Amrit Bharat Railway Stations: ಆಧುನಿಕ ಸ್ಪರ್ಶದೊಂದಿಗೆ ರಾಜ್ಯದ 5 ರೈಲು ನಿಲ್ದಾಣಗಳು ಲೋಕಾರ್ಪಣೆ

ಬೆಂಗಳೂರು ಮೇ 22: ಅಮೃತ್ ಭಾರತ ನಿಲ್ದಾಣಗಳಡಿ ಕರ್ನಾಟಕದಾದ್ಯಂತ ಹತ್ತಾರು ರೈಲು ನಿಲ್ದಾಣಗಳನ್ನು ಪುನರ್ ಅಭಿವೃದ್ಧಿ ಮಾಡಲಾಗಿದೆ. ದೇಶಾದ್ಯಂತ ಇಂದು (ಮೇ 22) ಪ್ರಧಾನಿ ನರೇಂದ್ರ ಮೋದಿಯವರು 103 ಪುನರಾಭಿವೃದ್ಧಿಗೊಂಡ ರೈಲು ನಿಲ್ದಾಣಗಳನ್ನು ಲೋಕಾರ್ಪಣೆ ಮಾಡಿದ್ದಾರೆ. ಇದರಲ್ಲಿ ಕರ್ನಾಟಕದ ಐದು ರೈಲು ನಿಲ್ದಾಣಗಳು ಹೊಸ ರೂಪ ಪಡೆದುಕೊಂಡಿದ್ದು, ಸಾರ್ವಜನಿಕ ಸೇವೆಗೆ ಮುಕ್ತವಾಗಿವೆ.

ರೈಲ್ವೆ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಹಾಗೂ ಅತ್ಯಾಧುನಿಕ ವ್ಯವಸ್ಥೆಯೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಜನರಿಗೆ ಆರಾಮದಾಯಕ ಸೇವೆ ನೀಡಲು ಅನುಕೂಲವಾಗುವಂತೆ ಪುನರ್ ಅಭಿವೃದ್ಧಿಪಡಿಸಲಾಗಿದೆ. ಈ ಪೈಕಿ 19 ಅಮೃತ ಭಾರತ ನಿಲ್ದಾಣಗಳು ಬಿಜೆಪಿ ಆಡಳಿತದ ಉತ್ತರ ಪ್ರದೇಶದಲ್ಲಿವೆ. ಕರ್ನಾಟಕದ ಯಾವೆಲ್ಲ ರೈಲು ನಿಲ್ದಾಣಗಳು ಇಂದು ಉದ್ಘಾಟನೆಗೊಂಡಿವೆ ಎಂಬ ಪಟ್ಟಿ ಇಲ್ಲಿದೆ.

PM Modi Inaugurates 5 Redeveloped Amrit Bharat Railway Stations in Karnataka

5 ಅಮೃತ್ ಭಾರತ್‌ ರೈಲು ನಿಲ್ದಾಣಗಳು

* ಧಾರವಾಡ ರೈಲು ನಿಲ್ದಾಣ

* ಗದಗ ಜಂಕ್ಷನ್‌ ರೈಲು ನಿಲ್ದಾಣ

* ಗೋಕಾಕ್ ರಸ್ತೆ ರೈಲು ನಿಲ್ದಾಣ (ಬೆಳಗಾವಿ)

* ಮುನಿರಾಬಾದ್ ರೈಲು ನಿಲ್ದಾಣ (ಹುಲಿಗಿ ಕೊಪ್ಪಳ)

* ಬಾಗಲಕೋಟೆ ರೈಲು ನಿಲ್ದಾಣ

ಈ ಮೇಲಿನ ಐದು ನಿಲ್ದಾನಗಳು ಸೇರಿದಂತೆ ರಾಜ್ಯದಲ್ಲಿ 50ಕ್ಕೂ ಹೆಚ್ಚು ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಅವೆಲ್ಲವುಗಳ ಕಾಮಗಾರಿ ಪೂರ್ಣಗೊಂಡಂತೆ ಹಂತ ಹಂತವಾಗಿ ಸಾರ್ವಜನಿಕ ಸೇವೆಗೆ ಲಭ್ಯವಾಗಿವೆ.

