ಧಾರವಾಡ ಲೋಕಸಭೆ ಅಭ್ಯರ್ಥಿ ಕುರಿತು ಅರವಿಂದ್‌ ಬೆಲ್ಲದ್‌ ಹೇಳಿಕೆ

ಹುಬ್ಬಳ್ಳಿ, ಜನವರಿ 27: ನಮ್ಮ ಹೈಕಮಾಂಡ್ ನಿರ್ಧಾರ ನಾವು ಖಂಡಿತವಾಗಿಯೂ ಸ್ವಾಗತ ಮಾಡುತ್ತೇವೆ. ಧಾರವಾಡ ಲೋಕಸಭೆ ಟಿಕೆಟ್ ವಿಚಾರದಲ್ಲಿ ಯಾವುದೇ ಉಹಾಪೋಹ ಇಲ್ಲ‌. ನಮ್ಮ ನಾಯಕರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರೇ ಎಂದು ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಶಾಸಕ ಹಾಗೂ ರಾಜ್ಯ ವಿಧಾನ ಸಭೆ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಹೇಳಿದರು.

ಈ ಕುರಿತು ಶನಿವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಪ್ರಹ್ಲಾದ್ ಜೋಶಿ ಅವರೇ ನಮ್ಮ ಧಾರವಾಡ ಲೋಕಸಭೆ ಅಭ್ಯರ್ಥಿ. ಟಿಕೆಟ್ ಅವರಿಗೆ ಸಿಗಲಿದೆ ದೊಡ್ಡ ಅಂತರದಿಂದ ಅವರು ಗೆಲ್ಲಲ್ಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Prahlad Joshi is the Dharwad Lok Sabha candidate Says Arvind Bellad

ಜಗದೀಶ್ ಶೆಟ್ಟರ್ ನಿಮ್ಮ ನಾಯಕರ ಅಲ್ವಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ‌ನೀಡಿದ ಅವರು, ನಾನು ಹಾಗೆ ಹೇಳಿಲ್ಲ. ಆದ್ರೆ ನಾನ ಹೇಳೋದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಬಿಟ್ಟರೆ ಯಾರೂ ಇಲ್ಲ. ನನಗೆ ಜಗದೀಶ್ ಶೆಟ್ಟರ್ ಸೇರ್ಪಡೆ ಅಸಮಾಧಾನ ಇಲ್ಲ. ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ದ. ಶೆಟ್ಟರ್ ಘರವಾಪ್ಸಿ ನಂತರ ಯಾವ ಬಣಗಳು ಆಗೋದಿಲ್ಲ. ಜಗದೀಶ್ ಶೆಟ್ಟರ್ ವಾಪಸ್ ಬರೋ ಬಗ್ಗೆ ನಾವು ಯೋಚನೆ ಮಾಡಿರಲಿಲ್ಲ. ಬರ್ತೀದಾರೆ ಅಂತಾ ನಾಯಕರು ಹೇಳಿದ್ರು, ಸ್ವಾಗತ ಮಾಡಿದ್ದೇವೆ ಎಂದರು ‌.ಇದರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟಪಡಿಸಿದರು.

