ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡದಲ್ಲಿ ಯುಗಾದಿ ಶುಭಕೋರಿದ ಮೋದಿಗೆ ಟ್ವಿಟ್ಟಿಗರು ಹೀಗಾ ಪ್ರತ್ಯುತ್ತರ ನೀಡೋದು!

|
Google Oneindia Kannada News

ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ. ಹೋದ ವರ್ಷ ಯುಗಾದಿಗೂ ಕೊರೊನಾ ಕಾಟ, ಈ ಬಾರಿಯೂ ಅದೇ. ಹೋದ ವರ್ಷ ಲಾಕ್ ಡೌನ್ ನಡುವೆ ಹಬ್ಬ ಆಚರಿಸಿದರೆ, ಈ ವರ್ಷ ಲಾಕ್ ಡೌನ್ ಭೀತಿಯಲ್ಲಿ ಹಬ್ಬ ಆಚರಿಸುತ್ತಿದ್ದೇವೆ.

ಕೇಂದ್ರ ಸರಕಾರದ ಹಿಂದಿ ಹೇರಿಕೆಯ ಅಪವಾದದ ನಡುವೆ, ಪ್ರಧಾನಿ ನರೇಂದ್ರ ಮೋದಿ, ಸಮಸ್ತ ಕನ್ನಡಿಗರಿಗೆ ಯುಗಾದಿಯ ಶುಭಾಶಯವನ್ನು ಕನ್ನಡದಲ್ಲೇ ಕೋರಿ ಟ್ವೀಟ್ ಮಾಡಿದ್ದಾರೆ.

ಕನ್ನಡದಲ್ಲಿ ಯುಗಾದಿ ಶುಭಾಶಯ ಕೋರಿದ ಪ್ರಧಾನಿ ಮೋದಿಕನ್ನಡದಲ್ಲಿ ಯುಗಾದಿ ಶುಭಾಶಯ ಕೋರಿದ ಪ್ರಧಾನಿ ಮೋದಿ

ಇದಕ್ಕೆ ಹಲವರು ಧನ್ಯವಾದ ಹೇಳಿದರೆ, ಇನ್ನಷ್ಟು ಜನರು ಕೇಂದ್ರ ಸರಕಾರದ ನೀತಿಗಳನ್ನು, ಕೊರೊನಾ ನಿರ್ವಹಣೆ, ಚುನಾವಣೆಯ ಸಮಾವೇಶದಲ್ಲಿ ಜನ ಸೇರುವುದನ್ನು ಇಟ್ಟುಕೊಂಡು ಮೋದಿಯವರನ್ನು ಪ್ರಶ್ನಿಸಿದ್ದಾರೆ.

"ನಿಮ್ಮೆಲ್ಲರಿಗೂ ಯುಗಾದಿಯ ಶುಭಕಾಮನೆಗಳು. ಮುಂಬರುವ ವರ್ಷ ಅದ್ಭುತವಾಗಲಿ. ನೀವೆಲ್ಲರೂ ಆರೋಗ್ಯ ಹಾಗು ಸಂತಸದಿಂದಿರಿ. ಎಲ್ಲೆಡೆ ಸಮೃದ್ಧಿ ಹಾಗು ಸಂತೋಷ ಪಸರಿಸಲಿ"ಇದು ಪ್ರಧಾನಿ ಮಾಡಿದ ಟ್ವೀಟ್. ಈ ಟ್ವೀಟ್ 1,741 ಬಾರಿ ರಿಟ್ವೀಟ್ ಪಡೆದುಕೊಂಡಿದೆ. ಅದಕ್ಕೆ ಬಂದ ಕೆಲವೊಂದು ಆಯ್ದ ಪ್ರತಿಕ್ರಿಯೆ ಹೀಗಿದೆ:

ಯುಗಾದಿ ವಿಶೇಷ: ಪ್ರಕೃತಿಯೇ ತೋರಣ ಕಟ್ಟಿ ಸ್ವಾಗತಿಸುವ ಹಬ್ಬ ಯುಗಾದಿ ವಿಶೇಷ: ಪ್ರಕೃತಿಯೇ ತೋರಣ ಕಟ್ಟಿ ಸ್ವಾಗತಿಸುವ ಹಬ್ಬ

 ಬಹಿರಂಗ ಚುನಾವಣಾ ಪ್ರಚಾರ ಯಾಕೆ ನಿಲ್ಲಿಸಬಾರದು?

ಬಹಿರಂಗ ಚುನಾವಣಾ ಪ್ರಚಾರ ಯಾಕೆ ನಿಲ್ಲಿಸಬಾರದು?