ಭಾರತದಲ್ಲಿ ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 86 ಜಿಲ್ಲೆಗಳಲ್ಲಿನ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು,103 ರೈಲ್ವೆ ನಿಲ್ದಾಣಗಳು ಬರೋಬ್ಬರಿ ಸುಮಾರು 1,100 ಕೋಟಿ ರೂಪಾಯಿಯಲ್ಲಿ ನವೀಕರಣಗೊಂಡಿವೆ. ಸಕಲ ಸೌಲಭ್ಯಗಳನ್ನು ಒಳಗೊಂಡಿವೆ. ವಿಶಾಲ ಒಳಾಂಗಣ, ಶೌಚಾಲಯ ಎಲ್ಲವನ್ನು ಒಳಗೊಂಡಿವೆ, ಪ್ರಯಾಣಿಕ ಸ್ನೇಹಿಯಾಗಿ ನಿರ್ಮಿಸಲಾಗಿದೆ. ಯೋಜನೆಯಡಿ ಸ್ಥಳೀಯ ಪ್ರಾದೇಶಿಕ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುವಂತೆ ಪುನರ್ ನವೀಕರಣ ಮಾಡಲಾಗಿದೆ. ಒಟ್ಟು 1,300ಕ್ಕೂ ಹೆಚ್ಚು ನಿಲ್ದಾಣಗಳನ್ನು ಆಧುನಿಕ ಸೌಲಭ್ಯಗಳೊಂದಿಗೆ ಪುನರಾಭಿವೃದ್ಧಿ ಮಾಡಲಾಗುತ್ತಿದೆ ಎಂದರು.

ಈ ಎಲ್ಲ ಅಮೃತ ನಿಲ್ದಾಣಗಳು ಮೂಲಕ ಸೌಕರ್ಯ, ಸಂಪರ್ಕವನ್ನು ಹೆಚ್ಚಿಸುತ್ತವೆ. ಸ್ಥಳೀಯ ಅದ್ಭುತ ಸಂಸ್ಕೃತಿಯನ್ನು ಸಹ ಪಸರಿಸುತ್ತವೆ. ವಿವಿಧ ಯೋಜನೆಗಳ ಪ್ರಾರಂಭವು ರೈಲು ಮೂಲಸೌಕರ್ಯ, ಸಂಪರ್ಕ ಹಾಗೂ ನೀರು ಮತ್ತು ಇಂಧನ ಕ್ಷೇತ್ರಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ಬಿಜೆಪಿ ಕೇಂದ್ರ ಸರ್ಕಾರ ವಿಕಸಿತ ಭಾರತದ ಧ್ಯೇಯವಾಕ್ಯವನ್ನು ಬಲಪಡಿಸಲಾಗಿದೆ. ಒಂದು ದಶಕದಿಂದ (11) ರೈಲ್ವೆ ಜಾಲ ಸೇರಿದಂತೆ ಎಲ್ಲಾ ವಲಯಗಳಲ್ಲಿ ಮೂಲಸೌಕರ್ಯಗಳ ಆಧುನೀಕರಣ ಮಾಡಲಾಗಿದೆ. ಬಳಕೆದಾರ ಸ್ನೇಹಿಯಾಗಿರುವ ಮೂಲಕ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.

ಇನ್ನೂ ಭಾರತದಲ್ಲಿ 70 ಮಾರ್ಗಗಳಲ್ಲಿ ವಂದೇ ಭಾರತ್ ರೈಲುಗಳು ಸೇವೆ ನೀಡುತ್ತಿವೆ. ಹಿಂದಿನ 11 ವರ್ಷಗಳಲ್ಲಿ, ನೂರಾರು ಓವರ್ ಬ್ರಿಡ್ಜ್‌ಗಳು ಮತ್ತು ಅಂಡರ್‌ಪಾಸ್‌ಗಳನ್ನು ನಿರ್ಮಾಣ ಮಾಡಲಾಗಿದೆ. 34,000 ಕಿಲೋ ಮೀಟರ್‌ಗಳಿಗೂ ಹೆಚ್ಚು ಹೊಸ ರೈಲ್ವೆ ಹಳಿಗಳನ್ನು ಹಾಕಲಾಗಿದೆ. ವಿದ್ಯುದೀಕರಣ ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+