ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕಿತರ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಆಡಿದ ಮುತ್ತಿನಂತ ಮಾತು

|
Google Oneindia Kannada News

ಎಂತೆಂತಹ ರೋಗಗಳು ಈ ಭೂಮಿಯಲ್ಲಿ ಬಂದು ಹೋಗಿದ್ದರೂ, ಕೊರೊನಾ ವೈರಸ್ ಸೃಷ್ಟಿಸಿದ ಆವಾಂತರ ಅಷ್ಟಿಷ್ಟಲ್ಲ. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ, ದಿಗಿಲುಗೊಳ್ಳುವಂತದ್ದು ಏನೂ ಇಲ್ಲ ಎಂದರೂ, ಸಾರ್ವಜನಿಕರ ಭಯ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೇ ಇದೆ.

Recommended Video

Indiaದಲ್ಲಿ Corona ಕಾಟ ಆಗಸ್ಟ್ ತಿಂಗಳಲ್ಲಿ ತಾರಕಕ್ಕೇರಲಿದೆ! | Oneindia Kannada

ಕೊರೊನಾ ಸೋಂಕಿತರ ಮೃತ ಪಟ್ಟರೆ, ಗೌರವಯುತವಾಗಿ ಶವಸಂಸ್ಕಾರ ನಡೆಯದ ಉದಾಹರಣೆಗಳು ಸಾಕಷ್ಟು ನೋಡಿದ್ದಾಗಿದೆ. ಹಿಂದೂ ರುಧ್ರಭೂಮಿಯಲ್ಲಿ ಹೆಣ ಸುಡಲು/ಹೂಳಲು ಸ್ಥಳೀಯರು ವಿರೋಧಿಸಿದ್ದನ್ನೂ ಕೇಳಿದ್ದೇವೆ.

ನಿರೀಕ್ಷಿತ ಯಶಸ್ಸನ್ನು ಪಡೆಯದ 'ಸಂಡೇ ಕರ್ಫ್ಯೂ': ಇಲ್ಲಿದೆ ಕಾರಣ, ಅಂಕಿಅಂಶನಿರೀಕ್ಷಿತ ಯಶಸ್ಸನ್ನು ಪಡೆಯದ 'ಸಂಡೇ ಕರ್ಫ್ಯೂ': ಇಲ್ಲಿದೆ ಕಾರಣ, ಅಂಕಿಅಂಶ

ಇದು ಒಂದು ಕಡೆಯಾದರೆ, ಕೊರೊನಾ ಸೋಂಕಿತರನ್ನು ಅಪರಾಧಿಗಳ ರೀತಿ ಕಾಣುವುದು, ನಿಂದನೆಗೆ ಗುರಿಪಡಿಸುವುದು, ಅಸ್ಪರ್ಶ್ಯರಂತೆ ಕಾಣುವುದೂ ನಡೆಯುತ್ತಿದೆ. ಧೈರ್ಯ ತುಂಬಿ ಕಳಕಳಿ ತೋರಬೇಕಾದವರು, ಅವಹೇಳನ ಮಾಡುವಂತಹ ಘಟನೆಗಳು ರಾಜ್ಯದ ಉದ್ದಗಲಕ್ಕೂ ನಡೆಯುತ್ತಿದೆ.

ಭಾರತದಲ್ಲಿ ಕೊವಿಡ್ ಸಾವಿನ ಪ್ರಮಾಣ ಇಳಿಕೆ: ಆರೋಗ್ಯ ಇಲಾಖೆಭಾರತದಲ್ಲಿ ಕೊವಿಡ್ ಸಾವಿನ ಪ್ರಮಾಣ ಇಳಿಕೆ: ಆರೋಗ್ಯ ಇಲಾಖೆ

ಇನ್ನೊಂದು ಕಡೆ, ಕಂಟೇನ್ಮೆಂಟ್ ಝೋನ್ ನಲ್ಲಿರುವ ಮನೆಗಳ ಎದುರು ಸರಕಾರ ಹಾಕುತ್ತಿರುವ ಫಲಕಗಳು. ಈ ಸಂಬಂಧ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಬಿಎಸ್ವೈ ಸರಕಾರ ಮತ್ತು ಸ್ಥಳೀಯ ಆಡಳಿತಕ್ಕೆ ಕಿವಿಹಿಂಡಿದ್ದಾರೆ.

ಸೋಂಕಿತರ ಮನೆಗಳ ಎದುರು ಹಾಕುತ್ತಿರುವ ಎಚ್ಚರಿಕೆ ಫಲಕ

#COVID19 ಸೋಂಕಿತರ ಮನೆಗಳ ಎದುರು ಸ್ಥಳೀಯ ಆಡಳಿತ ಹಾಕುತ್ತಿರುವ ಎಚ್ಚರಿಕೆ ಫಲಕ ನವಯುಗದ ಸಾಮಾಜಿಕ ತಾರಮ್ಯ, ಅಸ್ಪೃಶ್ಯತೆಗೆ ಕಾರಣವಾಗುತ್ತಿದೆ. ಕುಟುಂಬಗಳನ್ನು ಸಮಾಜ ತಿರಸ್ಕಾರದಿಂದ ನೋಡುವಂತೆ ಮಾಡುತ್ತಿದೆ. ಸೋಂಕಿನ ನಂತರವೂ ವ್ಯಕ್ತಿ, ಕುಟುಂಬ ಗೌರವಯುತವಾಗಿ ಬದುಕಬೇಕು. ಹಾಗಾಗಿ ಫಲಕ ಹಾಕುವ ಪರಿಪಾಠವನ್ನು ಸರ್ಕಾರ ಕೂಡಲೇ ನಿಲ್ಲಿಸಬೇಕು‌.

