ಟಿಪ್ಪು ಜಯಂತಿ ಆಚರಣೆ ಪ್ರಶ್ನಿಸಿ ಹೈಕೋರ್ಟಿನಲ್ಲಿ ಪಿಐಎಲ್
ಬೆಂಗಳೂರು, ನವೆಂಬರ್ 6: ಟಿಪ್ಪು ಜಯಂತಿ ಸಂಬಂಧ ರಾಜ್ಯದಾದ್ಯಂತ ಅಲ್ಲೋಲ ಕಲ್ಲೋಲ ಜಾರಿಯಲ್ಲಿರುವ ಸಂದರ್ಭದಲ್ಲೇ ಹೈಕೋರ್ಟ್ ನಲ್ಲಿ ಈ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
ಕೊಡಗು ನಿವಾಸಿ ಪವನ್ ಚಂದ್ರ ಎಂಬವರು ಈ ಪಿಐಎಲ್ ಸಲ್ಲಿಸಿದ್ದು, ಒಂದು ಭಾಗದ ಜನರ ಭಾವನೆಗೆ ಧಕ್ಕೆಯಾಗುವಾಗ ಟಿಪ್ಪು ಜಯಂತಿ ಆಚರಿಸುವ ಜರೂರತ್ತು ಏನು ಎಂದು ಪ್ರಶ್ನಿಸಿದ್ದಾರೆ. ಇದರಿಂದ ಕೋಮು ಭಾವನೆಗೂ ಧಕ್ಕೆಯಾಗುತ್ತದೆ ಎಂದು ಅರ್ಜಿಯಲ್ಲಿ ಅವರು ಹೇಳಿದ್ದಾರೆ.

ಈ ಸಂದರ್ಭ ಯಾಕೆ ಕಾರ್ಯಾಂಗದ ನಿರ್ಧಾರಗಳಲ್ಲಿ ಮೂಗು ತೂರಿಸುತ್ತೀರಿ ಎಂದು ಹೈಕೋರ್ಟ್ ಅರ್ಜಿದಾರರನ್ನು ಪ್ರಶ್ನಿಸಿದೆ.
ನಂತರ ಅರ್ಜಿದಾರರು ಯಾವ ನಿಧಿಯ ಹಣ ಖರ್ಚು ಮಾಡಿ ಈ ಜಯಂತಿ ಆಚರಣೆ ಮಾಡುತ್ತಿದೆ ಸರಕಾರ ಎಂದೂ ಪ್ರಶ್ನಿಸಿದ್ದಾರೆ. ಬಳಿಕ ಕೋರ್ಟ್ ಮುಂದಿನ ವಿಚಾರಣೆಯನ್ನು ನವೆಂಬರ್ 7ಕ್ಕೆ ಮುಂದೂಡಿದೆ.












Click it and Unblock the Notifications