ಫೇಸ್ ಬುಕ್ಕಿನಲ್ಲಿ ಮೋದಿಯ ಅವಹೇಳನ: ಅಬ್ದುಲ್ ಬಂಧನ

Posted By:
Subscribe to Oneindia Kannada

ಬಾದಾಮಿ, ನವೆಂಬರ್,26: ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ನರೇಂದ್ರ ಮೋದಿಯ ಭಾವಚಿತ್ರದ ಮೇಲೆ ಮೂತ್ರ ವಿಸರ್ಜನೆ ಮಾಡಿದ ಚಿತ್ರ ಪೊಸ್ಟ್‌ ಮಾಡಿದ ಕಾರಣಕ್ಕೆ ಬಾದಾಮಿ ಪೊಲೀಸರು 24 ವರ್ಷದ ಯುವಕನನ್ನು ಬಂಧಿಸಿದ್ದಾರೆ.

ಮೋದಿ ಚಿತ್ರದ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿದ್ದ ಚಿತ್ರವನ್ನು ಕಾಯಮ್ ಅಬ್ದುಲ್ಲಾ ಸತ್ತರ್ ಫೇಸ್ ಬುಕ್ಕಿಗೆ ಅಪ್ ಲೋಡ್ ಮಾಡಿರುವ ಸಲುವಾಗಿ ಬಂಧಿಸಲಾಗಿದೆ ಎಂದು ಬಾದಾಮಿ ಸಬ್ ಇನ್ಸ್ ಪೆಕ್ಟರ್ ಕಿಲಾರಿ ತಿಳಿಸಿದರು.[ನಗದು ರಹಿತ ವ್ಯವಹಾರಕ್ಕೆ ಹೆಚ್ಚು ಒತ್ತು ನೀಡಿ: ಮೋದಿ ಮನವಿ]

posting obscene photo of PM Modi on Facebook one arrested in badami

ಈ ಚಿತ್ರವನ್ನು ಫೇಸ್ ಬುಕ್ಕಿನಲ್ಲಿ ಕಂಡು ಆಕ್ರೋಶಗೊಂಡ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಮುತ್ತು ಉಳ್ಳಾಗಟ್ಟಿ ಅವರು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದರು.

ಪೊಲೀಸರು ಅಬ್ದುಲ್ ಮೇಲೆ ಐಪಿಸಿ ಸೆಕ್ಷನ್ 153 ಮತ್ತು ಸೆಕ್ಷನ್ 67 ರ ಅನ್ವಯ ಕೇಸು ದಾಖಲಿಸಲಾಗಿದೆ. ಹಾಗೂ ಫೇಸ್ ಬುಕ್ಕಿನಲ್ಲಿ ಚಿತ್ರದ ಲಿಂಕನ್ನು ಇನ್ನು ಆರು ಜನ ಲೈಕ್ ಮಾಡಿದ್ದು ಅವರನ್ನು ಬಂಧಿಸಲು ಯುವ ಮೋರ್ಚಾ ಅಧ್ಯಕ್ಷ ಒತ್ತಾಯಿಸಿದರು ಎಂದು ಪೊಲೀಸ್ ಕಿಲಾರಿ ತಿಳಿಸಿದರು.[ಅನಂತಮೂರ್ತಿ ಮೂತ್ರ ಮಾಡಿದ 'ದೇವರ ಕಲ್ಲು' ಪತ್ತೆ]

ಆದರೆ ಲೈಕ್ ಮಾಡಿದವರ ಮೇಲೆ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ಸಬ್ ಇನ್ಸ್ ಫೆಕ್ಡರ್ ಸ್ಪಷ್ಟ ಪಡಿಸಿದರು. ಈ ರೀತಿಯ ಚಿತ್ರಗಳು ಜಾಲತಾಣದಲ್ಲಿ ಕಾಣುತ್ತಿರುವುದು ಇದೇ ಮೊದಲಲ್ಲ ಎಂದು ತಿಳಿಸಿದರು.

ಇದೇ ವರ್ಷದ ಜೂನಿನಲ್ಲಿ ಸಿದ್ದರಾಮಯ್ಯ ಬಾಯಿಗೆ ನಾಯಿ ಮೂತ್ರ ವಿಸರ್ಜನೆ ಮಾತ್ತಿರುವ ಚಿತ್ರವನ್ನು ವಿಜಯಪುರದಲ್ಲಿ ಒಬ್ಬರು ಪೋಸ್ಟ್ ಮಾಡಿದ್ದರು ಅವರನ್ನು ಬಂಧಿಸಲಾಗಿತ್ತು. ಮೇ ತಿಂಗಳಲ್ಲಿ ಎಐಎಂಐಎಂ ಲೀಡರ್ ಅಸಾಬುದ್ದೀನ್ ಓವೈಸಿ ಸೋದರ ಅಕ್ಬರುದ್ದೀನ್ ಕಾಲಿನ ಕೆಳಗೆ ಮೋದಿ ಪರಿತಪಿಸುವಂತಹ ಚಿತ್ರವನ್ನು ಫೇಸ್ ಬುಕ್ಕಿನಲ್ಲಿ ಹಾಕಿದ್ದಕ್ಕೆ ಕೊಪ್ಪಳದವನೊಬ್ಬ ಬಂಧಿನತನಾಗಿದ್ದ, ಹಾಗೆಯೇ ಬಾಗಲಕೋಟೆಯಲ್ಲಿ ಮೋಹನ್ ಭಾಗವತ್ ಅವರ ಅರ್ಧ ಕೆಳಭಾಗದ ಚಿತ್ರಕ್ಕೆ ಮಹಿಳೆಯ ವೇಷ ಹಾಕಿದ ವ್ಯಕ್ತಿಯನ್ನು ಬಂಧಿಸಲಾಗಿತ್ತು.[ಬ್ಲಾಗಿನಲ್ಲಿ ತನ್ನದೇ ನಗ್ನ ಚಿತ್ರ ಹಾಕಿ ಯುವತಿಯ ಪ್ರತಿಭಟನೆ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Badami police arrested a 24-year-old youth on Saturday for allegedly posting an obscene photo of Prime Minister Narendra Modi on social media.According to Badami Sub Inspector Kilari, Kayum Abdul Sattar Befari had uploaded a photo on Facebook of the Prime Minister being urinated on.
Please Wait while comments are loading...