ಮನೆಗಳ ಎದುರು ಫಲಕ ಹಾಕಿ ಅಸ್ಪೃಶ್ಯತೆ

ಮನೆಗಳ ಎದುರು ಫಲಕ ಹಾಕಿ ಅಸ್ಪೃಶ್ಯತೆ

ಮನೆಗಳ ಎದುರು ಫಲಕ ಹಾಕಿ ಅಸ್ಪೃಶ್ಯತೆ ಸೃಷ್ಟಿಸುವ ಬದಲು ಆರೋಗ್ಯ ಕಾರ್ಯಕರ್ತರನ್ನು ಅವರ ಮನೆಗೆ ಕಳುಹಿಸಿ ಧೈರ್ಯ, ಜಾಗೃತಿ, ಅರಿವು ಮೂಡಿಸಬೇಕು‌. ಮನೆಯಿಂದ ಹೊರಬಾರದಂತೆ ಅವರ ಜವಾಬ್ದಾರಿ ತಿಳಿಸಿಕೊಡಬೇಕು. ಅದು ಬಿಟ್ಟು ಇಂಥ ಅಪಮಾನಿಸುವ ಪರಿಪಾಠ ಬೇಡ. ಈ ನಿಟ್ಟಿನಲ್ಲಿ @CMofKarnataka @BSYBJP ಗಮನ ಹರಿಸಲಿ ಎಂದು ಆಗ್ರಹಿಸುತ್ತೇನೆ‌.

ಮೆಡಿಕಲ್ ಕಾಲೇಜುಗಳ ಲೈಸನ್ಸ್ ರದ್ದು ಮಾಡುವ ಬೆದರಿಕೆ ಹಾಕುವುದು ಸರಿಯಲ್ಲ

ಮೆಡಿಕಲ್ ಕಾಲೇಜುಗಳ ಲೈಸನ್ಸ್ ರದ್ದು ಮಾಡುವ ಬೆದರಿಕೆ ಹಾಕುವುದು ಸರಿಯಲ್ಲ

ಚಿಕಿತ್ಸೆ ನಿರಾಕರಿಸುವುದು ಯಾವುದೇ ಆಸ್ಪತ್ರೆಯ ತಪ್ಪು. ಆದರೆ ಅದೇ ಕಾರಣಕ್ಕೆ ಸರ್ಕಾರ ಮೆಡಿಕಲ್ ಕಾಲೇಜುಗಳ ಲೈಸನ್ಸ್ ರದ್ದು ಮಾಡುವ ಬೆದರಿಕೆ ಹಾಕುವುದು ಸರಿಯಲ್ಲ. ಆರೋಗ್ಯದ ಈ ತುರ್ತುಪರಿಸ್ಥಿತಿಯಲ್ಲಿ ಅದರಿಂದ ಲಾಭವೂ ಇಲ್ಲ. ಅಷ್ಟಕ್ಕೂ ಮೆಡಿಕಲ್ ಕಾಲೇಜುಗಳ ಲೈಸನ್ಸ್ ರದ್ದು ಮಾಡುವ ಅಧಿಕಾರ ಇರುವುದು MCIಗೆ. ಸರ್ಕಾರಕಲ್ಲ ನೆನಪಿರಲಿ.

ಕೊರೊನಾ ವೈರಸ್ ವಿರುದ್ಧ ಸಾಂಘಿಕ ಹೋರಾಟ

ಕೊರೊನಾ ವೈರಸ್ ವಿರುದ್ಧ ಸಾಂಘಿಕ ಹೋರಾಟ

ಈ ಪರಿಸ್ಥಿಯಲ್ಲಿ ಮೆಡಿಕಲ್ ಕಾಲೇಜುಗಳ ಮೇಲೆ ರೋಷಾವೇಶ ತೋರುವುದನ್ನು ಬಿಟ್ಟು ಅವರನ್ನು ವಿಶ್ವಾಸಕ್ಕೆ ಪಡೆದುಕೊಂಡು ಅವರ ಸೇವೆ ಪಡೆಯುವತ್ತ ಸರ್ಕಾರ ಗಮನಹರಿಸಲಿ‌. ಅವರ ಅಗತ್ಯಗಳನ್ನು ಪೂರೈಸುವತ್ತ ಗಮನ ಹರಿಸಲಿ. ಈ ಮೂಲಕ ಕೊರೊನಾ ವೈರಸ್ ವಿರುದ್ಧ ಸಾಂಘಿಕ ಹೋರಾಟ ನಡೆಸಲಿ ಎಂದು ನಾನು ಒತ್ತಾಯಿಸುತ್ತೇನೆ‌‌.

English summary
Please Do Not Put Borad Infront Of Covid 19 Patients House: HD Kumaraswamy Tweet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X