ ಕೂಡಿದೆ. ರಾಜಕೀಯವಾಗಿ ಏನೇ ವಿರೋಧವಿರಲಿ.
ಕುಟುಂಬದ ವಿಚಾರದಲ್ಲಿ ಅಥವಾ ರಾಜಕಾರಣಿಗಳ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡುವುದು ಸರಿ ಅಲ್ಲ ಅಂತ ಹಲವರು ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಿಂದೂ - ಮುಸ್ಲಿಂ ಹಾಗೂ ಧರ್ಮದ ಕಾರಣಕ್ಕೆ ಮತ್ತು ರಾಜಕೀಯ ಕಾರಣಕ್ಕೆ ಕೊಲೆಗಳು ಆಗುತ್ತಿವೆ. ಇದರಲ್ಲಿ ರಾಜಕೀಯ ನಾಯಕರ ಮಕ್ಕಳು ಚೆನ್ನಾಗಿದ್ದಾರೆ, ಬಡವರ ಮಕ್ಕಳು ಸಾವನ್ನಪ್ಪುತ್ತಿದ್ದಾರೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇದೇ ಮಾದರಿಯ ಕಮೆಂಟ್ ಪ್ರತಾಪ್ ಸಿಂಹ ಅವರ ಪೋಸ್ಟ್‌ಗೂ ಬಂದಿದೆ.

ನಿಮ್ಮ ಮಗಳು ಶಾಲೆಗೆ, ಬಡವರ ಮಕ್ಕಳು ಬೀದಿಗೆ!.. ಸರ್ಕಾರಿ ಶಾಲೆ ಗೆ ಏನಕ್ಕೆ ಕಳಿಸಿಲ್ಲ ಸಾರ್ ತಾವು ತಮ್ಮ ಮಗಳನ್ನ ? ಎನ್ನುವ ಕಮೆಂಟ್‌ಗಳು ಬಂದಿವೆ. ಮುರಳಿ ಎನ್ನುವವರು, ಧರ್ಮ ರಕ್ಷಣೆ ಯಾರು ಮಾಡ್ತಾರೆ ?
ಬೀದಿಯಲ್ಲಿ ಯಾರು ಹೊಡೆದಾಡೋದು? ಹಿಂದೂ ಮುಸ್ಲಿಂ ಅಂತಾ ಯಾರು ಬೆಂಕಿ ಹಚ್ಚೋದು??
ನಿಮ್ಮ ಮಕ್ಕಳು ಆರಾಮಾಗಿ ಇದ್ದು ಒಳ್ಳೇದು ಸ್ಕೂಲ್ ಕಾಲೇಜು ಓದಬೇಕು ಆದರೇ ಬಡವರ ಮಕ್ಕಳು ಬೀದಿ ಹೆಣವಾಗ ಬೇಕಾ ಅಂತ ಪ್ರಶ್ನೆ ಮಾಡಿದ್ದಾರೆ.
ತ್ರಿಶೂಲ ಹಿಡಿದು ಶಾಖೆಗೆ ಹೋಗೋದು ಬಿಟ್ಟು ಶಾಲೆಗೆ ಹೋದರೆ ಹಿಂದೂ ಧರ್ಮ ಕಾಪಾಡೋರು ಯಾರು ? ಧರ್ಮ ಕಾಪಾಡೋಕ್ಕೆ ಶಾಲೆಗೆ ಹೋಗ್ಬೇಕ ತ್ರಿಶೂಲ ಕೊಟ್ರೆ ಸಾಕಲ್ವಾ?... ಅದ್ಸರಿ ಕುಂಕುಮ ಗಿಂಕುಮ ಏನೂ ಜೋರಾಗಿ ಹಚ್ಚೇ ಇಲ್ಲ !!? ಹಿಂದೂ ಧರ್ಮದ ಹೆಣ್ಣು ಮಕ್ಕಳು ಈತರ ಬಟ್ಟೆ ಹಾಕ್ಬೋದ?.. ಬಡವರ ಮಕ್ಕಳಿಗೆ ಮಾತ್ರ ಇದೆಲ್ಲ ಅಪ್ಲೆ ಆಗೋದು ಅನ್ಸುತ್ತೆ ಅಲ್ವಾ...?.. ನಿನ್ನ ಮಗಳು ಮಾತ್ರ ಶಾಲೆಗೆ, ಬೇರೆಯವರ ಮಕ್ಳು ಹೊಡೆದಾಡಿ ಬೀದಿ ಹೆಣ ಆಗ್ಲಿ ಅಲ್ವಾ ಎನ್ನುವ ಕಮೆಂಟ್‌ಗಳನ್ನು ಜನ ಮಾಡಿದ್ದಾರೆ.
ಇನ್ನೂ ಕೆಲವರು ಪ್ರತಾಪ್ ಸಿಂಹ ಅವರಿಗೆ ಸಂಸ್ಕೃತಿಯ ಪಾಠವನ್ನು ಮಾಡಿದ್ದಾರೆ. ಸರ್ ನೀವು ತಿಳಿದವರು, ಆದರೂ ಒಂದು ವಿನಂತಿ. ದಯವಿಟ್ಟು ಕತ್ತಲ್ಲಿ ಸರ, ಹಣೆಗೆ ಕುಂಕುಮ ಇರಲಿ, ಜಡೆಗೆ ಹೂವ ಮುಡಿಸಿ ಕಳುಹಿಸಿ. ನಿಮ್ಮಿಂದ ಪ್ರೇರಣೆ ಉಂಟಾಗಲಿ ಅಂತಲೂ ಹೇಳಿದ್ದಾರೆ.
ಶುಭಕೋರಿದ್ದಾರೆ: ಈ ರೀತಿಯ ಕಮೆಂಟ್‌ಗಳ ನಡುವೆಯೂ ಹಲವರು ಪ್ರತಾಪ್ ಸಿಂಹ ಅವರ ಪುತ್ರಿಗೆ ಶುಭಕೋರಿದ್ದಾರೆ. ಬಸವರಾಜ್ ಎನ್ನುವವರು Good luck ಸಹೋದರಿ..! ಒಬ್ಬ ಅಪ್ಪ ಹೆಮ್ಮೆಯಿಂದ ಹೇಳಿಕೊಳ್ಳುವ, ಸಂಭ್ರಮಿಸುವ ಕ್ಷಣಗಳು ಎಂದಿದ್ದಾರೆ.
ರಜೆ ಮುಗಿಯಿತು, ಇಂದಿನಿಂದ ಶಾಲೆಗೆ ಹೊರಟಳು ನನ್ನ ಮಗಳು… pic.twitter.com/xaBFJMtc8c
— Prathap Simha (@mepratap) June 2, 2025
ವಿಕ್ರಮ್ ಎನ್ನುವವರು ದಯವಿಟ್ಟು ನಿಮ್ಮ ಕುಟುಂಬದವರ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಬೇಡಿ. ಅವರ ಸುರಕ್ಷತೆಯ ದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆ ಅಲ್ಲ ಅಂತ ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications