ರಾಜಕಾರಣ ನಿಂತ ನೀರಲ್ಲ. ಯಾವಾಗ ಏನು ಬೇಕಾದ್ರೂ ಆಗ್ಬಹುದು ಎಂದು ಕೆ ಎನ್ ರಾಜಣ್ಣ ಹೇಳಿದ್ಯಾಕೆ?

ಬೆಳಗಾವಿ, ಜುಲೈ 31: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿಯವರೊಂದಿಗೆ ಹೊಂದಾಣಿಕೆ ಮಾಡಿಕೊಂಡು‌ ಲೋಕಸಭಾ ಚುನಾವಣೆ ಎದುರಿಸುವ ವಿಚಾರ ಅವರಿಗೆ‌ ಬಿಟ್ಟಿದ್ದು. ರಾಜಕಾರಣ ನಿಂತ ನೀರಲ್ಲ, ರಾಜಕಾರಣ. ಯಾವಾಗ, ಏನು ಬೇಕಾದರೂ ಆಗಿ ಬದಲಾಗಬಹುದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.

ಈ ಕುರಿತು ಸೋಮವಾರ ಬೆಳಗಾವಿಯಲ್ಲಿ ಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ ಸ್ವತಂತ್ರರು. ಅವರು ಯಾರ ಜತೆಗೆ ಬೇಕಾದರೂ ಸೇರಿಕೊಂಡು ಲೋಕಸಭಾ ಚುನಾವಣೆ ಎದುರಿಸಬಹುದು ಎಂದು ತಿಳಿಸಿದರು.

Politics is Not A Standing Water Anything Can Happen Says Minister KN Rajanna

ಸಹಕಾರ ಇಲಾಖೆಯಲ್ಲಿ ಆಗಿರುವ ಅವ್ಯವಹಾರ ಬಗ್ಗೆ ರಸ್ತೆ ಮಧ್ಯೆ ನಿಂತು ಆರೋಪ ಮಾಡುವವರ ಮಾತಿಗೆ ಪ್ರತಿಕ್ರಿಯಿಸಲು ಆಗುವುದಿಲ್ಲ. ಸಹಕಾರ ಬ್ಯಾಂಕ್ ಮತ್ತು ಇತರ ಸಂಸ್ಥೆಗಳು ಉತ್ತಮ ಕೆಲಸ ಮಾಡುತ್ತಿವೆ. ಆದಾಗ್ಯೂ, ಸಂಸ್ಥೆಗಳ ವಿರುದ್ಧ ದೂರು ಬಂದರೆ ತ್ವರಿತವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಇನ್ನೂ ವರ್ಗಾವಣೆ ವಿಷಯದಲ್ಲಿ ಕಾಂಗ್ರೆಸ್ ಸರಕಾರ ತಲೆ ಕೆಡಿಸಿಕೊಳ್ಳುತ್ತಿದೆ ಎನ್ನುವ ಬಿಜೆಪಿ ಆರೋಪ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಬಸವರಾಜ ಬೊಮ್ಮಾಯಿ ತಾವು ಹಿಂದೆ ನಡೆಸಿದ್ದ ಆಡಳಿತ ಆಧಾರದ ಮೇಲೆ ಆರೋಪ ಮಾಡಿರಬಹುದು. ಅವರಂತೆ ನಮ್ಮ ಸರಕಾರ ಇಲ್ಲ. ಅಂಥದ್ದೇನು ನಡೆಯುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ತಿರುಗೇಟು ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+