"ಯುಗಾದಿಯ ಶುಭಾಶಯಗಳು ಮಾನ್ಯರೇ, ಕೊರೊನ ಪಿಡುಗಿನ ಕಾರಣ ಬಹಿರಂಗ ಚುನಾವಣಾ ಪ್ರಚಾರ ಯಾಕೆ ನಿಲ್ಲಿಸಬಾರದು? ವರ್ಷಕ್ಕೆ ಮೂರು ನಾಲ್ಕು ಬಾರಿ ಕನ್ನಡ ಬಳಸಿ ಬಾಕಿ ಹಿಂದಿ ಹೇರಿಕೆ ಬೇಡಿ, ಜಿಎಸ್ಟಿ ಬಾಕಿ ಕೊಡಿ,ಅನುದಾನ ಹಂಚಿಕೆ ಅನ್ಯಾಯ ಸರಿಪಡಿಸಿ, ಕೇಂದ್ರೀಕರಣ ಬಿಟ್ಟು ವಿಕೇಂದ್ರೀಕರಣ ಮಾಡಿ, ಎಲ್ಲರಿಗೂ ಉಚಿತ ಕೊರೊನ ತಡೆಮದ್ದು ಕೊಡಿ ಇಂಧನ ಬೆಲೆ ಇಳಿಸಿ" ಹೀಗೆ ಬಂದಿರುವ ಪ್ರತಿಕ್ರಿಯೆ

ಕನ್ನಡಿಗರ ಆಸ್ಮಿತೆಗೆ ಭಂಗ ತರಬೇಡಿ

"ಕನ್ನಡದಲ್ಲಿ ಟ್ವೀಟ್ ಮಾಡಲಿಲ್ಲ ಅಂದರೂ ಪರವಾಗಿಲ್ಲ, ಕನ್ನಡಿಗರ ಆಸ್ಮಿತೆಗೆ ಭಂಗ ತರಬೇಡಿ. ನಿಮ್ಮ ಹಿಂದಿ ಇಲ್ಲಿ ಹೇರಬೇಡಿ, ನಿಮ್ಮ ಒಂದು ದೇಶ ಒಂದು ರೇಷನ್, ಒಂದು ಪರೀಕ್ಷೆಗಳು ಮತ್ತುಒಂದು ರೆಕ್ರೂಟ್ಮೆಂಟ್ ಬೇಡ. ನಮ್ಮನ್ನ ನಾವು ಆಳ್ವಿಕೆ ಮಾಡಿಕೊಳ್ಳುತ್ತೇವೆ, ನೀವು ಈ ದೇಶದ ಮಿಲಿಟರಿ & ವಿದೇಶಕ್ಕೆ ಸಂಬಂಧ ಪಟ್ಟ ವಿಷಯಗಳ ಬಗ್ಗೆ ಮಾತ್ರ ಗಮನ ಹರಿಸಿ" ಎಂದು ಬಂದಿರುವ ಪ್ರತಿಕ್ರಿಯೆ.

 ಓಲೈಕೆಯ ಕನ್ನಡದ ಟ್ವೀಟ್ ಬೇಕಿಲ್ಲ

ಓಲೈಕೆಯ ಕನ್ನಡದ ಟ್ವೀಟ್ ಬೇಕಿಲ್ಲ

ಮೊದಲು ಹಿಂದಿ ಹೇರಿಕೆ ನಿಲ್ಲಿಸಿ, ಕರ್ನಾಟಕದ ಜನರು ಎತ್ತಿಚ್ಚಿಕೊಂಡಿದ್ದಾರೆ Mr.ಮೋದಿ ಅವರೇ, ಹಾಗೂ ನಾವು ಆಯ್ಕೆ ಮಾಡಿ ಕಳಿಸಿದ 25 ಜನ ಎಂಪಿಗಳ ಕೊರೊನಾ ಪರಿಸ್ಥಿಯಲ್ಲಿ ಶೂನ್ಯ ಸಾಧನೆ. ಓಲೈಕೆಯ ಕನ್ನಡದ ಟ್ವೀಟ್ ಬೇಕಿಲ್ಲ.

Recommended Video

ದೇಶದಲ್ಲಿ ಕೊರೊನಾ ಪಾಸಿಟಿವ್‌ ಪ್ರಕರಣದ ಜೊತೆ ಸಾವಿನ ಸಂಖ್ಯೆಯಲ್ಲೂ ಏರಿಕೆ..! | Oneindia Kannada
 ಕನ್ನಡಿಗರಿಗೆ ಬರಬೇಕಾದ gst ಬಾಕಿ ಹಣ ಕೊಡಿ

ಕನ್ನಡಿಗರಿಗೆ ಬರಬೇಕಾದ gst ಬಾಕಿ ಹಣ ಕೊಡಿ

ಶ್ರೀ ಪ್ಲವನಾಮ ಸಂವತ್ಸರದಲ್ಲಿ ಇಂದಿನ ಯುಗಾದಿ ಹಬ್ಬ ಬಂದಿದೆ, ನಮ್ಮೆಲ್ಲರಿಗೂ ಇದು ಹೊಸ ವರ್ಷದ ಹಬ್ಬ , ವರ್ಷದ ಮೊದಲ ಹಬ್ಬ. ಈ ಹೊಸ ವರ್ಷದ ಯುಗಾದಿ ನಿಮ್ಮೆಲ್ಲರಿಗೂ ಆರೋಗ್ಯವನ್ನು, ನಿರ್ಭಯತೆಯನ್ನು, ಸಂತಸವನ್ನು, ಸಂಸ್ಕೃತಿ ಮತ್ತು ಧರ್ಮದ ಶ್ರದ್ಧೆಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಹಾಗೆ ಕನ್ನಡಿಗರಿಗೆ ಬರಬೇಕಾದ gst ಬಾಕಿ ಹಣ ಕೊಡಿ.

English summary
PM Narendra Modi Ugadi Wishes Tweeet In Kannada, Netizens Strong Reply.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X