ರಸ್ತೆಯುದ್ದಕ್ಕೂ ಉಗುಳುತ್ತಾ ಹೋಗುತ್ತಿದ್ದ ಇಬ್ಬರ ಬಂಧನ
ಮೈಸೂರು/ಕಲಬುರಗಿ, ಏಪ್ರಿಲ್ 13: ರಸ್ತೆಯುದ್ದಕ್ಕೂ ಎಂಜಲು ತುಪ್ಪುತ್ತಾ ಹೋಗುತ್ತಿದ್ದ ಇಬ್ಬರು ಅಪರಿಚಿತರನ್ನು ಪೊಲೀಸರು ಬಂಧಿಸಿದ್ದಾರೆ.
ಮೈಸೂರು ಹಾಗೂ ಕಲಬುರಗಿಯಲ್ಲಿ ಓರ್ವನನ್ನು ಬಂಧಿಸಲಾಗಿದೆ. ಕೊರೊನಾ ವೈರಸ್ ಭೀತಿ ಆರಂಭವಾದಾಗಿನಿಂದ ಸೀನುವುದು, ಕೆಮ್ಮುವುದು ಇದರ ಮೇಲೆ ಜನರೆಲ್ಲರ ಗಮನವಿರುತ್ತದೆ.
ಹುಬ್ಬಳ್ಳಿ, ವಿಜಯಪುರದಲ್ಲಿ 7 ಮಂದಿ ಪೊಲೀಸರಿಗೆ ಕ್ವಾರೆಂಟೈನ್
ಹೋಗಿರುವಾಗ ರಸ್ತೆಯಲ್ಲಿ ಉಗುಳುತ್ತಾ ಹೋದವನ ಮೇಲೆ ಸಾರ್ವಜನಿಕರಿಗೆ ಅನುಮಾನ ಬಂದು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ ತಕ್ಷಣವೇ ಬಂದು ಆತನನ್ನು ಬಂಧಿಸಿದ್ದಾರೆ. ಆದರೆ ವಿಚಾರಣೆ ವೇಳೆ ಹೇಳಿಕೆಯನ್ನು ಪದೇ ಪದೇ ಬದಲಾಯಿಸಿದ್ದಾನೆ. ಹೀಗಾಗಿ ಆತನ ಮೇಲಿದ್ದ ಅನುಮಾನ ಇನ್ನಷ್ಟು ಹೆಚ್ಚಾಗಿದೆ.
ಕಲಬುರಗಿ: ರಾಮಮಂದಿರ ಸರ್ಕಲ್ ಬಳಿಯ ಧನ್ವಂತರಿ ಆಸ್ಪತ್ರೆಯ ಹತ್ತಿರ ಉಗುಳುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೈಸೂರು: ಜೆಎಸ್‌ಎಸ್ ಬಡಾವಣೆಯಲ್ಲಿ ನೆಲದ ಮೇಲೆ ಪದೇ ಪದೇ ಉಗಿಯುತ್ತಿದ್ದ ಸೈಯದ್ ಎಂಬುವವರನ್ನು ಬಂಧಿಸಲಾಗಿದೆ. ಇವರು ಅಧಿಕೃತವಾಗಿ ಪಾಸ್ ಪಡೆದು ಮಂಗಳಮುಖಿಯರಿಗೆ ಸಹಾಯ ಮಾಡಲೆಂದೇ ಅಕ್ಕಿಯನ್ನು ಸ್ಕೂಟರ್‌ನಲ್ಲಿ ಹಾಕಿಕೊಂಡು ಬಂದಿದ್ದರು.
ರಾಯಚೂರಿನಲ್ಲಿ ಕಲುಷಿತ ನೀರು ಕುಡಿದು ವ್ಯಕ್ತಿ ಸಾವು; ಗ್ರಾಮಸ್ಥರ ಆಕ್ರೋಶ
ಮಂಗಳಮುಖಿಯರನ್ನು ಹುಡುಕುತ್ತಾ ನಿಂತಿದ್ದಾಗ ಸಾರ್ವಕನಿಕರಿಗೆ ಅನುಮಾನ ಮೂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.



Click it and Unblock the Notifications













