• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಂದೇ ಖಾತೆ ಹಂಚಿಕೆ ಪಕ್ಕಾ: ಯಾರಿಗೆ ಯಾವ ಖಾತೆ?

|

ಬೆಂಗಳೂರು, ಆಗಸ್ಟ್ 24: ದೆಹಲಿಗೆ ಹೋಗಿ ಬಂದಿರುವ ಯಡಿಯೂರಪ್ಪ ಅವರು ಖಾತೆ ಹಂಚಿಕೆಯ ವಿಷಯವನ್ನು ಇತ್ಯರ್ಥ ಮಾಡಿಕೊಂಡು ಬಂದಿದ್ದು ಇಂದೇ ಖಾತೆ ಹಂಚಿಕೆ ಮಾಡುವುದಾಗಿ ಹೇಳಿದ್ದಾರೆ.

ನಗರದಲ್ಲಿ ಇಂದು ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾತೆ ಹಂಚಿಕೆ ಬಗ್ಗೆ ಅಮಿತ್ ಶಾ ಅವರೊಂದಿಗೆ ಮಾತನಾಡಿಕೊಂಡು ಬಂದಿದ್ದು, ಇಂದು ಸಂಜೆಯ ಒಳಗಾಗಿ ಖಾತೆ ಹಂಚಿಕೆ ಪ್ರಕ್ರಿಯೆ ಪೂರ್ಣವಾಗಲಿದೆ ಎಂದಿದ್ದಾರೆ.

ಯಡಿಯೂರಪ್ಪ ಸಂಪುಟ ಆಯ್ತು; ಈಗ ಖಾತೆ ಹಂಚಿಕೆ ಕಗ್ಗಂಟು!

ಪ್ರಸ್ತುತ 17 ಶಾಸಕರಿಗೆ ಸಚಿವರಾಗಿ ಬಡ್ತಿ ನೀಡಲಾಗಿದೆ. ಹದಿನೇಳು ಶಾಸಕರಿಗೂ ಖಾತೆ ಹಂಚಿಕೆ ಆಗಬೇಕಿದೆ. ವಿ.ಸೋಮಣ್ಣ ಅವರನ್ನು ತಾತ್ಕಾಲಿಕವಾಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿದೆ. ದಸರಾ ಸಮೀಪದಲ್ಲಿರುವ ಕಾರಣ ಈ ನೇಮಕಾತಿ ತಾತ್ಕಾಲಿಕವಾಗಿದೆ.

ಖಾತೆ ಹಂಚಿಕೆ ಇಂದು ಸಂಜೆ ವೇಳೆಗೆ ಅಂತಿಮವಾಗಲಿದ್ದು, ಸಂಭಾವ್ಯ ಪಟ್ಟಿ ಇಲ್ಲಿದೆ.

* ಆರ್. ಅಶೋಕ್ - ಗೃಹ, ಬೆಂಗಳೂರು ಅಭಿವೃದ್ಧಿ

* ಕೆ.ಎಸ್. ಈಶ್ವರಪ್ಪ - ಲೋಕೋಪಯೋಗಿ

* ಗೋವಿಂದ ಕಾರಜೋಳ - ಜಲಸಂಪನ್ಮೂಲ

* ಅಶ್ವಥ್ ನಾರಾಯಣ - ವೈದ್ಯಕೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ

* ಲಕ್ಷ್ಮಣ ಸವದಿ - ಸಕ್ಕರೆ, ತೋಟಗಾರಿಕೆ

* ಜಗದೀಶ್ ಶೆಟ್ಟರ್- ಕಂದಾಯ

* ಶ್ರೀರಾಮುಲು - ಸಮಾಜ ಕಲ್ಯಾಣ

* ಸುರೇಶ್ ಕುಮಾರ್ - ಕಾನೂನು, ಸಂಸದೀಯ ಪ್ರಾಥಮಿಕ ಶಿಕ್ಷಣ

* ವಿ. ಸೋಮಣ್ಣ - ನಗರಾಭಿವೃದ್ಧಿ

* ಸಿ.ಟಿ. ರವಿ - ಉನ್ನತ ಶಿಕ್ಷಣ, ಅರಣ್ಯ

* ಬಸವರಾಜ ಬೊಮ್ಮಾಯಿ - ಗ್ರಾಮೀಣಾಭಿವೃದ್ಧಿ

* ಶ್ರೀನಿವಾಸ ಪೂಜಾರಿ - ಮೀನುಗಾರಿಕೆ, ಬಂದರು,

* ಜೆ.ಸಿ. ಮಾಧುಸ್ವಾಮಿ - ಕೃಷಿ,

* ಸಿ.ಸಿ. ಪಾಟೀಲ್ - ಕನ್ನಡ ಮತ್ತು ಸಂಸ್ಕೃತಿ,

* ನಾಗೇಶ್ - ಸಣ್ಣ ಕೈಗಾರಿಕೆ, ಕಾರ್ಮಿಕ,

* ಪ್ರಭು ಚೌಹಾಣ್ - ಕ್ರೀಡೆ ಮತ್ತು ಯುವ ಸಬಲೀಕರಣ

* ಶಶಿಕಲಾ ಜೊಲ್ಲೆ - ಮಹಿಳಾ ಮತ್ತು ಮಕ್ಕಳ ಕಲ್ಯಾಣ.

English summary
Yediyurappa said portfolios to new minister will be distributed today only. Here is the probeble list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X