ಜಗದೀಶ್ ಶೆಟ್ಟರ್ ಬಿಜೆಪಿಗೆ ಬಂದಿರೋದು ಸಂತೋಷವಾಗಿದೆ: ಪ್ರಹ್ಲಾದ್ ಜೋಶಿ

ಜಗದೀಶ್ ಶೆಟ್ಟರ್ ಬಿಜೆಪಿಗೆ ಬಂದಿರೋದು ಸಂತೋಷವಾಗಿದೆಮ ನಾನು ಬಹಳ ಖುಷಿಯಾಗಿದ್ದೇನೆ. ಅವತ್ತು ಶೆಟ್ಟರ್ ಘರವಾಪ್ಸಿ ಕುರಿತು ನನಗೆ ಹೇಳಿದ್ರು. ನನಗೆ ದೊಡ್ಡವರ ಜೊತೆ ಮೀಟಿಂಗ್ ಇತ್ತು ಹಾಗಾಗಿ ಹೋಗೋಕೆ ಆಗಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ನಾವು ಈ ಬಾರಿ 28 ಕ್ಕೆ 28 ಗೆಲ್ಲಬೇಕು. ಅಕಸ್ಮಾತ್ ಶೆಟ್ಟರ್ ಸೇರ್ಪಡೆ ಕುರಿತು ನನ್ನ ವಿರೋಧ ಇಲ್ಲ. ವಿರೋಧ ಇದ್ರೆ ನಾನು ನಿಮಗೆ ಹೇಳುತ್ತದೆ. ನಾನು ಆರ ತಿಂಗಳ ಹಿಂದೆ ಅವರು ವಾಪಸ್ ಬರೋದಾಗಿ ಹೇಳಿದ್ದೆ. ಜಗದೀಶ್‌ ಶೆಟ್ಟರ್ ಬಂದಿರೋದು ಸಂತೋಷ ಉಳದಿರೋದು ಅವರನ್ನ ಕೇಳಿ. ಸ್ಥಳೀಯ ನಾಯಕರಿಗೆ ಮಾಹಿತಿ ಇತ್ತು. ನಾನು ದೆಹಲಿಯಲ್ಲಿದ್ದೆ. ಅರವಿಂದ ಬೆಲ್ಲದ್ ನನ್ಮ ಜೊತೆ ಇರಲಿಲ್ಲ. ಆದ್ರೆ ಹಿಂದಿನ ದಿನ ಬೆಲ್ಲದ್ ಜೊತೆ ಇದ್ರು. ನಮಗೆ ಲಿಂಗಾಯತ ಸೇರಿ ಎಲ್ಲರೂ ಬೇಕು. ಸವದಿ ಅವರಲ್ಲಿ ನಮ್ಮ ವೈಚಾರಿಕತೆ ರಕ್ತ ಇದೆ ಅವರು ಬಂದರೂ ಸ್ವಾಗತ ಎಂದರು.

Prahlad Joshi is the Dharwad Lok Sabha candidate Says Arvind Bellad

ಧಾರವಾಡ ಲೋಕಸಭೆ ಚುನಾವಣೆ ಟಿಕೆಟ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಟಿಕೆಟ್ ವಿಚಾರವಾಗಿ ಜೋಶಿ ಸ್ಪರ್ಧೆ ಕೇಳಿದ್ರೆ,ಅವರೇ ರೀ ಅವರನ್ನ ಬಿಟ್ಟು ಯಾರ ಎಂದು ಮದ್ಯ ಪ್ರವೇಶ ಮಾಡಿದರು. ಯಾವ ಚರ್ಚೆ ಇಲ್ಲ ಸಾಹೇಬರೇ ಅಭ್ಯರ್ಥಿ ಎಂದ ಬೆಲ್ಲದ್ ಧ್ವನಿಗೂಡಿಸಿದರು. ನಮ್ಮ ಪಕ್ಷ ಈಗಾಗಲೇ ಚುನಾವಣೆ ತಯಾರಿ ನಡೆಸಿದೆ. ಅಭ್ಯರ್ಥಿ ಹೆಸರು ಘೋಷಣೆ ಮುನ್ನ ನಾನ ಏನೂ ಮಾತಾಡಲ್ಲ. ಆದ್ರೆ ನಾನು ಚುನಾವಣೆ ತಯಾರಿ ನಡೆಸಿದ್ದೆನೆ. ಧಾರವಾಡ ಲೋಕಸಭೆ ಚುನಾವಣೆಗೆ ನಾನೇ ಅಭ್ಯರ್ಥಿ. ಗಾಲಿ ಜನಾರ್ದನ ರೆಡ್ಡಿ‌ ಕೂಡಾ ಓರಿಜನಲ್ ಬಿಜೆಪಿ ಅವರು ಬರಬಹುದು. ಇವತ್ತು ಶೆಟ್ರು ಕಾರ್ಯಕಾರಿಣಿಯಲ್ಲಿ ಸಿಕ್ಕಿದ್ರು. ವೆಲಕಮ್ ಬ್ಯಾಕ್ ಎಂದು ಹೇಳಿದ್ದೇನೆ. ರಾಜ್ಯದಲ್ಲಿ ಸರ್ಕಾರ ಐದು ವರ್ಷ ನಡೆಸಬೇಕು.ಆದ್ರೆ ಅವರು ಐದು ವರ್ಷ ಸರ್ಕಾರ ಸರಿಯಾಗಿ ನಡೆಸ್ತಿಲ್ಲ ಅನ್ನೋ ಆಕ್ರೋಶ ಇದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+