ಜಿಎಸ್‌ಟಿ ಅಧಿಕಾರಿಗಳನ್ನೇ ಅಂಧರ್ ಮಾಡಿದ ಪೊಲೀಸ್: ಬರೋಬ್ಬರಿ 12 ಕೋಟಿ ರೂ. ವಶ
ಸಾಮಾನ್ಯವಾಗಿ ಜಿಎಸ್‌ಟಿ ಕಟ್ಟುವುದರಲ್ಲಿ ಮೋಸ ಮಾಡಿದವರನ್ನು ಬಂಧಿಸಲಾಗುತ್ತದೆ. ಆದರೆ, ಜಿಎಸ್‌ಟಿ ಅಧಿಕಾರಿಗಳನ್ನೇ ಬಂಧಿಸಿರುವುದು ಎಂದಾದರೂ ಕೇಳಿದ್ದೀರಾ.. ಇದೇ ಮೊದಲ ಬಾರಿ ಎನ್ನುವಂತೆ ಬೆಂಗಳೂರಿನಲ್ಲಿ ನಾಲ್ವರು ಜಿಎಸ್‌ಟಿ ಅಧಿಕಾರಿಗಳನ್ನು ಪೊಲೀಸರು ಅಂಧರ್ ಮಾಡಿದ್ದಾರೆ. ಅಲ್ಲದೇ ಇವರಿಂದ ಬರೋಬ್ಬರಿ 12 ಕೋಟಿ ರೂಪಾಯಿ ಮೊತ್ತವನ್ನು (11.50 ಕೋಟಿ) ವಶಪಡಿಸಿಕೊಂಡಿದ್ದಾರೆ. ಭಾರೀ ಮೊತ್ತದ ಹಣ ವಶಕ್ಕೆ ಪಡೆದಿರುವುದು ಹಾಗೂ ನಾಲ್ವರು ಜಿಎಸ್‌ಟಿ ಅಧಿಕಾರಿಗಳನ್ನೇ ಏಕೆ ಬಂಧಿಸಲಾಗಿದೆ ಎನ್ನುವ ವಿವರ ಇಲ್ಲಿದೆ.
ನಾವು ಜಿಎಸ್‌ಟಿ, ಇಡಿಯಿಂದ ಬಂದಿದ್ದೇವೆ. ನಿಮ್ಮ ಮೊಬೈಲ್ ಪೋನ್‌ಗಳನ್ನು ನಮಗೆ ಕೊಡಿ. ಕೂಡಲೇ ಕಾರಿನಲ್ಲಿ ಕುಳಿತುಕೊಳ್ಳಿ ಎಂದು ನಾಲ್ವರು ಜಿಎಸ್‌ಟಿ ಅಧಿಕಾರಿಗಳು ಜಿ.ಎಂ.ಪಾಳ್ಯದ ನಿವಾಸಿ ಹಾಗೂ ಆತನ ಸ್ನೇಹಿತನಿಗೆ ಚಿತ್ರ ಹಿಂಸೆ ನೀಡಿ ಹಣ ವಸೂಲಿ ಮಾಡಿದ್ದಾರೆ. ಈ ಹಣ ತರುವುದಕ್ಕೆ ತಡವಾಗಿದ್ದಕ್ಕೂ ಹಲ್ಲೆ ಮಾಡಿದ್ದಾರೆ. ಈ ಘಟನೆಯ ವಿವರ ಈ ರೀತಿ ಇದೆ.

ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಜಿ.ಎಂ.ಪಾಳ್ಯದ ನಿವಾಸಿಯೊಬ್ಬರು ನೀಡಿದ ದೂರಿನ ಮೇಲೆ ಈ ಪ್ರಕರಣ ಬೆಳಕಿಗೆ ಬಂದಿದೆ. ಮೋಸಕ್ಕೆ ಒಳಗಾದ ವ್ಯಕ್ತಿಯು ಬೆಂಗಳೂರಿನ ಜೀವನ್ ಭೀಮಾನಗರದಲ್ಲಿರುವ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈಚೆಗೆ ಬೆಳಿಗ್ಗೆ ಅವರ ಮನೆಗೆ ಅಪರಿಚಿತ ವ್ಯಕ್ತಿಗಳು ಅಕ್ರಮವಾಗಿ ಪ್ರವೇಶಿಸಿದ್ದಾರೆ. ಈ ರೀತಿ ಏಕಾಏಕಿ ಮನೆಗೆ ನುಗ್ಗಿದ ಸಂದರ್ಭದಲ್ಲಿ ದೂರು ನೀಡಿದ ವ್ಯಕ್ತಿ ಮತ್ತು ಅವರ ಸ್ನೇಹಿತರು ಮೂರು ಜನರಿದ್ದರು. ನಾವು ಜಿ.ಎಸ್.ಟಿ, ಇಡಿ ಅಧಿಕಾರಿಗಳು ಎಂದು ಹೇಳಿಕೊಂಡು, ಮನೆಯಲ್ಲಿ ಇದ್ದವರ ಎಲ್ಲರ ಮೊಬೈಲ್ ಫೋನ್‌ಗಳನ್ನು ತೆಗೆದುಕೊಂಡಿದ್ದಾರೆ. ಅಲ್ಲದೇ ಬಲವಂತವಾಗಿ ಕಾರುಗಳಲ್ಲಿ ಕುರಿಸಿಕೊಂಡು ಅವರು ಕೆಲಸ ಮಾಡುವ ಕಂಪನಿಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲದೇ ಅಲ್ಲಿಯೂ ಹಲ್ಲೆ ಮಾಡಿ, ಪ್ರತಿಯೊಬ್ಬರನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂಡಿಹಾಕಿದ್ದಾರೆ.
