ಪೊಸಡಿಗುಂಪೆ ಬೆಟ್ಟಕ್ಕೆ ಬಂದು ಸೂರ್ಯಾಸ್ತ ನೋಡಿ

By: ಐಸಾಕ್ ರಿಚರ್ಡ್, ಮಂಗಳೂರು
Subscribe to Oneindia Kannada

ಕರಾವಳಿ ಭಾಗದ ಅತ್ಯಂತ ಸುಂದರ ತಾಣಗಳಲ್ಲಿ ಪೊಸಡಿಗುಂಪೆಯೂ ಒಂದು. ಪ್ರಕೃತಿಯ ಸೊಬಗಿಗೆ ಕಲಶ ಪ್ರಾಯದಂತಿದೆ ಪೊಸಡಿಗುಂಪೆ ಬೆಟ್ಟ. ಸಂಜೆಯ ತಂಗಾಳಿಯಲ್ಲಿ ಸೂರ್ಯಾಸ್ತವನ್ನು ಸವಿಯುತ್ತಾ ದೂರದ ಸಮುದ್ರದ ಅಬ್ಬರವನ್ನು ಕೇಳುತ್ತಾ ಇಲ್ಲಿ ಕಾಲ ಕಳೆಯಬಹುದು.

ಜಿಲ್ಲೆಯ ಅತ್ಯಂತ ಎತ್ತರದ ಗಿರಿಶಿಖರ ಪೊಸಡಿಗುಂಪೆ. ಪ್ರಕೃತಿ ಮಾತೆ ಅತ್ಯಂತ ಶೃಂಗರಯುತವಾಗಿ ಕಂಗೊಳಿಸುವ ಪರಿಸರವಿದು. ಚಾರಣಿಗರಿಗೆ ಚಾರಣಧಾಮವಾಗಿ, ಕವಿ ಕಲಾವಿದರಿಗೆ ಸ್ಫೂರ್ತಿಯಾಗಿ, ಧರ್ಮ ಚಿಂತಕರಿಗೆ ಆಧ್ಯಾತ್ಮದ ಸವಿಯನ್ನು ನೀಡುವ ಈ ಶಿಖರ, ಸಿನಿಮಾ ಚಿತ್ರೀಕರಣಕ್ಕೂ ಸೂಕ್ತವಾಗಿದೆ. [ಸೋಮೇಶ್ವರದಲ್ಲಿ ಸೂರ್ಯಾಸ್ತದ ಸೊಬಗು ನೋಡಿ!]

kasaragod

ಈ ಪ್ರದೇಶ ಕ್ರಿ.ಶ. 7ರಿಂದ 15ನೇ ಶತಮಾನದವರೆಗೆ ಶೈವ ಸಂಪ್ರದಾಯದ ಸಾಧು ಸಂತರ ಆಧ್ಯಾತ್ಮಿಕ ಪ್ರಯೋಗ ಶಾಲೆಯಾಗಿತ್ತು ಎನ್ನುತ್ತದೆ ಇತಿಹಾಸ. ಇದಕ್ಕೆ ಪುಷ್ಠಿ ನೀಡುವ ಅನೇಕ ಗುಹೆಗಳು, ವೃತ್ತಾಕಾರ, ಗೋಳಾಕಾರದ ರಚನೆಗಳು ಇಲ್ಲಿವೆ. [ಕೋಸಳ್ಳಿ ಜಲಪಾತಕ್ಕೆ ಹೋಗಿಬನ್ನಿ]

ವಿವಿಧ ಗಾತ್ರದ ಪ್ರಾಚೀನ ಗುಹೆಗಳು, ಸುರಂಗಗಳು, ಬಾವಿಗಳಿವೆ. ಶೇಡಿ ಗುಹೆಯು ಮಹತ್ವದ ಧಾರ್ಮಿಕ ಸ್ಥಳವಾಗಿದೆ. ವರ್ಷಕ್ಕೊಮ್ಮೆ ತೀರ್ಥ ಅಮಾವಾಸ್ಯೆಯ ಮುಂಜಾನೆ ಗುಹೆಯಿಂದ ಪವಿತ್ರ ವಿಭೂತಿ ಸಂಗ್ರಹಿಸಲಾಗುತ್ತದೆ. ಗುಡ್ಡದ ತುದಿಯಲ್ಲಿ ನಿಂತು ಪೂರ್ವಕ್ಕೆ ತಿರುಗಿದಾಗ ಕುದುರೆಮುಖ, ಕುಮಾರ ಪರ್ವತ ಕಾಣುತ್ತದೆ. ಪಶ್ಚಿಮಕ್ಕೆ ತಿರುಗಿದರೆ ಅರಬ್ಬೀ ಸಮುದ್ರ ಕಣ್ಣಿಗೆ ಮುದ ನೀಡುತ್ತದೆ. [ಬೇಕಲ ಕೋಟೆ ನೋಡಿ ಬನ್ನಿ]

posadigumpe

ಪ್ರಯಾಣ ಹೇಗೆ? : ಪೊಸಡಿಗುಂಪೆ ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿದೆ. ಮಂಗಳೂರಿನಿಂದ ಇಲ್ಲಿಗೆ 50 ಕಿ.ಮೀ.ದೂರವಾಗುತ್ತದೆ. ಉಡುಪಿ ಭಾಗದಿಂದ ಬರುವವರು ಮಂಗಳೂರಿನ ಮೂಲಕ ಪೊಸಡಿಗುಂಪೆ ತಲುಪಬಹುದು.

ಮಂಜೇಶ್ವರದವರೆಗೆ ರೈಲು, ಬಸ್ ಮೂಲಕ ಸಾಗಿ ಅಲ್ಲಿಂದ ಖಾಸಗಿ ವಾಹನದಲ್ಲಿ ಬೆಟ್ಟದ ಬುಡದವರೆಗೆ ಹೋಗಬಹುದು. ಬೆಟ್ಟ ಏರಲು 1 ರಿಂದ 2 ಕಿ.ಮೀ ನಡೆಯುವುದು ಅನಿವಾರ್ಯ. ಖಾಸಗಿ ವಾಹನದಲ್ಲಿ ಹೋಗುವವರು ಉಡುಪಿ- ಮಂಗಳೂರು- ಕಾಸರಗೋಡು ಹೆದ್ದಾರಿಯಲ್ಲಿ ಸಾಗಿ ಪ್ರವಾಸಿ ತಾಣವನ್ನು ತಲುಪಬಹುದು.

posadigumpe hill

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Posadigumpe is a hill located in Kasaragod district. Posadigumpe hill perfect tourist destination for trekking.
Please Wait while comments are loading...