• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಂಧನ ಭೀತಿಯಿಂದ ಸದ್ಯಕ್ಕೆ ಬಚಾವಾದ ಡಿಕೆ ಶಿವಕುಮಾರ್ ಆಪ್ತರು!

|
   Relief for DK Shivakumar's Close Aides | Oneindia Kannada

   ಬೆಂಗಳೂರು, ಅಕ್ಟೋಬರ್ 15: 'ಮನಿಲಾಂಡ್ರಿಂಗ್ ಕೇಸಿನಲ್ಲಿ ಜಾರಿ ನಿರ್ದೇಶನಾಲಯ ನೀಡಿರುವ ರದ್ದುಗೊಳಿಸಬೇಕು' ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ನಾಲ್ವರು ಆಪ್ತರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್​ ವಜಾಗೊಳಿಸಿದೆ.

   ಅದರೆ ಬಂಧನದ ಭೀತಿಯಲ್ಲಿದ್ದ ಡಿಕೆಶಿ ಆಪ್ತರಿಗೆ ಸುಪ್ರೀಂ ಕೋರ್ಟಿನಿಂದ ನೆಮ್ಮದಿ ಸುದ್ದಿ ಸಿಕ್ಕಿದೆ. ಜಾರಿ ನಿರ್ದೇಶನಾಲಯಕ್ಕೆ ಮಹತ್ವದ ಸೂಚನೆ ನೀಡಿದ್ದು, ಡಿಕೆಶಿ ಆಪ್ತರಿಗೆ ಸದ್ಯಕ್ಕೆ ವಿಚಾರಣೆಗಾಗಿ ಸಮನ್ಸ್ ಹಾಗೂ ಬಂಧನ ಮಾಡುವಂತಿಲ್ಲ.

   ಡಿಕೆ ಶಿವಕುಮಾರ್ ದುಃಸ್ಥಿತಿಗೆ ಮೈಲಾರಲಿಂಗದ ಶಾಪವೆ ಕಾರಣವೇ?

   ಈ ಹಿಂದೆ ಕರ್ನಾಟಕ ಹೈಕೋರ್ಟಿನಿಂದ ನಾಲ್ವರಿಗೆ ಬಂಧನದಿಂದ ತಾತ್ಕಾಲಿಕ ರಕ್ಷಣೆ ನೀಡಿ ಮಧ್ಯಂತರ ಆದೇಶ ಹೊರಡಿಸಲಾಗಿತ್ತು.

   ಡಿಕೆಶಿ ಪುತ್ರಿ ಐಶ್ವರ್ಯಾಗೆ ಡಿಕೆ ಸುರೇಶ್ ಕೊಟ್ಟ ಸಾಲವೇ 'ಇಡಿ' ಗೆ ಆಸ್ತ್ರ

   ಡಿ.ಕೆ.ಶಿವಕುಮಾರ್ ಅವರಿಗೆ ಸೇರಿರುವ ದೆಹಲಿಯ ಫ್ಲಾಟ್ ನಲ್ಲಿ ಸಿಕ್ಕ 8.69 ಕೋಟಿ ರು ಬಗ್ಗೆ ಪ್ರಶ್ನಿಸಲು ಇಡಿ ಮುಂದಾಗಿದ್ದು ಈ ಕುರಿತಂತೆ ಸಮನ್ಸ್ ನೀಡಲಾಗಿತ್ತು. ಸದ್ಯ ಇಡಿ ಬಂಧನದಲ್ಲಿರುವ ಡಿಕೆಶಿ ಅವರ ಜಾಮೀನು ಅರ್ಜಿ ವಿಚಾರಣೆಯೂ ಮುಂದೂಡಲಾಗಿದ್ದು, ಮೂರನೇ ಬಾರಿಗೆ ನ್ಯಾಯಾಂಗ ಬಂಧನ 10 ದಿನಕ್ಕೆ ವಿಸ್ತರಣೆಯಾಗಿದೆ.

   ತನಿಖೆ ವಿಚಾರಣೆಗೆ ಮಾತ್ರ ಇಡಿ ಎಲ್ಲರಲ್ಲೂ ಕರೆಸಿಕೊಳ್ಳಬಹುದು. ತನಿಖೆಗೆ ಸಹಕರಿಸುವಂತೆ ಸಚಿನ್ ನಾರಾಯಣ್, ಸುನಿಲ್ ಶರ್ಮಾ, ಆಂಜನೇಯ, ಹನುಮಂತಯ್ಯ ರಾಜೇಂದ್ರ ಅವರಿಗೆ ಸೂಚಿಸಲಾಗಿದೆ. ಡಿ. ಕೆ. ಶಿವಕುಮಾರ್ ಆಪ್ತರಾದ ಸಚಿನ್ ನಾರಾಯಣ್, ಆಂಜನೇಯ, ಸುನೀಲ್ ಶರ್ಮಾ ಮತ್ತು ರಾಜೇಂದ್ರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿತ್ತು. ಅದರಂತೆ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಇಡಿ ಅಧಿಕಾರಿಗಳಿಗೆ ಸೂಚನೆ ನೀಡಿದೆ.

   ಡಿಕೆಶಿ ಗೆ ಮತ್ತೆ ನಿರಾಸೆ: ಅ.25 ರವರೆಗೆ ಜೈಲು ವಾಸ ಮುಂದುವರಿಕೆ

   ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿ. ಕೆ. ಶಿವಕುಮಾರ್‌ ಬಂಧನವಾಗಿದೆ. ಡಿ. ಕೆ. ಶಿವಕುಮಾರ್ ಸಹೋದರ, ಪುತ್ರಿ ವಿಚಾರಣೆ ನಡೆದಿದೆ. ತಾಯಿ ಗೌರಮ್ಮ ಮತ್ತು ಪತ್ನಿ ಉಷಾಗೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಲಾಗಿದೆ. ಆದ್ದರಿಂದ, ಡಿ. ಕೆ. ಶಿವಕುಮಾರ್ ಆಪ್ತರಿಗೆ ಬಂಧನ ಭೀತಿ ಎದುರಾಗಿತ್ತು.

   English summary
   Former minister D.K.Shivakumar close aides got order in favour of them as Supreme court directed enforcement directorate not to arrest them in money laundering case.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X