ಡಿಕೆ ಶಿವಕುಮಾರ್ ಅವರೇ ನನ್ನನ್ನು ಜೈಲಿಗೆ ಹಾಕಿಸಿದ್ದು ಎಂದ ಬಿಜೆಪಿ ನಾಯಕ
ಹಾಸನ, ಜುಲೈ 04: ಹಾಸನ ಅತ್ಯಾಚಾರ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ವಕೀಲ ದೇವರಾಜೇಗೌಡ 51 ದಿನಗಳ ಬಳಿಕ ಹೊರಗೆ ಬಂದಿದ್ದಾರೆ. ಬಂದ ಬಳಕ ನನ್ನನ್ನು ಜೈಲಿಗೆ ಹಾಕಿಸಿದ್ದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರೇ ಎಂದು ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಹೇಳಿದ್ದಾರೆ.
51 ದಿನಗಳ ಬಳಿಕ ಹೊರಗೆ ಬಂದ ದೇವರಾಜೇಗೌಡ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿದ್ದು, ಬಿಜೆಪಿ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರಿಗೆ ಹಲವು ಗಣ್ಯರಿಗೆ ತುಂಬು ಹೃದಯದಿಂದ ಧನ್ಯವಾದಗಳು ಎಂದು ವಕೀಲ ದೇವರಾಜೇಗೌಡ ತಿಳಿಸಿದರು. ನನ್ನ ಬಿಡುಗಡೆಗೆ ಸಹಕರಿಸಿದ, ಪ್ರತ್ಯಕ್ಷವಾಗಿ ಪರೋಕ್ಷವಾಗಿ ನನ್ನ ಬಂಧನ ದ ಬಗ್ಗೆ ಧ್ವನಿಯೆತ್ತಿದ ನಾಯಕರು, ನನ್ನ ಜಿಲ್ಲೆಯ ಲಕ್ಷಾಂತರ ಕಾರ್ಯಕರ್ತರು, ವಕೀಲರ ಪ್ರಾರ್ಥನೆ ಭಗವಂತನಿಗೆ ಮುಟ್ಟಿದೆ. 51 ದಿನಗಳ ಬಳಿಕ ಹೊರಗೆ ಬಂದಿದ್ದೇನೆ ಎಂದರು.

ಸಂಕಷ್ಟದಲ್ಲಿ ಸಹಾಯಕ್ಕೆ ನಿಂತ ಯಾರನ್ನೂ ಉಸಿರು ಇರೋವರೆಗೆ ಮರೆಯೊಲ್ಲ. ಹಲವು ಕಾರಣದಿಂದ ಕೆಲವು ವಿಚಾರ ಈಗ ಹೇಳೊಲ್ಲ. ಅದಕ್ಕಾಗಿ ಒಂದು ಸಮಯ ನಿಗದಿ ಆಗುತ್ತೆ. ನನ್ನ ಬಂಧನ ಅನಿರೀಕ್ಷಿತ ಅಲ್ಲ, ನಿರೀಕ್ಷಿತವಾಗಿತ್ತು. ಹಾಸನ ಜಿಲ್ಲೆಯ ಮಾನ ಹರಾಜು ಹಾಕೋ ಕೆಲಸ ಆಗಿದೆ. ಕುಟುಂಬದ ದ್ವೇಷಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಯ ಮಾನ ಹರಾಜಾಗಿದೆ ಎಂದು ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಅವರು ಗುಡುಗಿದ್ದಾರೆ.
ಈ ಎಲ್ಲದರ ಬಗ್ಗೆ ಮಾತಾಡಲು ಮುಂದಿನ ತಿಂಗಳು ಒಂದು ದಿನಾಂಕ ನಿಗದಿ ಮಾಡುತ್ತೇನೆ. ಕೇಂದ್ರದ ಅಧಿವೇಶನ ಮುಗಿದ ಬಳಿಕ ಪ್ರಧಾನಿ ಅವರನ್ನು ಭೇಟಿಯಾಗುತ್ತೇನೆ. ಎಲ್ಲ ಕೇಂದ್ರ ಸಚಿವರನ್ನು ಕರೆದು ಬೃಹತ್ ಸಮಾವೇಶ ಮಾಡುತ್ತೇನೆ. ಯಾವ ಜಿಲ್ಲೆಗೆ ಕಳಂಕ ತಂದರೋ ಅದೇ ಜಿಲ್ಲೆಯಿಂದ ಸಂಘಟನೆಗೆ ಮುಂದಾಗುತ್ತೇವೆ ಎಂದು ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಶಪಥ ಮಾಡಿದರು.












Click it and Unblock the Notifications