ಜಿಎಸ್‌ಟಿ ಅಧಿಕಾರಿಗಳು ಎಂದು ಹೇಳಿಕೊಂಡ ಅವರು 103 ಕೋಟಿ ರೂಪಾಯಿ ನೀಡುವಂತೆ ಒತ್ತಾಯಿಸಿ ಹಲ್ಲೆ ಮಾಡಿದ್ದಾರೆ.
ಅಲ್ಲದೇ ಜಿ.ಎಸ್.ಟಿ ಅಧಿಕಾರಿಗಳು ಕಾರಿನಲ್ಲಿ ಬೆಂಗಳೂರಿನ ವಿವಿಧ ಜಾಗಕ್ಕೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಪೋನ್‌ಗಳನ್ನು ಸ್ವೀಚ್ ಆಫ್ ಮಾಡಿಸಿದ್ದಾರೆ. ಈ ಜಿಎಸ್‌ಟಿ ಅಧಿಕಾರಿಗಳು ಕೇಳಿದ ಹಣ ಕೊಡುವುದಕ್ಕೆ ತಡವಾಗಿದ್ದಕ್ಕೂ ಅವರ ಮೇಲೆ ಹಲ್ಲೆ ಮಾಡಲಾಗಿದೆ.
ಪ್ರಕರಣದಲ್ಲಿ ಜಿಎಸ್‌ಟಿ ಅಧಿಕಾರಿಗಳ ಬಂಧನವೇಗೆ ?
ನಾಲ್ವರು ಜಿಎಸ್‌ಟಿ ಅಧಿಕಾರಿಗಳು ಎಂದು ಹೇಳಿಕೊಂಡವರು ಹಣ ವಸೂಲಿ ಮಾಡಿ ಹೋಗುವ ಸಂದರ್ಭದಲ್ಲಿ ಮಹಜರ್ (ಡಾಕ್ಯೂಮೆಂಟ್) ದಾಖಲಾತಿಗಳನ್ನು ಸ್ಥಳದಲ್ಲಿಯೇ ಬಿಟ್ಟು ಹೋಗಿದ್ದಾರೆ. ಈ ಸಂಬಂಧ ದೂರು ದಾಖಲಾಗುತ್ತಿದ್ದಂತೆಯೇ ಈ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಸಿಸಿಬಿ ತನಿಖೆಗೆ ನೀಡಲಾಗಿದೆ. ತನಿಖೆಯನ್ನು ಮುಂದುವರಿಸಿದ ಸಿಸಿಬಿ ಪೊಲೀಸರು, ಈ ಪ್ರಕರಣದ ತನಿಖೆಯಲ್ಲಿ ಆಗಿರುವ ಲೋಪ ಹಾಗೂ ಮೋಸವನ್ನು ಪತ್ತೆ ಮಾಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ Director General of GST Intelligence, Bengaluru Zonal Unit (Central GST) ಘಟಕದ ಅಧಿಕಾರಿಗಳು ಯಾವುದೇ ಅನುಮೋದನೆ ಇಲ್ಲದೆ, ದಾಳಿ ಮಾಡಿರುವುದು ಧೃಡಪಟ್ಟಿದೆ. ಅಲ್ಲದೇ ಜಿ.ಎಸ್.ಟಿ ಅಧಿಕಾರಿಗಳು ಹಲವು ವಸ್ತುಗಳನ್ನು ಕಾನೂನು ಬಾಹಿರವಾಗಿ ಜಪ್ತಿ ಮಾಡಿರುವುದು ಬೆಳಕಿಗೆ ಬಂದಿದೆ. ಇನ್ನೂ ಗಂಭೀರವಾದ ವಿಷಯವೆಂದರೆ, ಯಾವುದೇ ಅನುಮತಿ ಇಲ್ಲದೇ 2 ದಿನಗಳ ಕಾಲ ಅಮಾಯಕರನ್ನು ಅಕ್ರಮವಾಗಿ ಬಂಧನದಲ್ಲಿ ಇರಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ ಈ ಹಿನ್ನೆಲೆಯಲ್ಲಿ ನಾಲ್ವರು ಜಿಎಸ್‌ಟಿ ಅಧಿಕಾರಿಗಳನ್ನು ಬಂಧಿಸಲಾಗಿದೆ.












Click it and Unblock the Notifications