ವಿಜಯಪುರದ ಅಕ್ರಮ ಪಿಸ್ತೂಲು ಮಾರಾಟಗಾರರ ಮೇಲೆ ಸಮರ ಸಾರಿದ ಪೊಲೀಸರು
ವಿಜಯಪುರ, ಅಕ್ಟೋಬರ್ 17: ಐತಿಹಾಸಿಕ ಜಿಲ್ಲೆ ವಿಜಯಪುರದಲ್ಲಿ ಅಕ್ರಮ ಪಿಸ್ತೂಲು ಮಾರಾಟ ದಂಧೆಯ ವಿರುದ್ಧ ಜಿಲ್ಲಾ ಪೋಲಿಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.
ದೊಡ್ಡ ಮಟ್ಟದ ಕಾರ್ಯಾಚರಣೆ ನಡೆಸಿದ್ದು 20 ಅಕ್ರಮ ನಾಡ ಪಿಸ್ತೂಲು, 49 ಮದ್ದು ಗುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.
ಇನ್ನು ಅಕ್ರಮ ಪಿಸ್ತೂಲು ಮಾರಾಟದ ಹಿನ್ನೆಲೆಯಲ್ಲಿ ವಿಜಯಪುರ, ಕಲಬುರಗಿ, ಬೀದರ್ ಜಿಲ್ಲೆಯ ಒಟ್ಟು 12 ಆರೋಪಿಗಳನ್ನು ಬಂಧನಕ್ಕೊಳಪಡಿಸಲಾಗಿದೆ. ಅಲ್ಲದೆ ಜಿಲ್ಲೆಯ 9 ವಿವಿಧ ಠಾಣೆಗಳಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ಕೂಡ ದಾಖಲು ಮಾಡಲಾಗಿದೆ.

ಮಧ್ಯಪ್ರದೇಶದ ಗಂಧವಾಣಿಯ ಗ್ರಾಮದ ಬಚ್ಚನಸಿಂಗ್, ತನಮನಸಿಂಗ್ ರಿಂದ ಅಕ್ರಮ ಪಿಸ್ತೂಲುಗಳು ಮೂರು ಜಿಲ್ಲೆಗಳಲ್ಲಿ ಸರಬರಾಜು ಅಗುತ್ತಿರುವುದು ತನಿಖೆ ವೇಳೆ ತಿಳಿದು ಬಂದಿದೆ. ಅಕ್ರಮ ಶಸ್ತ್ರಾಸ್ತ್ರಗಳ ಸರಬರಾಜಿನ ಕಿಂಗ್ ಪಿನ್ ಗಳನ್ನು ಆದಷ್ಟು ಬೇಗ ಸೆರೆ ಹಿಡಿಯುವುದಾಗಿ ಉತ್ತರ ವಲಯ ಐಜಿಪಿ ಡಾ.ಕೆ. ರಾಮಚಂದ್ರರಾವ್ ಹೇಳಿದ್ದಾರೆ.

ಅಕ್ರಮ ಶಸ್ತ್ರಾಸ್ತ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾದ ಜಿಲ್ಲಾ ಪೋಲಿಸರಿಗೆ ಐಜಿಪಿ 1 ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಿದ್ದಾರೆ.












Click it and Unblock the Notifications