Santro Ravi; ಪೊಲೀಸರು ಬರುವ ಮುನ್ನವೇ ರಾಮನಗರದಿಂದ ಪರಾರಿ

ಬೆಂಗಳೂರು, ಜನವರಿ 12; ಕರ್ನಾಟಕದ ರಾಜಕೀಯದಲ್ಲಿ ಭಾರೀ ಚರ್ಚೆಯಲ್ಲಿರುವ ಹೆಸರು ಸ್ಯಾಂಟ್ರೊ ರವಿ. ಪೊಲೀಸರು ಸ್ಯಾಂಟ್ರೊ ರವಿಯನ್ನು ಬಂಧಿಸಲು ಆಗಮಿಸಿದ್ದನ್ನು ತಿಳಿದು ರಾಮನಗರದಿಂದ ಪರಾರಿಯಾಗಿದ್ದಾನೆ. ರವಿ ಕಾರು ಚಾಲಕನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸ್ಯಾಂಟ್ರೋ ರವಿ ರಾಮನಗರದಲ್ಲಿ ಬಂಧನ ಎಂಬ ಸುದ್ದಿಗೆ ರಾಮನಗರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಂತೋಷ ಬಾಬು ಪ್ರತಿಕ್ರಿಯೆ ನೀಡಿದ್ದಾರೆ. "ಸ್ಯಾಂಟ್ರೋ ರವಿ ರಾಮನಗರ ಭಾಗದಲ್ಲಿ ತಲೆ ಮರಸಿಕೊಂಡಿರುವ ಗುಮಾನಿ ಇದೆ ಹಾಗಾಗಿ ರಾಮನಗರದಲ್ಲೂ ಪೋಲಿಸ್ ತಂಡ ರಚನೆ ಮಾಡಲಾಗಿದೆ" ಎಂದು ತಿಳಿಸಿದ್ದಾರೆ.

ಹಿಂದಿನ ಅಪ್‌ ಡೇಟ್; ಗುರುವಾರ ರಾಮನಗರದಲ್ಲಿ ಸ್ಯಾಂಟ್ರೊ ರವಿಯನ್ನು ಬಂಧಿಸಿ ಮೈಸೂರಿಗೆ ಕರೆದುಕೊಂಡು ಹೋಗಲಾಗಿದೆ ಎಂಬ ಮಾಹಿತಿ ಸಿಕ್ಕಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಯಾಂಟ್ರೊ ರವಿ ವಿರುದ್ಧ ದಾಖಲಾಗಿರುವ ದೂರಿನ ತನಿಖೆ ನಡೆಸಲು ಮೈಸೂರು ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದರು.

Police Arrested Santro Ravi In Ramanagara

ಮೈಸೂರಿನಲ್ಲಿ ತನ್ನ ವಿರುದ್ಧ ದೂರು ದಾಖಲಾದ ಬಳಿಕ ಸ್ಯಾಂಟ್ರೊ ರವಿ ಪರಾರಿಯಾಗಿದ್ದು, ಪೊಲೀಸರು ಆತನ ಬಂಧನಕ್ಕೆ 11 ವಿಶೇಷ ತಂಡಗಳನ್ನು ರಚನೆ ಮಾಡಿದ್ದರು. ನಿರೀಕ್ಷಣಾ ಜಾಮೀನು ಕೋರಿ ಸ್ಯಾಂಟ್ರೊ ರವಿ ಕೋರ್ಟ್‌ಗೂ ಅರ್ಜಿ ಸಲ್ಲಿಕೆ ಮಾಡಿದ್ದರು.

ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ತನ್ನ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆಯೇ ಸ್ಯಾಂಟ್ರೊ ರವಿ ತಲೆಮರೆಸಿಕೊಂಡಿದ್ದ. ವಕೀಲರ ಮೂಲಕ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಆದರೆ ಅರ್ಜಿ ವಿಚಾರಣೆ ಗುರುವಾರಕ್ಕೆ ಮುಂದೂಡಲಾಗಿತ್ತು.

ಪೊಲೀಸರು ವಿಚಾರಣೆಗೆ ಬರುವಂತೆ ಕರೆದಾಗ ಅವರಿಗೆ ಪೋನ್ ಮೂಲಕ ಸ್ಯಾಂಟ್ರೊ ರವಿ ಅವಾಜ್ ಹಾಕಿದ್ದ. ಈ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ರಾಮನಗರ ಹೋಟೆಲ್, ರೆಸಾರ್ಟ್‌ಗಳಲ್ಲಿ ಸ್ಯಾಂಟ್ರೊ ರವಿ ಇರಬಹುದು ಎಂಬ ಗುಮಾನಿ ಇದೆ. ಆದ್ದರಿಂದ ಜಿಲ್ಲಾ ಪೊಲೀಸರು ತಂಡ ರಚನೆ ಮಾಡಿದ್ದಾರೆ.

ಮಹಿಳೆಗೆ ಕಿರುಕುಳ, ಪೊಲೀಸ್ ಇಲಾಖೆಯಲ್ಲಿನ ವರ್ಗಾವಣೆ ದಂಧೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಸ್ಯಾಂಟ್ರೊ ರವಿ ಹೆಸರು ಕೇಳಿ ಬಂದಿದೆ. ತಾನು ಸಮಾಜ ಸೇವಕ ಎಂದು ಹೇಳಿಕೊಳ್ಳುತ್ತಿದ್ದ ರವಿ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಸಂಪರ್ಕ ಹೊಂದಿದ್ದ.

ಕಾಂಗ್ರೆಸ್ ಟ್ವೀಟ್; ಸ್ಯಾಂಟ್ರೊ ರವಿ ವಿಚಾರದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಬುಧವಾರ ಟ್ವೀಟ್‌ ಮಾಡಿದ್ದ ಪಕ್ಷ ;ಸ್ಯಾಂಟ್ರೋ ರವಿಯನ್ನ ಇನ್ನೂ ಬಂಧಿಸಲಾಗಿಲ್ಲ ಎಂದರೆ ಏನರ್ಥ @JnanendraAraga ಅವರೇ?' ಎಂದು ಹೇಳಿತ್ತು.

* ನಿಮ್ಮ ಇಲಾಖೆಯ ಅಸಮರ್ಥ್ಯವೇ?
* ಸರ್ಕಾರದ ಕಣ್ಣಾಮುಚ್ಚಾಲೆ ಆಟವೇ?
* ನಾಯಕರ ಒತ್ತಡವೆ?
* ಎಲ್ಲರಿಗಿಂತ ಆತ ಪ್ರಭಾವಿಯೇ?
* ನಿಮ್ಮ ಭ್ರಷ್ಟಾಚಾರದ ಬಂಡವಾಳ ಹೊರಬೀಳುವ ಭಯವೇ?
* ಆತನ ಸಿಡಿ ಬ್ಲಾಕ್ಮೇಲ್‌ಗೆ ಭಯವೇ?
* ಆತ ಬಿಜೆಪಿ ಕಾರ್ಯಕರ್ತ ಎಂಬ ಮಮಕಾರವೇ?. ಎಂದು ಪ್ರಶ್ನೆ ಮಾಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+