ಸಂವಾದದ ವೇಳೆ ಮೋದಿ ಗದ್ಗದಿತ: "ಕಣ್ಣೀರು" ಹೇಡಿಯ ಪ್ರಮುಖ ಅಸ್ತ್ರ!!

ಬೆಂಗಳೂರು, ಮೇ 22: ಆರೋಗ್ಯ ಕಾರ್ಯಕರ್ತರೊಂದಿಗೆ ಸಂವಾದದ ವೇಳೆ ಪ್ರಧಾನಿ ಮೋದಿ ಗದ್ಗದಿತರಾದ ಬಗ್ಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ವ್ಯಂಗ್ಯವಾಡಿದೆ.

Recommended Video

      Narendra Modi Crocodile tears??ಇದು ರಣಹೇಡಿಯ ಲಕ್ಷಣ ಎಂದ KPCC | Oneindia Kannada

      ಈ ಬಗ್ಗೆ ಟ್ವೀಟ್ ಮಾಡಿರುವ ಕೆಪಿಸಿಸಿ, "ಕಣ್ಣೀರು ಹೇಡಿಯ ಪ್ರಮುಖ ಅಸ್ತ್ರ. ಎದುರಿಗಿದ್ದ ಕ್ಯಾಮೆರಾ ಹಾಗೂ ಟೆಲಿಪ್ರಾಂಪ್ಟರ್‌ ನೋಡಿಕೊಂಡು ಕಣ್ಣೀರು ಸುರಿಸುವುದು ಅದ್ಬುತ ನಟನಾ ಕೌಶಲ್ಯ! @narendramodi ಅವರೇ, ಜನತೆಗೆ ಬೇಕಿರುವುದು ನಿಮ್ಮ ಕಣ್ಣೀರಲ್ಲ"

      "ಆಕ್ಸಿಜನ್, ಲಸಿಕೆ, ವೈದ್ಯಕೀಯ ವ್ಯವಸ್ಥೆ, ಚಿಕಿತ್ಸೆ, ಆರ್ಥಿಕ ನೆರವು. ಇದ್ಯಾವುದನ್ನೂ ನೀಡದೆ ಎರಡು ಹನಿ ಕಣ್ಣೀರ ನಾಟಕದಿಂದ ಜನಾಕ್ರೋಶ ತಣಿಸುವ ತಂತ್ರ ಬಿಡಿ" ಎಂದು ಕಾಂಗ್ರೆಸ್ ಪಕ್ಷ ಪ್ರಧಾನಿಗೆ ಎಚ್ಚರಿಕೆಯನ್ನು ನೀಡಿದೆ.

      PM Modi Gets Emotional While Reviewing Covid 19 Situation, KPCC Tweet

      "ಸದಾ ಜನತೆಯ ದಿಕ್ಕುತಪ್ಪಿಸುತ್ತಲೇ ಬಂದಿರುವ ಬಿಜೆಪಿ ತನ್ನ #Foolkit ಮೂಲಕ ಕಾಂಗ್ರೆಸ್ ಮೋದಿ ಹೆಸರು ಕೆಡಿಸಲು ಯತ್ನಿಸಿತ್ತು ಎಂದು ಸುಳ್ಳು ಬಿತ್ತರಿಸಿತ್ತು. ಈಗಾಗಲೇ ಕೆಟ್ಟಿರುವ ಸ್ವಯಂಘೋಷಿತ ನಕಲಿ ವಿಶ್ವನಾಯಕನ ಹೆಸರು ಕೆಡಿಸಲು ಅವಕಾಶವೆಲ್ಲಿದೆ!! ಬಿಜೆಪಿಗೆ ಜನರ ಪ್ರಾಣದ ಚಿಂತೆಗಿಂತ, ಕೆಡುತ್ತಿರುವ ಹೆಸರಿನ ಬಗ್ಗೆಯೇ ಚಿಂತೆಯಾಗಿದೆ!" ಎಂದು ಕೆಪಿಸಿಸಿ ತನ್ನ ಟ್ವೀಟ್ ನಲ್ಲಿ ಹೇಳಿದೆ.

      "ಕರೋನಾ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿ ಛಿಮಾರಿ ಹಾಕಿಸಿಕೊಳ್ಳುತ್ತಿರುವ ನಕಲಿ 'ವಿಶ್ವನಾಯಕ'ನ ಹೆಸರು ಉಳಿಸಲು #Toolkit ಎಂಬ ಅಡ್ಡದಾರಿ ಹಿಡಿದಿದ್ದ @BJP4India
      ಪಕ್ಷದ ಸಂಬಿತ್ ಪಾತ್ರಾ ಎಂಬ ಟ್ವೀಟ್‌ನ್ನು 'ದಿಕ್ಕುತಪ್ಪಿಸುವುದಾಗಿದೆ' ಎಂದು ಟ್ವಿಟರ್ ಗುರುತಿಸಿದೆ. ಕಾಂಗ್ರೆಸ್ ತೇಜೋವಧೆಯ ಪ್ರಯತ್ನಕ್ಕೆ ಸೋಲಾಗಿದೆ"ಎಂದು ಕಾಂಗ್ರೆಸ್ ಅಭಿಪ್ರಾಯ ಪಟ್ಟಿದೆ.

      ತಾವು ಪ್ರತಿನಿಧಿಸುವ ವಾರಣಾಸಿ ಲೋಕಸಭಾ ಕ್ಷೇತ್ರದ ಮಂಚೂಣಿ ಆರೋಗ್ಯ ಕಾರ್ಯಕರ್ತರೊಂದಿಗೆ ಶುಕ್ರವಾರ (ಮೇ 21) ವಿಡಿಯೋ ಸಂವಾದದ ವೇಳೆ, ಜನರು ಕೊರೊನಾಗೆ ಬಲಿಯಾಗುತ್ತಿರುವುದರ ಬಗ್ಗೆ ಪ್ರಸ್ತಾಪಿಸಿದಾಗ ಮೋದಿ ಗದ್ಗದಿತರಾಗಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+