ಬೆಂಗಳೂರಲ್ಲಿ ಈ ವಾರಾಂತ್ಯ ವಿದ್ಯುತ್ ಕಡಿತ: ಇಲ್ಲಿದೆ ಮಾಹಿತಿ

ಬೆಂಗಳೂರು, ನ. 04: ಬೆಂಗಳೂರಿಗರು ಈ ವಾರಾಂತ್ಯದಲ್ಲಿ ವಿದ್ಯುತ್ ಕಡಿತವನ್ನು ಅನುಭವಿಸಬೇಕಾಗುತ್ತದೆ. ಈ ಬಗ್ಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮಾಹಿತಿ ನೀಡಿದೆ.

ನವೆಂಬರ್‌ನಲ್ಲಿ ನಿಗದಿತ ವಿದ್ಯುತ್ ಕಡಿತವಾಗಲಿರುವ ಬಗ್ಗೆ ಡೇಟಾವನ್ನು ಬಿಡುಗಡೆ ಮಾಡಿದೆ. ನಗರದಲ್ಲಿನ ಕೆಲವು ಅಪೂರ್ಣ ಯೋಜನೆಗಳು, ದುರಸ್ತಿ ಮತ್ತು ನಿರ್ವಹಣೆ ಕಾರ್ಯಗಳನ್ನು ಮಾಡಲು ಬೆಸ್ಕಾಂ ಮತ್ತು KTPCL (ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ) ನಿರ್ಧರಿಸಿದ್ದು, ಈ ವಿದ್ಯುತ್ ಕಡಿತಕ್ಕೆ ಕಾರಣವಾಗಿದೆ.

ಈ ಅಪೂರ್ಣ ಕೆಲಸಗಳ ಪೈಕಿ, ಹಳೆಯ ಟವರ್‌ಗಳು ಮತ್ತು ಟಿಸಿಗಳನ್ನು ತೆಗೆದು ಹೊಸದನ್ನು ಜೋಡಿಸುವುದು ಸೇರಿದೆ. ಭವಿಷ್ಯದಲ್ಲಿ ಅಡೆತಡೆಗಳನ್ನು ತಪ್ಪಿಸಲು ಮರಗಳನ್ನು ಕತ್ತರಿಸುವುದು (ಟ್ರಿಮ್ಮಿಂಗ್), ಜಂಪ್ ವರ್ಕ್‌ಗಳಂತಹ ನಿರ್ವಹಣೆ ಕಾರ್ಯಗಳನ್ನು ಮಾಡಲಾಗುತ್ತದೆ.

Power cut In This Weekend In Bengaluru

ಈ ಕೆಲಸಗಳು ಬೆಳಿಗ್ಗೆ 10 ರಿಂದ ಸಂಜೆ 4 ರ ನಡುವೆ ನಡೆಯಲಿದ್ದು, ಇದರ ಪರಿಣಾಮವಾಗಿ, ಶನಿವಾರ ಮತ್ತು ಭಾನುವಾರದಂದು ಬೆಂಗಳೂರಿನ ಕೆಲವು ಭಾಗಗಳಲ್ಲಿ ವಿದ್ಯುತ್ ಅಡಚಣೆಯಾಗಲಿದೆ.

*ಎಲ್ಲೆಲ್ಲಿ ವಿದ್ಯುತ್ ಕಡಿತವಾಗಲಿದೆ, ಇಲ್ಲಿದೆ ಮಾಹಿತಿ*

ನವೆಂಬರ್ 5, ಶನಿವಾರದಂದು, ಜಾಲಹಳ್ಳಿ, ಮಲ್ಲೇಶ್ವರಂ, ಹೆಬ್ಬಾಳ ಮತ್ತು ಕನಕಪುರದ ಬೆಸ್ಕಾಂ ವಿಭಾಗದಲ್ಲಿ ವಿದ್ಯುತ್ ಕಡಿತವಾಗಲಿದೆ.

ಹಾರೋಹಳ್ಳಿಯ ಕೆಲವು ಭಾಗಗಳು, ಸೋಮನಹಳ್ಳಿ - ಟಿ ಕೆ ಹಳ್ಳಿ ಲೈನ್‌ನ 220/66 ಕೆವಿ ಎಸ್‌ಸಿ, ತುಗಣಿ ಮತ್ತು ಅಗ್ರಹಾರ ಫೀಡರ್‌ಗಳು, ಮಲ್ಲೇಶ್ವರಂ, ಡಾಲರ್ಸ್ ಕಾಲೋನಿ, ನಾಗಶೀಟಿ ಹಳ್ಳಿ, ನ್ಯೂ ಬಿಇಎಲ್ ರಸ್ತೆ, ದೇವಿ ನಗರ, ಎಂಎಸ್‌ಆರ್‌ಎಲ್‌/ಓ, ಬಿಎಸ್‌ಎನ್‌ಎಲ್, ಇಸ್ರೋ ಮತ್ತು ಎಲ್‌ಜಿ ಹಳ್ಳಿ, ಇಂಡಸ್ಟ್ರಿಯಲ್ ಎಸ್ಟೇಟ್, ಸಂಜಯ್ ನಗರ, ಲಿಸ್ಕ್ ಕೋಲ್ಟ್ಜೆ ಪಟೇಲ್ ಬಿ ಅಪಾರ್ಟ್‌ಮೆಂಟ್, ಆಧಾರ್ ಬಿಲ್ಡಿಂಗ್ ಮತ್ತು ಚಿಕ್ಕಮಾರನ ಹಳ್ಳಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

Power cut In This Weekend In Bengaluru

ಬೆಸ್ಕಾಂ ಕಡೆಯಿಂದ ಇತರೆ ಕೇಂದ್ರಗಳಿಂದ ಪರ್ಯಾಯ ವಿದ್ಯುತ್ ಪೂರೈಕೆಗೆ ವ್ಯವಸ್ಥೆ ಮಾಡಬಹುದು ಎಂದು ಬೆಸ್ಕಾಂ ತಿಳಿಸಿದೆ.

ನವೆಂಬರ್ 6, ಭಾನುವಾರದಂದು ಬೆಸ್ಕಾಂ ವಿಭಾಗಗಳಾದ ಚಿಕ್ಕಬಳ್ಳಾಪುರ ಉಪವಿಭಾಗದ ವ್ಯಾಪ್ತಿಯ ಕನಕಪುರ ಮತ್ತು ಪೆರೇಸಂದ್ರ ಉಪಕೇಂದ್ರಗಳಲ್ಲಿ ವಿದ್ಯುತ್ ಅಡಚಣೆಯಾಗಲಿದೆ.

ಹಾರೋಹಳ್ಳಿಯ ಕೆಲವು ಭಾಗಗಳು, ಸೋಮನಹಳ್ಳಿ - ಟಿ ಕೆ ಹಳ್ಳಿ ಲೈನ್‌ನ 220/66 ಕೆವಿ ಎಸ್‌ಸಿ, ತುಗಣಿ ಮತ್ತು ಅಗ್ರಹಾರ ಫೀಡರ್‌ಗಳು, ಪೆರೇಸಂದ್ರ ಮತ್ತು ಚಿಕ್ಕಬಳ್ಳಾಪುರದಲ್ಲಿ ವಿದ್ಯುತ್ ಕಡಿತವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+