Get Updates
Get notified of breaking news, exclusive insights, and must-see stories!

"ಪ್ರಧಾನಿ ಮೋದಿ ಸರ್ಕಾರದಲ್ಲಿ ಉಳುವವನು ಅಲ್ಲ, ಉಳ್ಳವನೇ ಭೂಮಿ ಒಡೆಯ"

ಕಾರವಾರ, ಡಿಸೆಂಬರ್ 17: ಕೇಂದ್ರದಲ್ಲಿ ಯುಪಿಯ ಸರ್ಕಾರ ಆಡಳಿತ ನಡೆೆಸುತ್ತಿದ್ದ ಸಂದರ್ಭದಲ್ಲಿ ಉಳುವವನೆ ಭೂಮಿಯ ಒಡೆಯ ಎಂಬ ನೀತಿಗಳಿದ್ದವು. ಆದರೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಬಂದ ಮೇಲೆ ಉಳ್ಳುವವರು ಮಾತ್ರ ಭೂಮಿಯ ಒಡೆಯರು ಎಂಬ ನೀತಿಗಳು ಬಂದಿವೆ ಎಂದು ಪರಿಷತ್ ವಿಪಕ್ಷ ನಾಯಕರಾದ ಬಿಕೆ‌ಹರಿಪ್ರಸಾದ್ ಲೇವಡಿ ಮಾಡಿದ್ದಾರೆ.

ಕಾರವಾರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭೂಮಿ ಇಲ್ಲದವರಿಗೆ ಭೂಮಿ ನೀಡುವುದರ ಬದಲಾಗಿ ಬಡವರ ಬಳಿ ಇರುವ ಸಾಗುವಳಿ ಭೂಮಿಯನ್ನು ಬಿಜೆಪಿ ಸರ್ಕಾರವು ಕಿತ್ತುಕೊಳ್ಳುತ್ತಿದೆ ಎಂದು ಆರೋಪಿಸಿದರು. ಈ ಪತ್ರಿಕಾಗೋಷ್ಠಿಯಲ್ಲಿ ಮಂಜುನಾಥ್ ನಾಯ್ಕ್ ವಕೀಲರಾದ ರವೀಂದ್ರ ನಾಯ್ಕ, ಎಸ್.ಕೆ.ಭಾಗವತ, ಪುಷ್ಪಾ ನಾಯ್ಕ ಇದ್ದರು.

ದೇಶದ ಅರಣ್ಯವಾಸಿಗಳಿಗೆ ಭೂ ಒಡೆತನದ ಹಕ್ಕನ್ನು ನೀಡದೆ, ಯುಪಿಎ ಸರ್ಕಾರದ ಅವಧಿಯಲ್ಲಿ ತಂದ ಕ್ರಾಂತಿಕಾರಿಕ ಅರಣ್ಯ ಹಕ್ಕು ಕಾಯ್ದೆಗಳನ್ನು ಮೋದಿ ಸರ್ಕಾರವು ದುರ್ಬಲಗೊಳಿಸಿದೆ ಎಂದು ಪರಿಷತ್ ವಿಪಕ್ಷ ನಾಯಕರಾದ ಬಿಕೆ‌ಹರಿಪ್ರಸಾದ್ ಕಿಡಿ ಕಾರಿದ್ದಾರೆ.

ಅರಣ್ಯ ಹಕ್ಕುಗಳ ಕಾಯ್ದೆ ಬಗ್ಗೆ ಉಲ್ಲೇಖಿಸಿದ ಹರಿಪ್ರಸಾದ್

ಅರಣ್ಯ ಹಕ್ಕುಗಳ ಕಾಯ್ದೆ ಬಗ್ಗೆ ಉಲ್ಲೇಖಿಸಿದ ಹರಿಪ್ರಸಾದ್

ಭಾರತದಲ್ಲಿ 2006ರ ಅರಣ್ಯ ಹಕ್ಕುಗಳ ಕಾಯ್ದೆಯ ಪ್ರಕಾರ ಬಡ ಜನರಿಗೆ, ಅರಣ್ಯವಾಸಿಗಳಿಗೆ, ಬುಡಕಟ್ಟು ಸಮುದಾಯಗಳಿಗೆ ಭೂಮಿಯ ಹಕ್ಕನ್ನು ಹೊಂದುವ ಹಕ್ಕಿದೆ. ಯುಪಿಎ ಕಾಂಗ್ರೆಸ್ ಅವಧಿಯಲ್ಲಿ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ (ಅರಣ್ಯ ಹಕ್ಕು ಕಾಯ್ದೆ(ಎಫ್‌ಆರ್‌ಎ)ಯನ್ನು ಜಾರಿಗೆ ತರಲಾಗಿತ್ತು. ಆದಿವಾಸಿಗಳು ಮತ್ತು 75 ವರ್ಷಗಳಿಗಿಂತ ಹೆಚ್ಚು ಅಥವಾ ಮೂರು ತಲೆಮಾರಿಗಿಂತ ಹೆಚ್ಚು ಅರಣ್ಯದಲ್ಲಿ ವಾಸಿಸುತ್ತಿರುವ ಬುಡಕಟ್ಟು ಮತ್ತು ಬುಡಕಟ್ಟುಯೇತರ ಅರಣ್ಯವಾಸಿಗಳ ಅರಣ್ಯ ಹಕ್ಕುಗಳನ್ನು ಈ ಕಾಯ್ದೆ ಎತ್ತಿಹಿಡಿದಿದೆ. ಆದರೆ ಮೋದಿ ಸರ್ಕಾರ ಕಾಯ್ದೆಗಳನ್ನು ತಿದ್ದುಪಡಿ ಮಾಡಿ, ದುರ್ಬಲಗೊಳಿಸುವ ಮೂಲಕ ಬಾಬಾ ರಾಮದೇವ್, ಅದಾನಿ, ಅಂಬಾನಿಯಂತವರಿಗೆ ಸಾವಿರಾರು ಎಕರೆ ಅರಣ್ಯ ಭೂಮಿಯನ್ನು ನೀಡಿದೆ ಎಂದು ದೂಷಿಸಿದರು.

ಅರಣ್ಯಭೂಮಿ ಮೇಲೆ ಹೆಚ್ಚು ಅವಲಂಬಿತ

ಅರಣ್ಯಭೂಮಿ ಮೇಲೆ ಹೆಚ್ಚು ಅವಲಂಬಿತ

ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯವಾಸಿಗಳು, ಬುಡಕಟ್ಟು ಸಮುದಾಯಗಳು ಅರಣ್ಯಭೂಮಿಯ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಸುಮಾರು ವರ್ಷಗಳಿಂದ ಹೋರಾಟ ನಡೆಯುತ್ತಿದ್ದರೂ, ಬಿಜೆಪಿ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಈ ಬಾರಿ ಅಧಿವೇಶನದಲ್ಲಿ ಅರಣ್ಯ ಭೂ ಒತ್ತುವಳಿದಾರರ ಸಮಸ್ಯೆಯನ್ನು ಚರ್ಚೆ ಮಾಡಲಾಗುತ್ತದೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಬಂದರೆ ವಿಶೇಷವಾಗಿ ಈ ಭಾಗದ ಜನರಿಗೆ ನ್ಯಾಯ ದೊರಕಿಸುವ ಹಕ್ಕುಗಳನ್ನು ನೀಡುವ ಪ್ರಯತ್ನ ಮಾಡುತ್ತೇವೆ ಎಂದು ಬಿಕೆ ಹರಿಪ್ರಸಾದ್ ಭರವಸೆ ನೀಡಿದರು.

ಕಾಂಗ್ರೆಸ್ ಎಂದಿಗೂ ಉಗ್ರ ಚಟುವಟಿಕೆಗೆ ಬೆಂಬಲಿಸಲ್ಲ

ಕಾಂಗ್ರೆಸ್ ಎಂದಿಗೂ ಉಗ್ರ ಚಟುವಟಿಕೆಗೆ ಬೆಂಬಲಿಸಲ್ಲ

'ಭಯೋತ್ಪಾದನೆ ವಿರುದ್ಧ ಕಾಂಗ್ರೆಸ್ ನಿರಂತರ ಹೋರಾಟ ನಡೆಸಿರುವ ಪಕ್ಷವಾಗಿದ್ದು, ಉಗ್ರ ಚಟುವಟಿಕೆ ಎಂದಿಗೂ ಬೆಂಬಲಿಸಿಲ್ಲ'. ದೇಶದ್ರೋಹಿಗಳ ವಿರುದ್ಧ ಹೋರಾಡಿದ್ದಕ್ಕೆ ಮಹಾತ್ಮ ಗಾಂಧೀಜಿ ಅವರನ್ನು ಕಳೆದುಕೊಂಡೆವು. ಭಯೋತ್ಪಾದನೆ ವಿರುದ್ದ ಹೋರಾಡಿದ್ದಕ್ಕಾಗಿಯೇ ಇಂದಿರಾ ಗಾಂಧಿ ಹಾಗೂ ಐಕ್ಯತೆಗಾಗಿ ರಾಜೀವ್‌ ಗಾಂಧಿ ಜೀವ ತೆತ್ತಿದ್ದಾರೆ. ಆದರೂ ಕಾಂಗ್ರೆಸ್ ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸುತ್ತಿದೆ. ಬ್ರಿಟಿಷರ ಬೂಟು ನೆಕ್ಕಿದ ಜನರಿಂದ ನಾವು ಪಾಠ ಕಲಿಯಬೇಕಿಲ್ಲ. ಕಂದಹಾರ ವಿಮಾನ ಅಪಹರಣದಲ್ಲಿ ನಡೆದ ಭಯೋತ್ಪಾದನಾ ಘಟನೆಯ ಆರೋಪಿಗೆ ಎಲ್ ಕೆ ಅಡ್ವಾಣಿ ಕ್ಲೀನ್ ಚೀಟ್ ನೀಡಿದರು. ಈ ಭಯೋತ್ಪಾದಕರಿಗೆ ಪರವಾಗಿ ಯಾರಿದ್ದರು ಎಂದು ದೇಶದ ಜನ ಮರೆತಿಲ್ಲ ಎಂದು ತಿರುಗೇಟು ನೀಡಿದರು.

ಈಶ್ವರಪ್ಪ ವಿರುದ್ಧ ಬಿಕೆ ಹರಿಪ್ರಸಾದ್ ವಾಗ್ದಾಳಿ

ಈಶ್ವರಪ್ಪ ವಿರುದ್ಧ ಬಿಕೆ ಹರಿಪ್ರಸಾದ್ ವಾಗ್ದಾಳಿ

ಪೊಲೀಸರ ತನಿಖೆಗೂ ಮೊದಲೇ ನಾಗಪುರ ಯುನಿವರ್ಸಿಟಿಯಲ್ಲಿ ಸರ್ಟಿಫಿಕೇಟ್ ಬರುತ್ತದೆ. ಮಂಗಳೂರು ಪೊಲೀಸರು ಘಟನೆಗೆ ಬಗ್ಗೆ ತನಿಖೆಯೇ ಪ್ರಾರಂಭ ಮಾಡಿರಲಿಲ್ಲ, ಆಗಲೇ ಬಿಜೆಪಿ ನಾಯಕರು ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಬ್ಯಾನ್ ಮಾಡಲು ಈಶ್ವರಪ್ಪನವರ ವಂಶಪೂರ್ತಿ ಹತ್ತು ಸಲ ಹುಟ್ಟಿದರೂ ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ ಜನರು ಕಟ್ಟಿರುವಂತದ್ದು, ನಾಗಪುರದವರಲ್ಲ. ನಾಯಕ್ ಆಪರೇಷನ್ ಕಾಂಗ್ರೆಸ್ ಪಕ್ಷ ಮಾಡುತ್ತಿಲ್ಲ. ಕಾಂಗ್ರೆಸ್ ಪಕ್ಷದ ಸಿದ್ಧಾಂತದ ಒಪ್ಪಿ ಯಾರಾದರೂ ಬರಬಹುದು. ಕಳ್ಳತನದಿಂದ ಬಿಜೆಪಿಯವರು ಶಾಸಕರನ್ನು ಕದ್ದು ಹೋಗಿದ್ದು, ಈಗ ಅವರಿಗೆ ಭ್ರಮನಿರಸನವಾಗಿ ವಾಪಾಸ್ ಬರುತ್ತಿದ್ದಾರೆ.

ಕರ್ನಾಟಕಕಕ್ಕೆ ವಿಶ್ವಗುರು, ಸುಳ್ಳಿನ ಸರದಾರ ನರೇಂದ್ರ ಮೋದಿ ಬಂದಷ್ಟು ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವಾಗುತ್ತದೆ. ಗಡಿಪಾರದ ಗೃಹ ಸಚಿವ ಅಮಿತ್ ಶಾ ಬಂದಷ್ಟು ಕಾಂಗ್ರೆಸ್ ಪಕ್ಷಕ್ಕೆ ಅನುಕೂಲ. ಬಿಜೆಪಿಯವರು ಗುಜರಾತ್ ಮಾದರಿಯೇ ಚುನಾವಣೆ ಎದುರಿಸಲಿ, ನಾವು ಸಿದ್ದರಾಗಿದ್ದೇವೆ ಎಂದು ಸವಾಲು ಹಾಕಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+