Karnataka Elections: ಮುಂದಿನ 10 ದಿನದ ಪ್ರಚಾರ ಯಾವ ವಿಚಾರದ ಮೇಲೆ? ಸ್ಪಷ್ಟ ಸುಳಿವು ಕೊಟ್ಟ ಪ್ರಧಾನಿ ಮೋದಿ
ಬೆಂಗಳೂರು, ಏಪ್ರಿಲ್ 29: ಮೇ 10 ರಂದು ನಡೆಯಲಿರುವ ಕರ್ನಾಟಕ ಚುನಾವಣೆ ಪ್ರಚಾರದಲ್ಲಿ ಪ್ರಧಾನಿ ಮೋದಿ ತೊಡಗಿಕೊಂಡಿದ್ದಾರೆ. ಬೀದರ್‌ನ ಹುಮನಾಬಾದ್‌ನಲ್ಲಿ ಇಂದು ಮಾತನಾಡಿರುವ ಮೋದಿ ಲಿಂಗಾಯತ ಹಾಗೂ ದಲಿತ ವಿಚಾರಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಕಾಂಗ್ರೆಸ್‌ನವರು ವೈಯಕ್ತಿಕವಾಗಿ ನನ್ನನ್ನು ಬೈಯುತ್ತಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ಸಿ ಲಿಂಗಾಯತರನ್ನು ಕಳ್ಳರು ಎನ್ನುತ್ತದೆ. ಅದೂ ಕಾಂಗ್ರೆಸ್‌ನಲ್ಲಿ ದೊಡ್ಡ ನಾಯಕರು ಅನಿಸಿಕೊಂಡವರೇ ಹೀಗೆ ಮಾತನಾಡುತ್ತಾರೆ. ಅಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ ಪಕ್ಷವದು. ವೀರ ಸಾವರ್ಕರ್ ಅವರನ್ನೂ ಜರೆದ ಪಕ್ಷವದು ಎಂದು ವಾಗ್ದಾಳಿ ನಡೆಸಿದ್ದಾರೆ.

'ನನ್ನನ್ನು ನಿಂದಿಸಲು ವ್ಯರ್ಥಮಾಡುವ ಸಮಯವನ್ನು ಕಾಂಗ್ರೆಸ್ ನಾಯಕರು ಅವರ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲು ವಿನಿಯೋಗಿಸಿದ್ದರೆ ಅವರ ಪರಿಸ್ಥಿತಿ ಇಂದು ತುಸು ಉತ್ತಮವಿರುತ್ತಿತ್ತು. ಯಾರು ದೇಶಕ್ಕಾಗಿ ಕೆಲಸ ಮಾಡುತ್ತಾರೋ ಅವರನ್ನು ಅಪಮಾನಿಸುವುದು ಕಾಂಗ್ರೆಸ್ ಪರಂಪರೆ' ಎಂದು ಪ್ರಧಾನಿ ಮೋದಿ ಟೀಕಿಸಿದ್ದಾರೆ.
'ಕಾಂಗ್ರೆಸ್ ಜಾತಿ ಧರ್ಮ ಮತ್ತು ಸಮುದಾಯದ ಹೆಸರಿನಲ್ಲಿ ಸಮಾಜವನ್ನು ಒಡೆದಿದೆ ಮತ್ತು ಕಾಂಗ್ರೆಸ್ ಕೇವಲ ಆಡಳಿತದ ಹೆಸರಿನಲ್ಲಿ ತುಷ್ಟೀಕರಣ ಮಾಡಿತ್ತ ಬಂದಿದೆ' ಎಂದು ಮೋದಿ ಹೇಳಿದ್ದಾರೆ.
'ಈ ಹಿಂದೆ ಜನತಾದಳ ನಾಯಕರು ತಾವು ಕಾಂಗ್ರೆಸ್ ಹಿಡಿತದಲ್ಲಿ ಇರುವುದಾಗಿ ಬಹಿರಂಗವಾಗಿ ಹೇಳಿದ್ದು ನಿಮಗೆ ನೆನಪಿರಬಹುದು. ಈ ಪಕ್ಷಗಳು ಜನರಿಗೆ ಉತ್ತರದಾಯಿತ್ವ ಹೊಂದಿಲ್ಲ, ಬದಲಾಗಿ ಕುರ್ಚಿಗಾಗಿ ಎಷ್ಟು ತಳಮಟ್ಟಕ್ಕೂ ಇಳಿಯಲು ಸಿದ್ಧರಿದ್ದಾರೆ' ಎಂದು ಮೋದಿ ತಿಳಿಸಿದ್ದಾರೆ.
'ಕರ್ನಾಟಕದಲ್ಲಿ ಕಾಂಗ್ರೆಸ್ ಉಚಿತ ಗ್ಯಾರಂಟಿ ಘೋಷಣೆ ಮಾಡುತ್ತಿದೆ. ರಾಜಸ್ತಾನ, ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ನೀಡಿದ್ದ ಯಾವ ಉಚಿತ ಭರವಸೆಗಳನ್ನು ಈಡೇರಿಸಿಲ್ಲ' ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ತಾವು ಮಾಡಿದ ಮೊದಲ ಚುನಾವಣಾ ಭಾಷಣದಲ್ಲಿ ಮೋದಿ ಅವರು ಲಿಂಗಾಯತ ಹಾಗೂ ದಲಿತ ಅಸ್ತ್ರಗಳನ್ನು ಬಳಸಿದ್ದಾರೆ. ಈ ಚುನಾವಣೆಯ ಪ್ರಚಾರದ ಮುಂದಿನ ಪ್ರಮುಖ ವಿಚಾರಗಳೂ ಇವೇ ಇರಲಿವೆ ಎಂಬುದನ್ನು ಮೋದಿ ಬಹಿರಂಗಪಡಿಸಿದ್ದಾರೆ.
ಸಿಎಂ ಬೊಮ್ಮಾಯಿ ಕುರಿತು ಮಾತನಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಈಗಿರುವ ಲಿಂಗಾಯತ ಸಿಎಂ ಬಸವರಾಜ ಬೊಮ್ಮಾಯಿ ಭ್ರಷ್ಟರು, ಅವರು ಲಿಂಗಾಯತರೇ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ಹೆಸರು ಹೇಳದೇ ಈ ವಿಚಾರವನ್ನು ಪ್ರಧಾನಿ ಪ್ರಸ್ತಾಪಿಸಿದ್ದಾರೆ.
ಇನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿ ವಿಷದ ಹಾವಿದ್ದಂಗೆ ಎಂದು ಹೇಳಿದ್ದರು. ಇದನ್ನೂ ಪ್ರಚಾರದ ತಂತ್ರವಾಗಿ ಉಪಯೋಗಿಸುವ ಬಿಜೆಪಿ ಯೋಜನೆಯನ್ನು ಮೋದಿ ಮುಂದುವರಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ದಲಿತರಾಗಿರುವ ಕಾರಣ ಡಾ ಬಿಆರ್ ಅಂಬೇಡ್ಕರ್ ವಿಚಾರವಾಗಿಯೂ ಪ್ರಧಾನಿ ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications